ರೈಲು ಸಂಚಾರ ರದ್ದು ವೇಳಾಪಟ್ಟಿ ಬದಲು

7

ರೈಲು ಸಂಚಾರ ರದ್ದು ವೇಳಾಪಟ್ಟಿ ಬದಲು

Published:
Updated:

ಬೆಂಗಳೂರು: ಶೋರ್ನೂರ್‌, ಕೋಯಿಕ್ಕೋಡ್‌, ಎರ್ನಾಕುಲಂ ಜಂಕ್ಷನ್‌, ಕೊಟ್ಟಾಯಂ, ಕಾಯಂಕುಳಂ ಮತ್ತು ಪಾಲಕ್ಕಾಡ್‌ ರೈಲ್ವೆ ವಿಭಾಗಗಳ ಪ್ರದೇಶದಲ್ಲಿ ಭಾರೀ ಮಳೆ, ಭೂಕುಸಿತದ ಕಾರಣದಿಂದ ಈ ಮಾರ್ಗಗಳಲ್ಲಿ ಸಂಚರಿಸುವ ಕೆಲವು ರೈಲುಗಳ ಸಂಚಾರವನ್ನು ಭಾಗಶಃ ಹಾಗೂ ಕೆಲವು ಗಾಡಿಗಳ ಸಂಚಾರವನ್ನು ಪೂರ್ಣ ಪ್ರಮಾಣದಲ್ಲಿ ರದ್ದುಗೊಳಿಸಲಾಗಿದೆ.

ರದ್ದಾದ ರೈಲುಗಳು

ಗಾಡಿ ಸಂಖ್ಯೆ 16526: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದಿಂದ ಕನ್ಯಾಕುಮಾರಿಗೆ ತೆರಳುವ ಎಕ್ಸ್‌ಪ್ರೆಸ್‌ ರೈಲು.

16527: ಯಶವಂತಪುರ– ಕಣ್ಣೂರು ಎಕ್ಸ್‌ಪ್ರೆಸ್‌

16528: ಕಣ್ಣೂರು - ಯಶವಂತಪುರ ಎಕ್ಸ್‌ಪ್ರೆಸ್‌

16511/16513: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದಿಂದ ಕಣ್ಣೂರು– ಕಾರವಾರಕ್ಕೆ ತೆರಳುವ ಎಕ್ಸ್‌ಪ್ರೆಸ್‌ ರೈಲುಗಳು.

ಭಾಗಶಃ ರದ್ದಾದ ರೈಲುಗಳು

ಗಾಡಿ ಸಂಖ್ಯೆ 12677: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದಿಂದ ಎರ್ನಾಕುಲಂಗೆ ತೆರಳುವ ಎಕ್ಸ್‌ಪ್ರೆಸ್‌ ರೈಲು ಕೊಯಮತ್ತೂರು– ಎರ್ನಾಕುಲಂ ಮಧ್ಯೆ ಸಂಚರಿಸುವುದಿಲ್ಲ. 

ಗಾಡಿ ಸಂಖ್ಯೆ 12678: ಎರ್ನಾಕುಲಂನಿಂದ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣಕ್ಕೆ ಬರುವ ರೈಲು ಕೊಯಮತ್ತೂರು– ಬೆಂಗಳೂರು ಮಧ್ಯೆ ಸಂಚರಿಸುವುದಿಲ್ಲ.  

ಸಂಚಾರ ವೇಳೆ ಬದಲಾವಣೆ

ಕುಪ್ಪಂ– ಬಿಸನಟ್ಟಂ – ವರದಾಪುರ ಸೆಕ್ಷನ್‌ಗಳ ಮಾರ್ಗಗಳಲ್ಲಿ ದುರಸ್ತಿ ಕಾರ್ಯದ ಪ್ರಯುಕ್ತ ಇಲ್ಲಿ ಸಂಚರಿಸುವ ರೈಲುಗಳ ವೇಳಾಪಟ್ಟಿಯನ್ನು ಬದಲಾಯಿಸಲಾಗಿದೆ. ಆ. 18ರಿಂದ 2019ರ ಫೆ. 11ರವರೆಗೆ ಬದಲಾದ ವೇಳೆಯಲ್ಲಿ ರೈಲುಗಳು ಸಂಚರಿಸಲಿವೆ.

ಗಾಡಿ ಸಂಖ್ಯೆ 66544: ಬೆಂಗಳೂರು– ಕುಪ್ಪಂ ಮೆಮು ರೈಲು ಬೆಳಿಗ್ಗೆ 11.45ರ ಬದಲಾಗಿ 11.30ಕ್ಕೆ ನಗರದಿಂದ ಹೊರಡಲಿದೆ. ಈ ವೇಳಾಪಟ್ಟಿ 2019ರ ಜ. 11ರವರೆಗೆ ಅನ್ವಯವಾಗಲಿದೆ.  

ಗಾಡಿ ಸಂಖ್ಯೆ 66543: ಕುಪ್ಪಂನಿಂದ ಬೆಂಗಳೂರಿಗೆ ಬರುವ ಮೆಮು ರೈಲು ಕುಪ್ಪಂನಿಂದ ಮಧ್ಯಾಹ್ನ 2.45ರ ಬದಲಾಗಿ 2ಕ್ಕೆ ಹೊರಡಲಿದೆ.

ಗಾಡಿ ಸಂಖ್ಯೆ 56261: ಅರಕ್ಕೋಣಂ– ಬೆಂಗಳೂರು ಪ್ಯಾಸೆಂಜರ್‌ ರೈಲು ಕುಪ್ಪಂನಿಂದ ಮಧ್ಯಾಹ್ನ 1.50ಕ್ಕೆ ಹೊರಡಲಿದೆ. 

ಹೊಸ ಕೋಚ್‌ಗಳ ಅಳವಡಿಕೆ

ನಗರದಿಂದ ಹೊರಡುವ ಕೆಲವು ರೈಲುಗಳಿಗೆ ಸಾಂಪ್ರದಾಯಿಕ ಬೋಗಿಗಳ ಬದಲಿಗೆ ಲಿಂಕ್‌ ಹೋಫ್‌ಮನ್‌ ಬುಷ್‌ (ಎಲ್‌ಎಚ್‌ಬಿ) ಬೋಗಿಗಳನ್ನು ಅಳವಡಿಸಲಾಗುವುದು ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಗಾಡಿ ಸಂಖ್ಯೆ 16587/16588: ಯಶವಂತಪುರ– ಬಿಕಾನೇರ್‌ ಮಧ್ಯೆ ವಾರಕ್ಕೊಮ್ಮೆ ಸಂಚರಿಸುವ ಎಕ್ಸ್‌ಪ್ರೆಸ್‌ ರೈಲುಗಳು ಆ. 19ರಿಂದ ಎಲ್‌ಎಚ್‌ಬಿ ಬೋಗಿಗಳನ್ನು ಅಳವಡಿಸಿಕೊಂಡು ಸಂಚರಿಸಲಿವೆ. ಬೆಂಗಳೂರಿನಲ್ಲಿ ಆ. 19ರಂದು ಪ್ರಯಾಣ ಆರಂಭವಾಗಲಿದೆ. ಆ. 21ರಿಂದ ಬಿಕಾನೇರ್‌ನಿಂದ ಹೊಸ ಕೋಚ್‌ಗಳನ್ನು ಅಳವಡಿಸಿಕೊಂಡು ಸಂಚರಿಸಲಿವೆ.  

ಗಾಡಿ ಸಂಖ್ಯೆ 16543/16544: ಯಶವಂತಪುರ– ಹುಬ್ಬಳ್ಳಿ ಎಕ್ಸ್‌ಪ್ರೆಸ್‌ ರೈಲುಗಳು ಆ. 24ರಿಂದ ಎಲ್‌ಎಚ್‌ಬಿ ಬೋಗಿಗಳನ್ನು ಅಳವಡಿಸಿಕೊಂಡು ಸಂಚರಿಸಲಿವೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !