ಹೈದರಾಬಾದ್‌ವರೆಗೆ ಬಂದು ಉಮೇಶ್ ಜಾಧವ್‌ ವಾಪಸ್‌?

7
ಶಾಸಕರ ಭವನದ ಕೊಠಡಿ ಬಾಗಿಲಿಗೆ ಪತ್ರ ಅಂಟಿಸಿದರು

ಹೈದರಾಬಾದ್‌ವರೆಗೆ ಬಂದು ಉಮೇಶ್ ಜಾಧವ್‌ ವಾಪಸ್‌?

Published:
Updated:
Prajavani

ಚಿಂಚೋಳಿ (ಕಲಬುರ್ಗಿ ಜಿಲ್ಲೆ): ‘ನಿಮಗೆ ಯಾವುದೇ ತೊಂದರೆ ಆಗದಂತೆ ಹಾಗೂ ಸ್ವಾಭಿಮಾನಕ್ಕೆ ಧಕ್ಕೆ ಬರದಂತೆ ನೋಡಿಕೊಳ್ಳುವುದು ನನ್ನ ಜವಾಬ್ದಾರಿ. ನೀವು ಬನ್ನಿ’ ಎಂಬ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ ಅವರ ಕರೆ ನಂಬಿ ಶಾಸಕ ಉಮೇಶ ಜಾಧವ ಮುಂಬೈನಿಂದ ಹೈದರಾಬಾದ್‌ವರೆಗೆ ಬಂದು ಮತ್ತೆ ಮುಂಬೈಗೆ ವಾಪಸಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಉಮೇಶ ಜಾಧವ ಬುಧವಾರ ಬೆಳಿಗ್ಗೆ ತಮ್ಮನ್ನು ಸಂಪರ್ಕಿಸಿದ್ದ ಖಂಡ್ರೆ ಅವರೊಂದಿಗೆ ಅಳಲು ತೋಡಿಕೊಂಡಿದ್ದರು. ಖಂಡ್ರೆ ಅವರ ಮನವಿ ಮೇರೆಗೆ ಮುಂಬೈನಿಂದ ಸಂಜೆ 4 ಗಂಟೆಗೆ ಹೈದರಾಬಾದ್‌ಗೆ ಬಂದಿದ್ದರು ಎಂದು ಗೊತ್ತಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !