ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಚಾರಕ್ಕೆ ಸೇನೆ ಹೆಸರು ಬಳಕೆ; ಕೆಪಿಸಿಸಿ ದೂರು

Last Updated 15 ಮಾರ್ಚ್ 2019, 19:51 IST
ಅಕ್ಷರ ಗಾತ್ರ

ಬೆಂಗಳೂರು: ‘ಬಾಲಾಕೋಟ್‌ ಉಗ್ರರ ಮೇಲೆ ಭಾರತೀಯ ವಾಯುಪಡೆ ನಡೆಸಿದದಾಳಿಯನ್ನುಚುನಾವಣಾ ಪ್ರಚಾರಕ್ಕೆಬಳಸಿಕೊಳ್ಳುತ್ತಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು’ ಎಂದು ಒತ್ತಾಯಿಸಿ ಕೆಪಿಸಿಸಿ ಮಾಧ್ಯಮ ಸಂಯೋಜಕ ನಟರಾಜ್‌ಗೌಡ ಹಲಸೂರು ಗೇಟ್ ಠಾಣೆಗೆಗುರುವಾರ ದೂರು ಕೊಟ್ಟಿದ್ದಾರೆ.

‘ಚಕ್ರವರ್ತಿ ಮಿಥುನ್, ನಮೋ ಸುನಾಮಿ ಹಾಗೂ ಟೀಮ್ ಮೋದಿ ಅಡ್ಮಿನ್ ಹೆಸರಿನ ಫೇಸ್‌ಬುಕ್ ಪೇಜ್‌ಗಳಲ್ಲಿ ಸೇನೆಯ ಹೆಸರನ್ನು ಬಳಸಿಕೊಂಡು ಬಿಜೆಪಿ ಪರ ಪ್ರಚಾರ ಮಾಡಲಾಗುತ್ತಿದೆ. ಈ ಮೂಲಕಆರೋಪಿಗಳು ಚುನಾವಣಾ ನೀತಿ ಸಂಹಿತಿಯನ್ನು ಉಲ್ಲಂಘಿಸಿದ್ದಾರೆ. ತಕ್ಷಣ ಆ ಖಾತೆಗಳನ್ನು ಬ್ಲಾಕ್ ಮಾಡಿಸಿ, ತಪ್ಪಿತಸ್ಥರನ್ನು ಬಂಧಿಸಬೇಕು’ ಎಂದು ಕೋರಿದ್ದಾರೆ.

ಏನು ಸಂದೇಶ: ‘ಮತಯಂತ್ರದಲ್ಲಿ ನೀವುಪ್ರಧಾನಿನರೇಂದ್ರಮೋದಿಗೆ ಹಾಕುವ ಮತ, ಸೇನೆಗೆ ರಫೇಲ್ ವಿಮಾನಗಳನ್ನು ತಂದುಕೊಡುತ್ತದೆ ಎಂಬುದನ್ನು ಮರೆಯದಿರಿ. ಕಾಂಗ್ರೆಸ್ ಮತ್ತು ಪ್ರತಿಪಕ್ಷದವರ ಭಾರತ ವಿರೋಧಿ ಹೇಳಿಕೆಗಳಿಗೆ ಪಾಕಿಸ್ತಾನವೇ ಉತ್ತರಸುತ್ತಿದೆ.ನೀವುವಿಂಗ್ಕಮಾಂರ್‌ ಅಭಿನಂದನ್ಆಗಬೇಕೆ?ಇವಿಎಂನಲ್ಲಿ ಕಮಲದಚಿಹ್ನೆಯನ್ನುಒತ್ತಿ‌ ಏರ್‌ಸ್ಟ್ರೈಕ್‌ನ ಅನುಭವ ಪಡೆಯಿರಿ’ ಎಂಬ ಸಂದೇಶ ಹರಿಬಿಟ್ಟಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT