ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಫೋನ್‌ಇನ್ | ಜನರ ಪ್ರಶ್ನೆಗಳಿಗೆ ವಸತಿ ಸಚಿವ ವಿ.ಸೋಮಣ್ಣ ಉತ್ತರ

ಅಕ್ಷರ ಗಾತ್ರ

ಬೆಂಗಳೂರು:‘ಪ್ರಜಾವಾಣಿ’ ಕಚೇರಿಯಲ್ಲಿ ಗುರುವಾರ ನಡೆದ ಫೋನ್‌ಇನ್‌ ಕಾರ್ಯಕ್ರಮದಲ್ಲಿ ವಸತಿ ಸಚಿವ ವಿ.ಸೋಮಣ್ಣ ರಾಜ್ಯದ ಜನರ ಪ್ರಶ್ನೆಗಳಿಗೆ ಉತ್ತರಿಸಿದರು.ವಸತಿ ಯೋಜನೆಯ ಬಗ್ಗೆ ಸಮಸ್ಯೆಗಳ ಬಗ್ಗೆ ರಾಜ್ಯದ ವಿವಿಧೆಡೆಗಳಿಂದ ಸಾಕಷ್ಟು ಜನರು ಕರೆ ಮಾಡಿ, ತಮ್ಮ ಅಹವಾಲು ಹೇಳಿಕೊಂಡರು.

ಫೇಸ್‌ಬುಕ್‌ ಲೈವ್‌ನಲ್ಲಿ ಮಾತನಾಡಿದ ಸೋಮಣ್ಣ, ‘ಕೋವಿಡ್–19ರಿಂದಾಗಿಜನರ ಬದುಕು ಏರುಪೇರಾಗಿದೆ. ಬಡವರು ಕಟ್ಟಿಕೊಂಡಿರುವ ಮನೆಗಳಿಗೆಹಣ ಬಿಡುಗಡೆಯಾಗದಿರುವ ನೋವು ನನಗೂ ಅರ್ಥವಾಗಿದೆ.ಇಂದು ಸಾಕಷ್ಟು ಜನರ ಪ್ರಶ್ನೆಗಳಿಗೆ ಉತ್ತರಿಸುವ, ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಪರಿಹರಿಸುವ ಕೆಲಸ ಮಾಡಿದೆ.ಮತ್ತೊಮ್ಮೆ ಇಲ್ಲಿಗೆ ಬರ್ತೀನಿ. ಜನರ ಜೊತೆಗೆ ಮಾತನಾಡುತ್ತೇನೆ’ ಎಂದರು.

ಸರ್ವರಿಗೂ ಸೂರು ಸಿಗಬೇಕು ಎನ್ನುವುದು ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರದ ಆಶಯ. ಅದಕ್ಕೆ ಬದ್ಧವಾಗಿ ನಮ್ಮ ಇಲಾಖೆ ಕೆಲಸ ಮಾಡುತ್ತಿದೆ ಎಂದು ವಿವರಿಸಿದರು.

* ಮನೆ ಕಟ್ಟಲು ದುಡ್ಡು ಬಿಡುಗಡೆ ಸಮಸ್ಯೆ ಆಗಿದೆ,ಮಹೇಶ್‌, ಜೇವರ್ಗಿ

ಸೋಮಣ್ಣ: ಇನ್ನೊಂದು ವಾರದಲ್ಲಿ ಅನುದಾನ ಕೊಡ್ತೀವಿ. ಅಧಿಕಾರಿಗಳನ್ನು ಭೇಟಿಯಾಗಿ ಪಟ್ಟಿಯಲ್ಲಿ ಹೆಸರು ಬರೆಸಿ.

* ಲಿಡ್ಕರ್ ಯೋಜನೆಯಲ್ಲಿ ಮನೆ ಕಟ್ಟಿದ್ದೇನೆ. ಹಣ ಬಿಡುಗಡೆಯಾಗಿಲ್ಲ,ರವಿಚಂದ್ರಮಾದಾರ,ವಿಜಯಪುರ

ಸೋಮಣ್ಣ: ದುಡ್ಡು ಬಿಡುಗಡೆಗೆ ದಾರಿಯಿದ್ರೆ ತಕ್ಷಣ ಗಮನಕೊಡ್ತೀವಿ. ನಿಮ್ಮ ಸಮಸ್ಯೆ ಪರಿಹರಿಸಲು ಪ್ರಯತ್ನಿಸುವೆ.

* ಮನೆ ಕಟ್ಟಿದ್ದೀನಿ, 1.5 ಲಕ್ಷ ಬಂದಿದೆ. ಪೂರ್ತಿ ದುಡ್ಡು ಬಂದಿಲ್ಲ,ಕರಿಯಪ್ಪ, ರಾಯಚೂರು

ಸೋಮಣ್ಣ:ನಿಮಗೆ ಇನ್ನೂ 1.5 ಲಕ್ಷ ಬರಬೇಕು. ನಿಮ್ಮ ಶಾಸಕ ಶಿವರಾಜ್ ಪಾಟೀಲರ ಬಳಿಗೆ ಹೋಗಿ ಫೀಡ್ ಮಾಡಿಸಿ. ಹಣ ಬಿಡುಗಡೆ ಮಾಡ್ತೀವಿ.

* ನೆರೆ ಹಾವಳಿಯಿಂದ ಮನೆ ಬಿದ್ದಿದೆ. 1 ಲಕ್ಷ ಬಂದಿದೆ. ಮನೆ ಪಾಯ ಹಾಕಿದ್ದೀವಿ, – ಸಂತೋಷ್, ಶಿಗ್ಗಾಂವ್‌

ಸೋಮಣ್ಣ:ಮೊನ್ನೆಯಿನ್ನೂ ಮೀಟಿಂಗ್ ಮಾಡಿದ್ದೇವೆ. ನಾನೇ ತಹಶೀಲ್ದಾರ್ ಜೊತೆಗೆ ಮಾತನಾಡಿ ನಿಮ್ಮ ಸಮಸ್ಯೆ ಪರಿಹರಿಸುವೆ. 99455 70222 ಮೊಬೈಲ್ ಸಂಖ್ಯೆಗೆ ಕರೆ ಮಾಡಿ, ವಿವರಗಳನ್ನು ತಿಳಿಸಿ.

ಶಿಗ್ಗಾಂವ ತಹಶೀಲ್ದಾರ್ ಜೊತೆಗೆ ಲೈವ್‌ನಲ್ಲಿಯೇ ಸೋಮಣ್ಣ ಮಾತನಾಡಿದರು. ‘ಸೆಕೆಂಡ್ ಫೇಸ್ ಹಣ ಬಂದಿಲ್ಲವಂತೆ. ತಕ್ಷಣ ಅದರ ವಿವರಗಳಿರುವ ಫೈಲ್ಕಳಿಸಿಕೊಡಿ. ಹಣ ಬಿಡುಗಡೆ ಮಾಡ್ತೀವಿ. ಹಳೆ ಮನೆಗಳು, ಹೊಸ ಮನೆಗಳವಿಚಾರ. ಬೇಗಬೇಗ ಮುಗಿಸಿ. ನಿರ್ಮಿತಿ ಕೇಂದ್ರದಿಂದ ತೊಂದರೆಯಾದರೆ ನೀವು ಮತ್ತು ಡಿಸಿ ಜವಾಬ್ದಾರರಾಗ್ತೀರಿ’ ಎಂದು ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT