ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದೇ 18ರಿಂದ ರಾಷ್ಟ್ರ ಮಟ್ಟದ ಚರ್ಚಾ ಸ್ಪರ್ಧೆ

Last Updated 3 ಜನವರಿ 2019, 19:16 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ವರ್ಬಾಟಲ್‌ ಸಂಸ್ಥೆಯು ಶಾಲಾ ವಿದ್ಯಾರ್ಥಿಗಳಿಗಾಗಿ ರಾಷ್ಟ್ರ ಮಟ್ಟದ ಚರ್ಚಾ ಸ್ಪರ್ಧೆಯನ್ನು ಇದೇ 18ರಿಂದ 25ರವರೆಗೆ ಹಮ್ಮಿಕೊಂಡಿದೆ.

ಇಲ್ಲಿನ ಕುಮಾರಸ್ವಾಮಿ ಲೇಔಟ್‌ನ ದಯಾನಂದ ಸಾಗರ್‌ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಈ ಸ್ಪರ್ಧೆ ನಡೆಯಲಿದೆ. 7ರಿಂದ 10ನೇ ತರಗತಿಯ 12ರಿಂದ 16 ವರ್ಷದ ಒಳಗಿನ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು.

ವಿಜೇತ ತಂಡಕ್ಕೆ ₹ 2 ಲಕ್ಷ ನಗದು ಬಹುಮಾನ ಇರಲಿದೆ. ಅಂತಿಮ ಸುತ್ತಿನವರೆಗೆ ಬಂದ ಎರಡು ತಂಡಗಳಿಗೆ ತಲಾ ₹ 50 ಸಾವಿರ ಬಹುಮಾನ ಇರಲಿದೆ. ಉತ್ತಮ ವಾಕ್ಪಟುವಿಗೆ ₹ 20 ಸಾವಿರ, ವಿಜೇತ ತಂಡದ ಮಾರ್ಗದರ್ಶಕರಿಗೆ ₹ 20 ಸಾವಿರ ನಗದು ಬಹುಮಾನ ಇರಲಿದೆ.

ಪ್ರವೇಶ ಶುಲ್ಕ ₹ 3,200 (ಊಟ, ವಸತಿ ಸೇರಿ). ಬೆಂಗಳೂರಿನ ವಿದ್ಯಾರ್ಥಿಗಳಿಗೆ ₹ 1,200 (ವಸತಿ ಇರುವುದಿಲ್ಲ). ಹೆಚ್ಚಿನ ಮಾಹಿತಿಗೆ www.verbattle.com ನೋಡಬಹುದು ಅಥವಾ ಮೊಬೈಲ್‌ 91-9900119911 ಸಂಪರ್ಕಿಸಬಹುದು ಎಂದುಸಂಸ್ಥೆಯ ಸಂಸ್ಥಾಪಕ ದೀಪಕ್‌ ತಿಮ್ಮಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT