ಬುಧವಾರ, ಜನವರಿ 29, 2020
29 °C

ಕಳ್ಳನನ್ನು ಬೆನ್ನಟ್ಟಿ ಹಿಡಿದ ಮಹಿಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವೈಟ್‌ಫೀಲ್ಡ್ ಠಾಣೆ ವ್ಯಾಪ್ತಿಯ ಅಪಾರ್ಟ್‌ಮೆಂಟ್‌ ಸಮುಚ್ಚಯದ ಫ್ಲ್ಯಾಟ್‌ಗೆ ನುಗ್ಗಿದ್ದ ಕಳ್ಳನನ್ನು ಮಹಿಳೆ ಹಾಗೂ ನಿವಾಸಿಗಳು ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

‘ವೆಂಕಟಸ್ವಾಮಿ ಎಂಬಾತ ಡಿ. 5ರಂದು ಬಾಗಿಲು ತೆರೆದಿದ್ದ ಫ್ಲ್ಯಾಟ್‌ಗೆ ನುಗ್ಗಿದ್ದ. ಮಹಿಳೆ ಅಡುಗೆ ಮನೆಯಲ್ಲಿದ್ದರು. ಅವರ ಮಗ ಕೊಠಡಿಯಲ್ಲಿ ಮಲಗಿದ್ದ. ಕಬೋರ್ಡ್‌ ತೆರೆಯುತ್ತಿದ್ದ ಶಬ್ದ ಕೇಳಿ ಮಹಿಳೆ ಹೊರಗೆ ಬಂದಿದ್ದರು. ಕಳ್ಳ ಓಡಲಾರಂಭಿಸಿದ್ದ. ಆತನನ್ನು ಮಹಿಳೆ ಬೆನ್ನಟ್ಟಿದ್ದರು. ನಿವಾಸಿಗಳೂ ಸಹಾಯಕ್ಕೆ ಬಂದು ಕಳ್ಳನನ್ನು ಹಿಡಿದು ಠಾಣೆಗೆ ಒಪ್ಪಿಸಿದ್ದಾರೆ’ ಎಂದು ಪೊಲೀಸರು ಹೇಳಿದರು.  

ಪ್ರತಿಕ್ರಿಯಿಸಿ (+)