ಸೋಮವಾರ, ಫೆಬ್ರವರಿ 24, 2020
19 °C

ಎಸ್‌.ಸಿ, ಎಸ್‌.ಟಿ, ಮುಸ್ಲಿಮರನ್ನು ಬಿಜೆಪಿಯತ್ತ ಕರೆತರುವೆ: ರಮೇಶ ಜಾರಕಿಹೊಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Ramesh Jarkiholi

ಬೆಳಗಾವಿ: ‘ಲಿಂಗಾಯತರು ಹಾಗೂ ಇತರೆ ಹಿಂದುಳಿದ ಜನಾಂಗದ ಮತದಾರರು ಬಿಜೆಪಿಯತ್ತ ವಾಲಿರುವುದು ಈ ಉಪಚುನಾವಣೆಯಿಂದ ಸಾಬೀತಾಗಿದೆ. ಇನ್ನುಳಿದಿರುವ ಎಸ್‌.ಸಿ, ಎಸ್‌.ಟಿ ಹಾಗೂ ಮುಸ್ಲಿಮರನ್ನು ಪಕ್ಷದತ್ತ ಕರೆತರುವುದು ನನ್ನ ಜವಾಬ್ದಾರಿ’ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.

ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಕಾಂಗ್ರೆಸ್‌ಗೆ ಮೋಸ ಹೋಗಬೇಡಿ ಎಂದು ಈ ಸಮಾಜದವರಿಗೆ ತಿಳಿಹೇಳುವ ಕೆಲಸ ಮಾಡುವೆ. ಮುಂದಿನ ಚುನಾವಣೆಯಲ್ಲಿ ಇವರನ್ನೆಲ್ಲ ಬಿಜೆಪಿ ಕಡೆ ಕರೆತರುವೆ’ ಎಂದು ನುಡಿದರು.

‘ಸಚಿವರನ್ನಾಗಿ ಮಾಡುವ ತೀರ್ಮಾನ ಹೈಕಮಾಂಡ್‌ ಹಾಗೂ ಮುಖ್ಯಮಂತ್ರಿ ಅವರಿಗೆ ಬಿಟ್ಟಿದ್ದು. ಅವರು ಯಾವ ಖಾತೆ ಕೊಟ್ಟರೂ ನಿಭಾಯಿಸುವೆ. ಜಲಸಂಪನ್ಮೂಲ ಖಾತೆ ದೊಡ್ಡದು. ಅದು ಸಿಕ್ಕರೆ ನನ್ನ ಪುಣ್ಯ’ ಎಂದು ಪ್ರತಿಕ್ರಿಯಿಸಿದರು.

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು