ಭಾನುವಾರ, ಡಿಸೆಂಬರ್ 8, 2019
21 °C
ಯುವಕನಿಗೆ ಗಾಯ

ತಿಪಟೂರು: ಗಣಪತಿ ವಿಸರ್ಜನೆ ವೇಳೆ ಸಿಡಿಮದ್ದಿಗೆ ಯುವತಿ ಬಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ತಿಪಟೂರು: ಭಾನುವಾರ ರಾತ್ರಿ ನಗರದ ಸತ್ಯ ಗಣಪತಿ ವಿಸರ್ಜನಾ ಮಹೋತ್ಸವ ವೀಕ್ಷಿಸಲು ಬಂದಿದ್ದಾಗ ಸಿಡಿಮದ್ದು ಬಡಿದು ಯುವತಿ ಮೃತಪಟ್ಟು, ಮತ್ತೊಬ್ಬ ಯುವಕ ತೀವ್ರ ಗಾಯಗೊಂಡಿದ್ದಾರೆ.

ತುರುವೇಕೆರೆ ತಾಲ್ಲೂಕಿನ ದಂಡಿನಶಿವರ ಹೋಬಳಿಯ ಹಡವನಹಳ್ಳಿ ಗ್ರಾಮದ ಮೈಕ್‍ಸೆಟ್ ರಾಜೇಗೌಡ ಎಂಬುವರ ಪುತ್ರಿ ಸಿತಾರಾ (21) ಮೃತ ಯುವತಿ.

ಭಾರಿ ಸ್ಫೋಟ ಮತ್ತು ಸದ್ದಿನ ಪಟಾಕಿ ಪ್ರದರ್ಶನ ವೇಳೆ ಸಿಡಿಮದ್ದೊಂದು ಹಾರಿ ಬಂದು ಈಕೆಯ ತಲೆಗೆ ಬಡಿಯಿತು. ತೀವ್ರ ರಕ್ತಸ್ರಾವದಿಂದ ಅವರು ಸ್ಥಳದಲ್ಲೇ ಕುಸಿದುಬಿದ್ದರು. ತಕ್ಷಣ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿ ಅಲ್ಲಿಂದ ತುಮಕೂರು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಮಾರ್ಗ ಮಧ್ಯೆ ಮೃತಪಟ್ಟರು.

ಇದೇ ಸಂದರ್ಭದಲ್ಲಿ ಸಿಡಿಮದ್ದು ಬಡಿದು ತಿಪಟೂರು ತಾಲ್ಲೂಕು ಮತ್ತಿಹಳ್ಳಿ ಗ್ರಾಮದ ಜಿತೇಂದ್ರ (19) ಎಂಬುವರೂ ಗಂಭೀರವಾಗಿ ಗಾಯಗೊಂಡಿದ್ದಾರೆ. ಇವರನ್ನು ಬೆಂಗಳೂರು ನಿಮ್ಹಾನ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಗಣೇಶೋತ್ಸವ ಸಮಿತಿ, ಪಟಾಕಿ ತಯಾರಕರು ಹಾಗೂ ಪಟಾಕಿ ಸಿಡಿಸಿದವರ ವಿರುದ್ಧ ನಗರಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು