ಶನಿವಾರ, ಮಾರ್ಚ್ 6, 2021
32 °C

ಆನಂದ್‌ ತೇಲ್ತುಂಬ್ದೆ ಬಂಧನ: ವಿಶ್ವಸಂಸ್ಥೆ ಮಧ್ಯಪ್ರವೇಶಕ್ಕೆ ಜಾಗತಿಕ ಒತ್ತಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಆನಂದ್‌ ತೇಲ್ದುಂಬ್ದೆ ವಿರುದ್ಧ ದಾಖಲಾಗಿರುವ ಸುಳ್ಳು ಪ್ರಕರಣಗಳನ್ನು ಹಿಂಪಡೆಯಲು ಭಾರತ ಸರ್ಕಾರಕ್ಕೆ ಸೂಚಿಸಬೇಕು ಎಂದು ಆಗ್ರಹಿಸಿ ವಿವಿಧ ದೇಶಗಳಲ್ಲಿ ಸಕ್ರಿಯವಾಗಿರುವ 90 ಸಂಘಟನೆಗಳು, 50 ವಿದ್ಯಾಸಂಸ್ಥೆಗಳು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗಟರ್ಸ್‌ ಅವರಿಗೆ ಮನಸಿ ಸಲ್ಲಿಸಿವೆ. ಈ ಮನವಿಗೆ ನೋಂ ಚಾಮ್‌ಸ್ಕಿ ಸೇರಿದಂತೆ ಆರು ಬುದ್ಧಿಜೀವಿಗಳು ಸಹಿ ಮಾಡಿದ್ದಾರೆ.

ಇದನ್ನೂ ಓದಿ: ಸುಪ್ರೀಂಕೋರ್ಟ್‌ ನೀಡಿದ್ದ ರಕ್ಷಣೆಯ ಭರವಸೆ ಪರಿಗಣಿಸದೆ ತೇಲ್ತುಂಬ್ಡೆ ಬಂಧನ

ನಕ್ಸಲ್ ಚಳವಳಿಯೊಂದಿಗೆ ಸಂಪರ್ಕ ಮತ್ತು ಭೀಮಾ ಕೊರೆಗಾಂವ್ ಹಿಂಸಾಚಾರದಲ್ಲಿ ಕೈವಾಡವಿದೆ ಎನ್ನುವ ಅರೋಪ ಹೊರಿಸಿ ತೇಲ್ದುಂಬ್ದೆ ಮತ್ತು ಇತರ 10 ಹೋರಾಟಗಾರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪ್ರಭುತ್ವದೊಂದಿಗೆ ಭಿನ್ನಮತ ಹೊಂದಿದ್ದಾರೆ ಎನ್ನುವ ಕಾರಣಕ್ಕೆ ಈ ಆಟೋಪಗಳನ್ನು ಹೊರಿಸಲಾಗಿದೆ. ಇದು ಗಂಭೀರ ಸ್ವರೂಪದ ಮಾನವ ಹಕ್ಕುಗಳ ಉಲ್ಲಂಘನೆ ಎಂದು ಮನವಿಯಲ್ಲಿ ಹೇಳಲಾಗಿದೆ.

ಭೀಮಾ ಕೊರೆಗಾಂವ್ ವಿಜಯೋತ್ಸವ ನಡೆದ ಡಿ.31, 2017ರಂದು ತೇಲ್ದುಂಬ್ದೆ ಘಟನಾ ಸ್ಥಳದಲ್ಲಿ ಇರಲೇ ಇಲ್ಲ. ಆದರೂ ಅವರ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಲಾಗಿದೆ. ಪುಣೆ ಪೊಲೀಸರು ನಕಲಿ ಪತ್ರಗಳನ್ನು ಸೃಷ್ಟಿಸಿದ್ದಾರೆ ಎಂದು ದೂರಲಾಗಿದೆ.

ಈ ಹಿನ್ನೆಲೆಯಲ್ಲಿ ನಾವು ವಿಶ್ವಸಂಸ್ಥೆಯು ಶೀಘ್ರ ಭಾರತ ಸರ್ಕಾರದೊಂದಿಗೆ ಮಾತುಕತೆ ಆರಂಭಿಸಬೇಕು. ಡಾ.ತೇಲ್ತುಂಬ್ದೆ ವಿರುದ್ಧ ಹೊರಿಸಿರುವ ಆರೋಪಗಳನ್ನು ತಕ್ಷಣ ಹಿಂಪಡೆಯಲು ಸೂಚಿಸಬೇಕು. ನ್ಯಾಯ ಕಾಪಾಡಬೇಕು ಮತ್ತು ಪ್ರಜಾಪ್ರಭುತ್ವವನ್ನು ಗಂಡಾಂತರದಿಂದ, ಆಡಳಿತಶಾಹಿಯ ದಬ್ಬಾಳಿಕೆಯಿಂದ ರಕ್ಷಿಸಬೇಕು. ನಿಮ್ಮನ್ನು ಮುಖತಃ ಬೇಟಿಮಾಡಿ ಮನವಿ ಸಲ್ಲಿಸಲು ಅವಕಾಶ ನೀಡಬೇಕು ಎಂದು ಅವರು ಕೋರಿದ್ದಾರೆ.

ಪತ್ರದ ಪೂರ್ಣ ಪಠ್ಯ ಮತ್ತು ಬೆಂಬಲ ವ್ಯಕ್ತಪಡಿಸಿರುವ ಸಂಸ್ಥೆಗಳು ಹಾಗೂ ವ್ಯಕ್ತಿಗಳ ಪಟ್ಟಿಯನ್ನು ‘ದಿ ವೈರ್’ ಜಾಲತಾಣ ಪ್ರಕಟಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.