ಭಾನುವಾರ, ಜೂಲೈ 12, 2020
29 °C

ಇರಾನ್‌ | ತೆಹ್ರಾನ್‌ ವೈದ್ಯಕೀಯ ಕೇಂದ್ರದಲ್ಲಿ ಅನಿಲ ಸ್ಫೋಟ; 19 ಮಂದಿ ಸಾವು

ಎಪಿ Updated:

ಅಕ್ಷರ ಗಾತ್ರ : | |

ತೆಹ್ರಾನ್‌ನ ವೈದ್ಯಕೀಯ ಕೇಂದ್ರದಲ್ಲಿ ಬೆಂಕಿ

ತೆಹ್ರಾನ್‌: ಇರಾನ್‌ ರಾಜಧಾನಿ ತೆಹ್ರಾನ್‌ನ ಉತ್ತರ ಭಾಗದ ವೈದ್ಯಕೀಯ ಕ್ಲಿನಿಕ್‌ನಲ್ಲಿ ಅನಿಲ ಸೋರಿಕೆಯಿಂದ ಸ್ಫೋಟ ಸಂಭವಿಸಿ 19 ಜನ ಸಾವಿಗೀಡಾಗಿದ್ದಾರೆ. ಈ ಕುರಿತು ಇರಾನ್‌ನ ಟಿವಿ ಮಾಧ್ಯಮ ಮಂಗಳವಾರ ವರದಿ ಮಾಡಿದೆ.

ಅವಘಡದಲ್ಲಿ 13 ಮಂದಿ ಮೃತಪಟ್ಟಿರುವುದಾಗಿ ಅಧಿಕಾರಿಗಳು ತಿಳಿಸಿದ್ದರು. ನಂತರದಲ್ಲಿ ತೆಹ್ರಾನ್‌ ಅಗ್ನಿಶಾಮಕ ಇಲಾಖೆಯ ವಕ್ತಾರ ಜಲಾಲ್‌ ಮಲೇಕಿ ಸಾವಿಗೀಡಾದವರ ಸಂಖ್ಯೆ 19ಕ್ಕೆ ಏರಿಕೆಯಾಗಿರುವುದಾಗಿ ತಿಳಿಸಿದ್ದಾರೆ.

ಮೃತರ ಪೈಕಿ 15 ಮಹಿಳೆಯರು ಹಾಗೂ ನಾಲ್ವರು ಪುರುಷರು. ಅಗ್ನಿಶಾಮಕ ಸಿಬ್ಬಂದಿ 20 ಜನರನ್ನು ರಕ್ಷಿಸಿದ್ದಾಗಿ ಮಲೇಕಿ ಹೇಳಿದ್ದಾರೆ.

ವೈದ್ಯಕೀಯ ಕೇಂದ್ರದಲ್ಲಿ ಆಕ್ಸಿಜನ್‌ ಸಂಗ್ರಹಿಸಿದ ಟ್ಯಾಂಕ್‌ಗಳಿದ್ದವು. ಅನಿಲ ಸೋರಿಕೆಯಿಂದ ಒಂದಕ್ಕಿಂತಲೂ ಹೆಚ್ಚು ಸ್ಫೋಟ ಸಂಭವಿಸಿರುವುದು ವಿಡಿಯೊಗಳಿಂದ ತಿಳಿದು ಬಂದಿದೆ. ಇದರಿಂದ ಕಟ್ಟಡದಲ್ಲಿ ಬೆಂಕಿ ವ್ಯಾಪಿಸಿರುವುದಾಗಿ ತೆಹ್ರಾನ್‌ನ ಉಪ ಗವರ್ನರ್‌ ಹಮಿದ್ರೆಝ ಗೌದರ್ಜಿ ತಿಳಿಸಿದ್ದಾರೆ.

ಸ್ಫೋಟದ ಸದ್ದು ಮತ್ತು ಬೆಂಕಿ ಹರಡುತ್ತಿರುವುದನ್ನು ಕಂಡು ತಜ್ರಿಷ್‌ ಬಜಾರ್‌ನಲ್ಲಿದ್ದ ಜನರು ರಕ್ಷಣಾ ಕಾರ್ಯಕ್ಕೆ ಇಳಿದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು