ಕಠ್ಮಂಡು: ಭಾರತದ ಮೂರು ಪ್ರದೇಶ ಗಳನ್ನು ಒಳಗೊಂಡಂತೆ ಭೌಗೋಳಿಕ ನಕ್ಷೆಯನ್ನು ಮಾರ್ಪಡಿಸಲು ಅವಕಾಶ ಕಲ್ಪಿಸುವಂತೆ ಸಂವಿಧಾನಕ್ಕೆ ತಿದ್ದುಪಡಿ ತರುವ ಮಸೂದೆಗೆ ನೇಪಾಳ ಸಂಸತ್ತು ಗುರುವಾರ ಅನುಮೋದನೆ ನೀಡಿತು. ಭಾರತದ ತೀವ್ರ ವಿರೋಧದ ನಡುವೆಯೂ ಈ ಬೆಳವಣಿಗೆ ನಡೆದಿದೆ.

ಮಸೂದೆಗೆ ಸಂಸತ್ತಿನ ಕೆಳಮನೆ ಅನುಮೋದನೆ ನೀಡಿದ ನಂತರ ಭಾರತ, ‘ಇದೊಂದು, ಕೃತಕ ವಿಸ್ತರಣೆ. ಸಮ್ಮತವಲ್ಲದ್ದು’ ಎಂದು ಆಕ್ಷೇಪವನ್ನು ದಾಖಲಿಸಿತ್ತು. ಭಾರತಕ್ಕೆ ಸೇರಿರುವ ಲಿಂಪುಲೇಖ್, ಕಾಲಾಪಾನಿ ಮತ್ತು ಲಿಂಪಿಯಧೂರಾ ಸೇರಿಕೊಂಡು ನಕ್ಷೆ ಮಾರ್ಪಡಿಸುವುದು ನೇಪಾಳದ ಉದ್ದೇಶ.

ಈ ಪ್ರಮುಖ ಪ್ರದೇಶಗಳ ಮೇಲೆ ಹಕ್ಕು ಪ್ರತಿಪಾದಿಸಿ ನೇಪಾಳವು ಕಳೆದ ತಿಂಗಳಷ್ಟೇ ಹೊಸದಾಗಿ ರಾಜಕೀಯ ಮತ್ತು ಆಡಳಿತಾತ್ಮಕ ನಕ್ಷೆಯನ್ನು ಬಿಡುಗಡೆ ಮಾಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.