ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಲಿಂಗಿಗಳ ಸಹಬಾಳ್ವೆ: ಮಸೂದೆಗೆ ಥಾಯ್ಲೆಂಡ್‌ ಸಚಿವ ಸಂಪುಟ ಒಪ್ಪಿಗೆ

Last Updated 9 ಜುಲೈ 2020, 7:50 IST
ಅಕ್ಷರ ಗಾತ್ರ

ಬ್ಯಾಂಕಾಕ್‌: ಸಲಿಂಗಿಗಳು ಒಟ್ಟಿಗೆ ಬಾಳಲು ಅವಕಾಶ ನೀಡುವುದು ಸೇರಿದಂತೆ ಎರಡು ಮಸೂದೆಗಳಿಗೆ ಥಾಯ್ಲೆಂಡ್‌ನ ಸಚಿವ ಸಂಪುಟ ಅನುಮೋದನೆ ನೀಡಿದೆ.

ಸಲಿಂಗಿಗಳು ಒಟ್ಟಿಗೆ ಬಾಳಿದರೂ ಅದನ್ನು ವಿವಾಹ ಎಂದು ಪರಿಗಣಿಸುವುದಿಲ್ಲ. ಆದರೆ, ಭಿನ್ನಲಿಂಗಿಗಳ ವಿವಾಹಕ್ಕೆ ಇರುವ ಕಾನೂನಾತ್ಮಕ ಮಾನ್ಯತೆ ಹಾಗೂ ಅವರು ಅನುಭವಿಸುವ ಸೌಲಭ್ಯಗಳನ್ನು ಸಹಬಾಳ್ವೆ ನಡೆಸುವ ಸಲಿಂಗಿಗಳಿಗೂ ನೀಡಲಾಗುತ್ತದೆ ಎಂದು ಸರ್ಕಾರದ ಉಪವಕ್ತಾರರಾದ ರಚಡಾ ಥಾನಾಡಿರೆಕ್ ತಿಳಿಸಿದ್ದಾರೆ.

ಸಿವಿಲ್‌ ಪಾರ್ಟ್‌ನರ್‌ಷಿಪ್‌ ಆ್ಯಕ್ಟ್‌ ಹಾಗೂ ಸಿವಿಲ್‌ ಆ್ಯಂಡ್‌ ಕಮರ್ಷಿಯಲ್ ಕೋಡ್‌ (ತಿದ್ದುಪಡಿ) ಮಸೂದೆಗಳನ್ನು ಅನುಮೋದನೆಗಾಗಿ ಶೀಘ್ರವೇ ಸಂಸತ್‌ಗೆ ಕಳುಹಿಸಲಾಗುವುದು ಎಂದೂ ಅವರು ತಿಳಿಸಿದ್ದಾರೆ.

17 ವರ್ಷದ ತುಂಬಿದ ಸಲಿಂಗಿಗಳು ಸಹಬಾಳ್ವೆ ನಡೆಸುವ ಸಂಬಂಧ ನೋಂದಣಿ ಮಾಡಿಸಬೇಕು. ಇಬ್ಬರ ಪೈಕಿ ಒಬ್ಬರು ಥಾಯ್ಲೆಂಡ್‌ ನಾಗರಿಕರಾಗಿರಬೇಕು ಎಂಬ ಷರತ್ತನ್ನುಸಿವಿಲ್‌ ಪಾರ್ಟ್‌ನರ್‌ಷಿಪ್‌ ಆ್ಯಕ್ಟ್‌ (ತಿದ್ದುಪಡಿ) ಮಸೂದೆಯಲ್ಲಿ ಸೇರಿಸಲಾಗಿದೆ.

ಸಿವಿಲ್‌ ಆ್ಯಂಡ್‌ ಕಮರ್ಷಿಯಲ್ ಕೋಡ್‌ (ತಿದ್ದುಪಡಿ) ಮಸೂದೆ ಈ ಸಂಬಂಧ ಮತ್ತಷ್ಟು ನಿಯಮಗಳನ್ನು ಒಳಗೊಂಡಿದೆ. ಸಹಬಾಳ್ವೆ ನಡೆಸುತ್ತಿರುವ ಸಲಿಂಗಿಗಳು ಬೇರ್ಪಟ್ಟ ನಂತರ, ಬೇರೆ ವ್ಯಕ್ತಿ ಜೊತೆ ಇದೇ ರೀತಿಯ ಸಂಬಂಧ ಮುಂದುವರಿಸಿದ ಸಂದರ್ಭದಲ್ಲಿ ಜೀವನಾಂಶ ಪಡೆಯವ ಹಕ್ಕನ್ನು ಕಳೆದುಕೊಳ್ಳುವರು ಎಂಬ ಅಂಶ ಈ ಮಸೂದೆಯಲ್ಲಿದೆ.

ಈ ತಿದ್ದುಪಡಿ ಮಸೂದೆಯಿಂದ ಹೇಳಿಕೊಳ್ಳುವಂತಹ ಲಾಭ ಸಿಗದು. ಇದು ನಿರೀಕ್ಷಿತ ಮಟ್ಟದಲ್ಲಿ ಸಮಾನತೆಯನ್ನು ಖಾತರಿಪಡಿಸುವುದಿಲ್ಲ ಎಂದು ಥಾಯ್ಲೆಂಡ್‌ನ ಎಲ್‌ಜಿಬಿಟಿಕ್ಯೂ ಸಮುದಾಯ ಅಭಿಪ್ರಾಯಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT