ಸೋಮವಾರ, 29 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದೇಶಿ ವಿದ್ಯಾರ್ಥಿಗಳ ಕುರಿತ ಕಾನೂನು ಹಿಂತೆಗೆದುಕೊಂಡ ಅಮೆರಿಕ

Last Updated 15 ಜುಲೈ 2020, 7:40 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ವಿದೇಶಿ ವಿದ್ಯಾರ್ಥಿಗಳು ಅಮೆರಿಕದಲ್ಲಿ ಉಳಿದುಕೊಳ್ಳುವುದಕ್ಕೆ ಸಂಬಂಧಿಸಿದಂತೆ ಜುಲೈ 6ರಂದು ಜಾರಿ ಮಾಡಿದ್ದ ವಿವಾದಾತ್ಮಕ ಕಾನೂನನ್ನು ರದ್ದುಪಡಿಸಲು ಟ್ರಂಪ್‌ ಆಡಳಿತ ಒಪ್ಪಿದೆ.

ಶಿಕ್ಷಣ ಸಂಸ್ಥೆಗಳು ಕ್ಯಾಂಪಸ್‌ನಲ್ಲೇ ಪಾಠಪ್ರವಚನಗಳನ್ನು ಆರಂಭಿಸುವುದನ್ನು ಬಿಟ್ಟು, ಆನ್‌ಲೈನ್‌ನಲ್ಲಿ ತರಗತಿಗಳನ್ನು ನಡೆಸುವುದಾದರೆ, ವಿದೇಶಿ ವಿದ್ಯಾರ್ಥಿಗಳು ದೇಶದಿಂದ ಹೊರಹೋಗಬೇಕಾಗುತ್ತದೆ ಅಥವಾ ಗಡಿಪಾರು ಶಿಕ್ಷೆ ಅನುಭವಿಸಬೇಕು ಎಂಬ ಕಾನೂನನ್ನು ಟ್ರಂಪ್‌ ಆಡಳಿತವು ಜುಲೈ 6ರಂದು ಜಾರಿ ಮಾಡಿತ್ತು. ಈ ಕಾನೂನಿಗೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದಲ್ಲದೆ ಅನೇಕ ಶಿಕ್ಷಣ ಸಂಸ್ಥೆಗಳು ಇದರ ವಿರುದ್ದ ನ್ಯಾಯಾಲಯದಲ್ಲಿ ದಾವೆಗಳನ್ನು ಹೂಡಿದ್ದವು. ಗೂಗಲ್‌, ಮೈಕ್ರೊಸಾಫ್ಟ್‌ ಸೇರಿದಂತೆ ಅನೇಕ ದಿಗ್ಗಜ ಕಂಪನಿಗಳು ಈ ನ್ಯಾಯಾಂಗ ಹೋರಾಟಕ್ಕೆ ಬೆಂಬಲ ಸೂಚಿಸಿದ್ದವು. ಸುಮಾರು 17 ರಾಜ್ಯಗಳು ಪ್ರತ್ಯೇಕವಾಗಿ ದಾವೆಗಳನ್ನು ಹೂಡಿದ್ದವು.

‘ಸಮಸ್ಯೆಯನ್ನು ಸರ್ಕಾರವು ಪರಿಹರಿಸಿದೆ. ಕಾನೂನಿನಲ್ಲಿ ಬದಲಾವಣೆಗಳನ್ನು ಮಾಡದಿರಲು ತೀರ್ಮಾನಿಸಿರುವುದಾಗಿ ಸರ್ಕಾರ ನನಗೆ ಮಾಹಿತಿ ನೀಡಿದೆ’ ಎಂದು ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾಯಾಧೀಶರು ಮಂಗಳವಾರ ವಿಚಾರಣೆಯ ವೇಳೆ ತಿಳಿಸಿದರು. ಇದರಿಂದ ಅಮೆರಿಕದಲ್ಲಿ ಶಿಕ್ಷಣ ಪಡೆಯುತ್ತಿರುವ ವಿದೇಶಿ ವಿದ್ಯಾರ್ಥಿಗಳ ದೊಡ್ಡ ಆತಂಕ ನಿವಾರಣೆಯಾದಂತಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT