ಶನಿವಾರ, ಸೆಪ್ಟೆಂಬರ್ 26, 2020
23 °C
ಪ್ರತೀಕಾರ ತೀರಿಸಿಕೊಂಡ ಚೀನಾ

ಚೀನಾದ ಚೆಂಗ್ಡು ನಗರದಲ್ಲಿದ್ದ ಕಾನ್ಸುಲೇಟ್ ಕಚೇರಿ‌ ಮುಚ್ಚಿದ ಅಮೆರಿಕ

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

Prajavani

ಚೆಂಗ್ಡು: ಚೀನಾದ ಚೆಂಗ್ಡು ನಗರದಲ್ಲಿದ್ದ ಅಮೆರಿಕ ಕಾನ್ಸುಲೇಟ್‌ ಕಚೇರಿಯನ್ನು ಸೋಮವಾರ ಅಧಿಕೃತವಾಗಿ ಸ್ಥಗಿತಗೊಳಿಸಲಾಗಿದೆ.

ಆ ಮೂಲಕ ಹ್ಯೂಸ್ಟನ್‌ನಲ್ಲಿದ್ದ ತನ್ನ ಕಾನ್ಸುಲೇಟ್‌ ಕಚೇರಿ ಮುಚ್ಚಿದ ಅಮೆರಿಕ ವಿರುದ್ಧ ಚೀನಾ ಪ್ರತೀಕಾರ ತೆಗೆದುಕೊಂಡಿದೆ. ಇದರೊಂದಿಗೆ ಈ ಎರಡೂ ರಾಷ್ಟ್ರಗಳ ನಡುವಿನ ರಾಜಕೀಯ ಸಂಘರ್ಷ ತಾರಕಕ್ಕೇರಿದೆ.     

ಸೋಮವಾರ ಬೆಳಗ್ಗೆ ಕಾನ್ಸುಲೇಟ್‌ ಮೇಲಿದ್ದ ಧ್ವಜವನ್ನು ಕೆಳಗಿಳಿಸಿದ ನಂತರ ಕಚೇರಿಯನ್ನು ತೆರವುಗೊಳಿಸಲಾಯಿತು. ಕಾನ್ಸುಲೇಟ್‌ ಸಿಬ್ಬಂದಿಯನ್ನು ಬಿಗಿ ಭದ್ರತೆಯಲ್ಲಿ ಹೊರಗೆ ಕಳಿಸಲಾಯಿತು. ಕಚೇರಿಯಲ್ಲಿದ್ದ ಪೀಠೋಪಕರಣ, ಕಡತ ಮತ್ತು ಇತರ ಸಾಮಗ್ರಿಗಳನ್ನು ವಾಹನಗಳಲ್ಲಿ ಸಾಗಿಸಲಾಯಿತು. 

ಭಾನುವಾರ ಸಂಜೆಯೇ ಕಾನ್ಸುಲೇಟ್‌ ಸುತ್ತಮುತ್ತಲಿನ ಪ್ರದೇಶವನ್ನು ವಶಕ್ಕೆ ಪಡೆದ ಪೊಲೀಸರು ಬ್ಯಾರಿಕೇಡ್‌ ಅಳವಡಿಸಿದ್ದರು. ಸಾರ್ವಜನಿಕರು ಮತ್ತು ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿತ್ತು.

ಕಾನ್ಸುಲೇಟ್‌ ಕಚೇರಿ ಆವರಣದಲ್ಲಿ ವಾಹನಗಳ ಸಂಚಾರ, ಪೊಲೀಸರ ಓಡಾಟ ಬಿಟ್ಟರೆ ಆ ಪ್ರದೇಶ ಸಂಪೂರ್ಣ ನಿರ್ಜನವಾಗಿತ್ತು. ದೇಶ, ವಿದೇಶಗಳ ನೂರಾರು ಮಾಧ್ಯಮಗಳು ಕಾನ್ಸುಲೇಟ್‌ ಕಚೇರಿ ಎದುರು ಬೀಡುಬಿಟ್ಟಿವೆ. ಈ ವಿದ್ಯಮಾನಗಳನ್ನು ಜನರು ಗುಂಪು, ಗುಂಪಾಗಿ ದೂರದಿಂದಲೇ ವೀಕ್ಷಿಸುತ್ತಿದ್ದರು. ಸೆಲ್ಫಿಗಳನ್ನು ಸೆರೆ ಹಿಡಿಯುತ್ತಿದ್ದ ಜನರನ್ನು ಪೊಲೀಸರು ಬೆದರಿಸಿ ಕಳಿಸಿದರು.  

‘ಚೀನಾ ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಚೆಂಗ್ಡು ಕಾನ್ಸುಲೇಟ್‌ ಕಚೇರಿ ಕೆಲಸಗಳನ್ನು ಅಧಿಕೃತವಾಗಿ ಸ್ಥಗಿತಗೊಳಿಸಲಾಗಿದೆ. ಚೀನಾದ ಈ ನಿರ್ಧಾರದಿಂದ ತೀವ್ರ ನಿರಾಶೆಯಾಗಿದೆ’ ಎಂದು ಎಂದು ಅಮೆರಿಕ ಪ್ರತಿಕ್ರಿಯಿಸಿದೆ.

ಹ್ಯೂಸ್ಟನ್‌ನಲ್ಲಿರುವ ಚೀನಾ ಕಾನ್ಸುಲೇಟ್‌ ಕಚೇರಿಯನ್ನು ಅಮೆರಿಕ ಸ್ಥಗಿತಗೊಳಿಸಿದ ಬೆನ್ನಲ್ಲೇ ಪ್ರತೀಕಾರಕ್ಕೆ ಮುಂದಾದ ಚೀನಾ ಶುಕ್ರವಾರ ಚೆಂಗ್ಡು ನಗರದಲ್ಲಿದ್ದ ಅಮೆರಿಕ ಕಾನ್ಸುಲೇಟ್‌ ಕಚೇರಿಯನ್ನು ಮುಚ್ಚುವಂತೆ ಆದೇಶಿಸಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು