ಸಂಗೀತ ಕಾರ್ಯಕ್ರಮ: ಬೆಂಗಳೂರಿಗೆ ಬಂದ ಸನ್ನಿ ಲಿಯೋನ್

7

ಸಂಗೀತ ಕಾರ್ಯಕ್ರಮ: ಬೆಂಗಳೂರಿಗೆ ಬಂದ ಸನ್ನಿ ಲಿಯೋನ್

Published:
Updated:

ಬೆಂಗಳೂರು: ಬಾಲಿವುಡ್ ನಟಿ ಸನ್ನಿ ಲಿಯೋನ್, ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಸಂಗೀತ ಕಾರ್ಯಕ್ರಮ ನಡೆಸಿಕೊಡಲು ಶನಿವಾರ ಸಂಜೆ ಬಂದಿದ್ದಾರೆ.

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಜೆ ಬಂದಿಳಿದ ಸನ್ನಿ ಲಿಯೋನ್‌ರನ್ನು ಆಯೋಜಕರು ಸ್ವಾಗತಿಸಿದರು. ಬೆಂಗಳೂರಿಗೆ ಕಾಲಿಡುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಫೋಟೊ ಪ್ರಕಟಿಸಿರುವ ಸನ್ನಿ ಲಿಯೋನ್, ‘ಚಿಲ್ ಬೆಂಗಳೂರ್’ ಎಂದು ಬರೆದುಕೊಂಡಿದ್ದಾರೆ.

‘ಟೈಮ್ಸ್‌ ಕ್ರಿಯೇಷನ್ಸ್‌’ ವತಿಯಿಂದ ನಗರದ ಮಾನ್ಯತಾ ಟೆಕ್‌ಪಾರ್ಕ್‌ನ ವೈಟ್‌ ಆರ್ಕೀಡ್‌ನಲ್ಲಿ ಹಮ್ಮಿಕೊಂಡಿರುವ ‘ಫ್ಯೂಷನ್ ನೈಟ್ಸ್‌’ ಕಾರ್ಯಕ್ರಮ ಸಂಜೆ 6ಕ್ಕೆ ಆರಂಭವಾಗಿದೆ. ರಾತ್ರಿ 10 ಗಂಟೆಯವರೆಗೆ ನಡೆಯಲಿದೆ.

ರಘು ದೀಕ್ಷಿತ್‌, ಗಾಯನ ಪ್ರಸ್ತುತಪಡಿಸಲಿದ್ದಾರೆ. ಸನ್ನಿ ಲಿಯೋನ್, ನೃತ್ಯದ ಮೂಲಕ ಜನರನ್ನು ರಂಜಿಸಲಿದ್ದಾರೆ. ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ.  

ಬರಹ ಇಷ್ಟವಾಯಿತೆ?

  • 8

    Happy
  • 0

    Amused
  • 0

    Sad
  • 0

    Frustrated
  • 2

    Angry

Comments:

0 comments

Write the first review for this !