ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ACB Ride

ADVERTISEMENT

ಮದ್ಯದಂಗಡಿ ಪರವಾನಗಿಗೆ ಲಂಚ: ಅಬಕಾರಿ ಡಿ.ಸಿ. ಸೇರಿ ನಾಲ್ವರು ಲೋಕಾಯುಕ್ತ ಬಲೆಗೆ

ಮದ್ಯದ ಅಂಗಡಿ ಆರಂಭಕ್ಕೆ ಪರವಾನಗಿ ಕೊಡಲು ಲಂಚ ಪಡೆಯುತ್ತಿರುವಾಗ ಅಬಕಾರಿ ಡಿ.ಸಿ. ಸೇರಿದಂತೆ ನಾಲ್ವರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
Last Updated 14 ಅಕ್ಟೋಬರ್ 2023, 14:57 IST
ಮದ್ಯದಂಗಡಿ ಪರವಾನಗಿಗೆ ಲಂಚ: ಅಬಕಾರಿ ಡಿ.ಸಿ. ಸೇರಿ ನಾಲ್ವರು ಲೋಕಾಯುಕ್ತ ಬಲೆಗೆ

ಗುತ್ತಿಗೆದಾರ ಪರವಾನಗಿ ನೀಡಲು ಲಂಚ; ಲೋಕೋಪಯೋಗಿ ಇಲಾಖೆ ಎಸ್‌ಡಿಎ ಎಸಿಬಿ ಬಲೆಗೆ

ಚಾಮರಾಜನಗರ: ಗುತ್ತಿಗೆದಾರ ಪರವಾನಗಿ ಮಾಡಿಸಿಕೊಡಲು ಅರ್ಜಿದಾರರಿಂದ ₹7,500 ಲಂಚ ಪಡೆಯುತ್ತಿದ್ದ ಲೋಕೋಪಯೋಗಿ ಇಲಾಖೆಯ ದ್ವಿತೀಯ ದರ್ಜೆ ಸಹಾಯಕ (ಎಸ್‌ಡಿಎ) ಗೋವಿಂದಯ್ಯ ಅವರು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಪೊಲೀಸರ ಕೈಗೆ ಮಂಗಳವಾರ ಸಿಕ್ಕಿ ಬಿದ್ದಿದ್ದಾರೆ.
Last Updated 21 ಜೂನ್ 2022, 11:12 IST
ಗುತ್ತಿಗೆದಾರ ಪರವಾನಗಿ ನೀಡಲು ಲಂಚ; ಲೋಕೋಪಯೋಗಿ ಇಲಾಖೆ ಎಸ್‌ಡಿಎ ಎಸಿಬಿ ಬಲೆಗೆ

ಎಸಿಬಿ ಹೆಸರಲ್ಲಿ ಸುಲಿಗೆ: 26 ಎಫ್‌ಐಆರ್‌ ದಾಖಲು -ಸೀಮಾಂತ್‌ ಕುಮಾರ್‌ ಮಾಹಿತಿ

ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳ ಹೆಸರು ಬಳಸಿಕೊಂಡು ದುಷ್ಕರ್ಮಿಗಳು ಸರ್ಕಾರಿ ಅಧಿಕಾರಿಗಳು ಮತ್ತು ನೌಕರರಿಂದ ಹಣ ವಸೂಲಿ ಮಾಡುತ್ತಿರುವ ಆರೋಪದ ಮೇಲೆ ರಾಜ್ಯದ ವಿವಿಧೆಡೆ ಒಟ್ಟು 26 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಎಂದು ಎಸಿಬಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಸೀಮಾಂತ್‌ ಕುಮಾರ್‌ ಸಿಂಗ್‌ ತಿಳಿಸಿದ್ದಾರೆ.
Last Updated 4 ಮೇ 2022, 15:41 IST
ಎಸಿಬಿ ಹೆಸರಲ್ಲಿ ಸುಲಿಗೆ: 26 ಎಫ್‌ಐಆರ್‌ ದಾಖಲು -ಸೀಮಾಂತ್‌ ಕುಮಾರ್‌ ಮಾಹಿತಿ

ಚಿತ್ರದುರ್ಗ: ಎಸಿಬಿ ಬಲೆಗೆ ಬಿದ್ದ ಪಿಡಿಒ

ತಾಲ್ಲೂಕಿನ ಮದಕರಿಪುರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಸುಷ್ಮಾರಾಣಿ ಹಾಗೂ ಕಚೇರಿ ಸಿಬ್ಬಂದಿ ವಿಜಯಲಕ್ಷ್ಮಿ ಎಂಬುವರು ಲಂಚ ಸ್ವೀಕರಿಸುವಾಗ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಬಲೆಗೆ ಬಿದ್ದಿದ್ದಾರೆ.
Last Updated 7 ಮಾರ್ಚ್ 2022, 16:18 IST
fallback

ಗಂಗಾವತಿ: ಎಸಿಬಿ ಬಲೆಗೆ ಸಂಗಾಪುರ ಪಿಡಿಒ

ಗಂಗಾವತಿ: ತಾಲ್ಲೂಕಿನ ಸಂಗಾಪುರ ಗ್ರಾಮ ಪಂಚಾಯಿತಿಗೆ ಗುರುವಾರ ಎಸಿಬಿ ಅಧಿಕಾರಿಗಳು ಏಕಾಏಕಿ ಭೇಟಿ ನೀಡಿ, ಭ್ರಷ್ಟಾಚಾರ ಮಾಡುತ್ತಿದ್ದ ಗ್ರಾ.ಪಂ ಪಿಡಿಓ, ಕಾರ್ಯದರ್ಶಿ ಮೇಲೆ ದಾಳಿ ನಡೆಸಿದ್ದಾರೆ.
Last Updated 14 ಜನವರಿ 2022, 6:22 IST
ಗಂಗಾವತಿ: ಎಸಿಬಿ ಬಲೆಗೆ ಸಂಗಾಪುರ ಪಿಡಿಒ

ಚಿಕ್ಕಮಗಳೂರು | ಕಂದಾಯ ನಿರೀಕ್ಷಕ ಕಿರಣ್ ಎಸಿಬಿ ಬಲೆಗೆ

ಜಮೀನಿನ ಖಾತೆ ಬದಲಾವಣೆಗೆ ಸಂಬಂಧಿಸಿದಂತೆ ತಾಲ್ಲೂಕು ಆಡಳಿತ ಸೌಧದಲ್ಲಿ ಗುರುವಾರ ಮಹಿಳೆಯಿಂದ ಲಂಚ ಪಡೆಯುತ್ತಿದ್ದಾಗ ಹರಿಹರಪುರ ಕಂದಾಯ ನಿರೀಕ್ಷಕ ಕಿರಣ್ ಎಂಬುವರು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
Last Updated 23 ಡಿಸೆಂಬರ್ 2021, 12:55 IST
ಚಿಕ್ಕಮಗಳೂರು | ಕಂದಾಯ ನಿರೀಕ್ಷಕ ಕಿರಣ್ ಎಸಿಬಿ ಬಲೆಗೆ

ಬೆಳಗಾವಿ: ಮೂವರು ಸರ್ಕಾರಿ ನೌಕರರ ಮನೆ ಮೇಲೆ ಎಸಿಬಿ ದಾಳಿ, ದಾಖಲೆ ಪರಿಶೀಲನೆ

ಆದಾಯಕ್ಕಿಂತ ಹೆಚ್ಚು ಆರೋಪದ ಮೇಲೆ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಮೂವರು ನೌಕರರ ಮನೆ, ಕಚೇರಿ ಹಾಗೂ ಅವರ ನಿಕಟವರ್ತಿಗಳ ಮನೆಗಳ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದವರು ಬುಧವಾರ ಬೆಳಿಗ್ಗೆ ದಾಳಿ ನಡೆಸಿ, ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.
Last Updated 24 ನವೆಂಬರ್ 2021, 7:13 IST
ಬೆಳಗಾವಿ: ಮೂವರು ಸರ್ಕಾರಿ ನೌಕರರ ಮನೆ ಮೇಲೆ ಎಸಿಬಿ ದಾಳಿ, ದಾಖಲೆ ಪರಿಶೀಲನೆ
ADVERTISEMENT

ಗುಬ್ಬಿ: ಎಸಿಬಿ ಬಲೆಗೆ ಬಿದ್ದಿದ್ದ ಪಿಎಸ್‌ಐ ವಿಚಾರಣೆ ವೇಳೆ ಠಾಣೆಯಿಂದ ಪರಾರಿ

ಗುಬ್ಬಿ: ತಾಲ್ಲೂಕಿನ ಸಿ.ಎಸ್.ಪುರ ಪೊಲೀಸ್ ಠಾಣೆಯಲ್ಲಿ ಬುಧವಾರ ಎಸಿಬಿ ಬಲೆಗೆ ಬಿದ್ದಿದ್ದ ಸಬ್‌ಇನ್ಸ್‌ಪೆಕ್ಟರ್ ಸೋಮಶೇಖರ್ ವಿಚಾರಣೆ ಸಮಯದಲ್ಲಿ ಓಡಿಹೋಗಿ ತಪ್ಪಿಸಿಕೊಂಡಿದ್ದಾರೆ.
Last Updated 3 ನವೆಂಬರ್ 2021, 13:22 IST
ಗುಬ್ಬಿ: ಎಸಿಬಿ ಬಲೆಗೆ ಬಿದ್ದಿದ್ದ ಪಿಎಸ್‌ಐ ವಿಚಾರಣೆ ವೇಳೆ ಠಾಣೆಯಿಂದ ಪರಾರಿ

ಕಾರ್ಯ ನಿರ್ವಾಹಕ ಎಂಜಿನಿಯರ್ ಕೃಷ್ಣ ಎಸ್.ಹೆಬ್ಸೂರು ಮನೆ ಮೇಲೆ ಎಸಿಬಿ ದಾಳಿ

ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಕಾರ್ಯ ನಿರ್ವಾಹಕ ಎಂಜಿನಿಯರ್ ಕೃಷ್ಣ ಎಸ್.ಹೆಬ್ಸೂರು ಅವರ ನಿವಾಸ ಹಾಗೂ ಕಚೇರಿ ಮೇಲೆ ಗುರುವಾರ ಬೆಳಿಗ್ಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
Last Updated 15 ಜುಲೈ 2021, 8:09 IST
ಕಾರ್ಯ ನಿರ್ವಾಹಕ ಎಂಜಿನಿಯರ್ ಕೃಷ್ಣ ಎಸ್.ಹೆಬ್ಸೂರು ಮನೆ ಮೇಲೆ ಎಸಿಬಿ ದಾಳಿ

Photos| ಎಸಿಬಿ ದಾಳಿ ವೇಳೆ 9 ಅಧಿಕಾರಿಗಳ ಮನೆಯಲ್ಲಿ ಸಿಕ್ಕ ಸಂಪತ್ತು

ಬೆಂಗಳೂರು: ವಿವಿಧ ಇಲಾಖೆಯ 9 ಅಧಿಕಾರಿಗಳ ಮನೆ ಮತ್ತು ಕಚೇರಿ ಸೇರಿ 11 ಜಿಲ್ಲೆಯ 28 ಕಡೆ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಮಂಗಳವಾರ ಬೆಳಿಗ್ಗೆ ಏಕ ಕಾಲದಲ್ಲಿ ದಾಳಿ ನಡೆಸಿದೆ.ಚಿಕ್ಕಬಳ್ಳಾಪುರ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಕೃಷ್ಣೇಗೌಡ ಅವರಿಗೆ ಸೇರಿದ ಚಿಕ್ಕಬಳ್ಳಾಪುರ ಮತ್ತು ಕೋಲಾರದಲ್ಲಿನ ಮನೆ, ಸಹೋದರನ ಮನೆ ಮೇಲೂ ದಾಳಿ ನಡೆಸಲಾಗಿದೆ.ಬೆಳಗಾವಿ ವೃತ್ತದ ಉಪ ಮುಖ್ಯ ಎಲೆಕ್ಟ್ರಿಕಲ್ ಎಂಜಿನಿಯರ್ ಹನುಮಂತ ಶಿವಪ್ಪ ಚಿಕ್ಕಣ್ಣನವರ ಅವರಿಗೆ ಸೇರಿದ ಅಂಕೋಲ, ಗೊಲಂಬಾವಿ ಗ್ರಾಮದಲ್ಲಿನ ಮನೆ ಮತ್ತು ಕಚೇರಿ ಮೇಲೆ ದಾಳಿ ನಡೆದಿದೆ.ಮೈಸೂರು ನಗರ ಯೋಜನೆಗಳ ಜಂಟಿ ನಿರ್ದೇಶಕ ಸುಬ್ರಮಣ್ಯ ಕೆ.ಯಾದವ್ ಅವರ ಉಡುಪಿಯಲ್ಲಿನ ಮನೆ, ಕಾರವಾರದಲ್ಲಿನ ಮನೆ, ಮೈಸೂರಿನ ಮನೆ ಮತ್ತು ಕಚೇರಿಗಳಲ್ಲಿ ಶೋಧ ನಡೆಸಲಾಗುತ್ತಿದೆ.ಮೈಸೂರಿನ ಚೆಸ್ಕಾಂ ಅಧೀಕ್ಷಕ ಎಂಜಿನಿಯರ್ ಮುನಿಗೋಪಾಲ ರಾಜ್ ಅವರ ಕಚೇರಿ, ಗೋಕುಲಂನಲ್ಲಿರುವ ಮನೆ, ಕನಕಪುರದಲ್ಲಿ ಇರುವ ಅವರ ಮನೆ ಮೇಲೆ ದಾಳಿಯಾಗಿದೆ.ಮೈಸೂರು ದಕ್ಷಿಣ ಸಾರಿಗೆ ಕಚೇರಿಯ ಪ್ರಥಮ ದರ್ಜೆ ಸಹಾಯಕ ಚನ್ನವೀರಪ್ಪ ಅವರಿಗೆ ಸೇರಿದ ಮಂಡ್ಯದ ಕುವೆಂಪುನಗರ, ಹಾಲಕೆರೆ ಗ್ರಾಮ ಮತ್ತು ಅವರ ಕಚೇರಿ ಮೇಲೆ ದಾಳಿ ನಡೆಸಲಾಗಿದೆ.ಯಾದಗಿರಿಯ ಜೆಸ್ಕಾಂ ಕಚೇರಿ ಲೆಕ್ಕಾಧಿಕಾರಿ ರಾಜು ಪತ್ತಾರ್ ಅವರ ಮನೆ ಮತ್ತು ಕಚೇರಿಯಲ್ಲಿ ಶೋಧ ನಡೆಯುತ್ತಿದೆ.ಬಿಎಂಎಫ್‌ಟಿ ಪೊಲೀಸ್ ಇನ್‌ಸ್ಪೆಕ್ಟರ್ ವಿಕ್ಟರ್ ಸಿಮೊನ್ ಅವರಿಗೆ ಸೇರಿದ ಬೆಂಗಳೂರು ಕಾವಲು ಬೈರಸಂದ್ರದಲ್ಲಿನ ಮನೆ, ಮೈಸೂರಿನಲ್ಲಿರುವ ಮಾವನ ಮನೆ, ಅವರು ಕರ್ತವ್ಯ ನಿರ್ವಹಿಸುತ್ತಿದ್ದ ಬೆಂಗಳೂರಿನ ಕಚೇರಿ ಮೇಲೆ ದಾಳಿ ನಡೆದಿದೆ.ಬಿಬಿಎಂಪಿ ಯಲಹಂಕ ವಲಯದ ನಗರ ಯೋಜನೆಗಳ ಕಿರಿಯ ಎಂಜಿನಿಯರ್ ಕೆ.ಸುಬ್ರಮಣ್ಯಂ ಅವರಿಗೆ ಸೇರಿದ ಶಂಕರನಗರದಲ್ಲಿನ ಮನೆ ಮತ್ತು ಕಚೇರಿಯಲ್ಲಿ ಶೋಧ ನಡೆಯುತ್ತಿದೆ.ದಾವಣಗೆರೆ ವಿಭಾಗದ ಫ್ಯಾಕ್ಟರೀಸ್ ಮತ್ತು ಬಾಯ್ಲರ್‌ನ ಉಪನಿರ್ದೇಶಕ ಕೆ.ಎಂ. ಪ್ರಥಮ್ ಅವರ ಬೆಂಗಳೂರಿನ ನಾಗಶೆಟ್ಟಿಹಳ್ಳಿ ಮನೆ, ಸಂಜಯನಗರದಲ್ಲಿನ ಸಹೋದರನ ಮನೆ ಮೇಲೆ ದಾಳಿ ನಡೆಸಲಾಗಿದೆ.ಕೆಲವರು ಐಷಾರಾಮಿ ಬೆಂಗಲೆಗಳನ್ನು ಹೊಂದಿದ್ದು, ಮನೆಯಲ್ಲಿ ನಗದು, ಚಿನ್ನ ಮತ್ತು ಬೆಳ್ಳಿ ಆಭರಣ, ದುಬಾರಿ ಬೆಲೆಯ ವಾಚುಗಳು, ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿದೆ. ಕಚೇರಿಯ ಕಡತಗಳನ್ನು ಮನೆಯಲ್ಲಿ ಇಟ್ಟುಕೊಂಡಿರುವುದೂ ಪತ್ತೆಯಾಗಿದೆ. ಎಲ್ಲಾ ಒಂಬತ್ತು ಅಧಿಕಾರಿಗಳ ಮನೆಗಳಲ್ಲಿ ಶೋಧ ಮುಂದುವರಿದಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
Last Updated 9 ಮಾರ್ಚ್ 2021, 4:03 IST
Photos| ಎಸಿಬಿ ದಾಳಿ ವೇಳೆ 9 ಅಧಿಕಾರಿಗಳ ಮನೆಯಲ್ಲಿ ಸಿಕ್ಕ ಸಂಪತ್ತು
err
ADVERTISEMENT
ADVERTISEMENT
ADVERTISEMENT