ಇತ್ತೀಚೆಗೆ ದೆಹಲಿಯಲ್ಲಿ ನಡೆದ ‘ಎಐ ಇಂಪ್ಯಾಕ್ಟ್’ ಶೃಂಗದಲ್ಲಿ ನಡೆದ ಘಟನೆಯೊಂದು ಜಾಗತಿಕವಾಗಿ ಗಮನ ಸೆಳೆಯಿತು. ವಿಶ್ವದ ವಿವಿಧ ಕಂಪನಿಗಳ ಸಿಇಒಗಳೊಂದಿಗೆ ಕೈ ಜೋಡಿಸಿ ಪ್ರಧಾನಿ ನರೇಂದ್ರ ಮೋದಿ ‘ಐಕ್ಯ ಮಂತ್ರ’ ಪ್ರದರ್ಶಿಸುವಾಗ, ಒಪನ್ ಎಐ ಸಿಇಒ ಸ್ಯಾಮ್ ಆಲ್ಟ್ಮನ್ ಹಾಗೂ ಆಂಥ್ರೋಪಿಕ್ ಸಿಇಒ ಡಾರಿಯೊ ಅಮೊಡೆ ಅವರು ಪರಸ್ಪರ ಕೈಜೋಡಿಸದೇ ಇದ್ದ ದೃಶ್ಯ ಭಾರಿ ಚರ್ಚೆಗೆ ಗ್ರಾಸವಾಯಿತು. ಆ ದೃಶ್ಯಗಳು ಅವರಿಬ್ಬರ ನಡುವೆ ಇರುವ ವೈರತ್ವ ಹಾಗೂ ಎರಡು ಕಂಪನಿಗಳ ನಡುವೆ ಇರುವ ‘ಸಮರ’ವನ್ನೂ ಸೂಚಿಸುವಂತಿತ್ತು.
.ಆಳ-ಅಗಲ: ಐಟಿ ಕೆಲಸಕ್ಕೆ ಎಐ ಟೂಲ್ ಕನ್ನ?.
ಇವರಿಬ್ಬರ ನಡುವಿನ ಸಂಘರ್ಷ ಚಾಟ್– ಜಿಪಿಟಿ ಬಿಡುಗಡೆಯಾಗುವುದಕ್ಕೂ ಮುನ್ನ ಆರಂಭವಾಗಿತ್ತು. ಆಗಿನ್ನೂ ಚಾಟ್ಜಿಪಿಟಿ ಸಂಶೋಧನೆ ಹಂತದಲ್ಲಿತ್ತು. ಓಪನ್-ಎಐನ ಸಂಶೋಧನಾ ವಿಭಾಗದ ಉಪಾಧ್ಯಕ್ಷರಾಗಿದ್ದ ಡಾರಿಯೊ ಅಮೊಡೆ ಕಂಪನಿಯಿಂದ ಹೊರಬಂದರು.

ಎಐ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂಬುದು ಅಮೊಡೆ ನಿಲುವಾಗಿತ್ತು. ಆದರೆ ಓಪನ್ ಎಐ ಸಂಸ್ಥೆಯು ತನ್ನ ತಂತ್ರಜ್ಞಾನವನ್ನು ಅತಿ ವೇಗವಾಗಿ ಬೆಳೆಸಲು, ಬಿಡುಗಡೆ ಮಾಡಲು ಆಸಕ್ತಿ ಹೊಂದಿತ್ತು. ಈ ವೇಗದ ಭರಾಟೆಯಲ್ಲಿ ಸುರಕ್ಷತೆ ನಿರ್ಲಕ್ಷ್ಯವಾಗಬಹುದು ಎಂಬುದು ಅಮೊಡೆ ಅವರ ಆತಂಕವಾಗಿತ್ತು. ಅಲ್ಲದೆ ಲಾಭರಹಿತ ಸಂಸ್ಥೆಯಾಗಿ ರೂಪುಗೊಂಡು, ಬಳಿಕ ಅದನ್ನು ವಾಣಿಜ್ಯೀಕರಣ ಮಾಡಿದ್ದೂ ಕೂಡ ಅಮೊಡೆ ಅವರ ಅಸಮಾಧಾನಕ್ಕೆ ಕಾರಣವಾಗಿತ್ತು. ಜೊತೆಗೆ ಆಡಳಿತಾತ್ಮಕ ಭಿನ್ನಾಭಿಪ್ರಾಯವೂ ಸ್ಯಾಮ್ ಹಾಗೂ ಅಮೊಡೊ ನಡುವಿನ ಸಂಬಂಧ ಹಳಸಲು ಕಾರಣವಾಗಿತ್ತು.

ಈ ಭಿನ್ನಾಭಿಪ್ರಾಯವೇ ಸಿಲಿಕಾನ್ ವ್ಯಾಲಿಯಲ್ಲಿ ಮತ್ತೊಂದು ಎ.ಐ ಬಿರುಗಾಳಿಗೆ ಕಾರಣವಾಯಿತು. ಹೆಚ್ಚು ಪಾರದರ್ಶಕ ಮತ್ತು ಸುರಕ್ಷಿತ ಎ.ಐ ಅನ್ನು ಅಭಿವೃದ್ಧಿಪಡಿಸಲು ಸಹೋದರಿ ಡೇನಿಯಲಾ ಅಮೊಡೆ ಮತ್ತು ಇತರ ಕೆಲವು ಪ್ರಮುಖ ಸಂಶೋಧಕರೊಂದಿಗೆ ಒಪನ್–ಎಐ ತೊರೆದ ಅಮೊಡೆ ಆಂಥ್ರೋಪಿಕ್ ಹುಟ್ಟು ಹಾಕಿದರು. ಎ.ಐ ಜಗತ್ತನ್ನು ಹಿಡಿತಕ್ಕೆ ತೆಗೆದುಕೊಳ್ಳಲು ಇದೀಗ ಎರಡೂ ಕಂಪನಿಗಳ ನಡುವೆ ಪೈಪೋಟಿ ನಡೆಯುತ್ತಿದೆ.
.‘ಒಪ್ಪಂದಗಳ ತಾಯಿ’ಗೆ ದಾರಿ ‘ಮುಕ್ತ’: ಭಾರತದ ಇತಿಹಾಸ ಕಂಡ ಅತಿದೊಡ್ಡ ಒಪ್ಪಂದ ಅಂತಿಮ.
ಸಿಲಿಕಾನ್ ವ್ಯಾಲಿಯ ಕೃತಕ ಬುದ್ಧಿಮತ್ತೆ ಚಟುವಟಿಕೆ ಆರಂಭಿಕ ದಿನಗಳಲ್ಲಿ ಒಂದಾಗಿದ್ದ ಓಪನ್-ಎಐ ಮತ್ತು ಆಂಥ್ರೋಪಿಕ್, ಇಂದು ಜಾಗತಿಕ ಮಾರುಕಟ್ಟೆಯಲ್ಲಿ ನೇರ ಪ್ರತಿಸ್ಪರ್ಧಿಗಳಾಗಿ ನಿಂತಿವೆ. ಮಾರುಕಟ್ಟೆ ವಿಸ್ತರಿಸಲು ಉಭಯ ಕಂಪನಿಗಳ ನಡುವೆ ತೀವ್ರ ಸ್ಪರ್ಧೆ ನಡೆಯುತ್ತಿದೆ. ಓಪನ್–ಎಐನ ‘ಚಾಟ್ ಜಿಪಿಟಿ’ ಹಾಗೂ ಆಂಥ್ರೋಪಿಕ್ನ ‘ಕ್ಲಾಡ್’ ಜಾಗತಿಕ ಮಾರುಕಟ್ಟೆಯಲ್ಲಿ ತಲ್ಲಣ ಉಂಟು ಮಾಡುತ್ತಿದೆ. ಮಾರುಕಟ್ಟೆ ವಿಸ್ತರಿಸುವ ಜಾಗತಿಕ ಪೈಪೋಟಿಗೆ ಈಗ ಭಾರತವು ಅತ್ಯಂತ ಪ್ರಮುಖ ಅಖಾಡವಾಗಿ ಮಾರ್ಪಟ್ಟಿದೆ.

ಭಾರತದ ಡಿಜಿಟಲ್ ವ್ಯಾಪ್ತಿಯೇ ಈ ಕಂಪನಿಗಳು ಭಾರತದಲ್ಲಿ ಬಂಡವಾಳ ಹೂಡಲು ಪ್ರಮುಖ ಕಾರಣ. ಭಾರತದಲ್ಲಿ 80 ಕೋಟಿಗೂ ಹೆಚ್ಚು ಇಂಟರ್ನೆಟ್ ಬಳಕೆದಾರರಿದ್ದು, 2027ರ ವೇಳೆಗೆ ಭಾರತದ ಎ.ಐ ಮಾರುಕಟ್ಟೆ 17 ಶತಕೋಟಿ ಡಾಲರ್ ತಲುಪುವ ಅಂದಾಜಿದೆ. ಜಗತ್ತಿನ ಅತಿದೊಡ್ಡ ಸಾಫ್ಟ್ವೇರ್ ಡೆವಲಪರ್ ಸಮೂಹ ಭಾರತದಲ್ಲಿದೆ. ಈ ಎಲ್ಲಾ ಕಾರಣಗಳಿಂದಾಗಿ ಈ ಎರಡು ಸೇರಿ ಪ್ರಮುಖ ಎ.ಐ ಕಂಪನಿಗಳು ಭಾರತವನ್ನೇ ಗುರಿಯಾಗಿಸಿಕೊಂಡು ಮಾರುಕಟ್ಟೆ ವಿಸ್ತರಿಸುತ್ತಿವೆ.
.ಎಐನಿಂದ ಉದ್ಯೋಗ ಕಡಿತದ ಆತಂಕ: ಕೋವಿಡ್ಗಿಂತಲೂ ಭೀಕರ! ಇದು ಅಲೆಯಲ್ಲ ಚಂಡಮಾರುತ!.
ಸ್ಯಾಮ್ ಆಲ್ಟ್ಮನ್ ನೇತೃತ್ವದಲ್ಲಿ ಓಪನ್-ಎಐ ಭಾರತದ ಕಾರ್ಪೊರೇಟ್ ವಲಯದಲ್ಲಿ ಭದ್ರವಾಗಿ ನೆಲೆಯೂರಲು ಪ್ರಯತ್ನಿಸುತ್ತಿದೆ. ಮೈಕ್ರೋಸಾಫ್ಟ್ನ ಅಜೂರ್ (Azure) ಕ್ಲೌಡ್ ವೇದಿಕೆಯ ಮೂಲಕ ಭಾರತೀಯ ಕಂಪನಿಗಳಿಗೆ ಓಪನ್-ಎಐ ಮಾದರಿಗಳು ಲಭ್ಯವಿವೆ. ಅಲ್ಲದೆ ಟಾಟಾ ಸಮೂಹದೊಂದಿಗೆ ಮೈತ್ರಿ ಮಾಡುಕೊಂಡಿರುವ ಒಪನ್–ಎಐ, ಚಿಲ್ಲರೆ ಮಾರಾಟ, ಐಟಿ ಸೇವೆ ಮತ್ತು ಉತ್ಪಾದನಾ ವಲಯಗಳನ್ನು ಗುರಿಯಾಗಿಸಿಕೊಂಡಿದೆ. ಡಿಜಿಟಲ್ ಆಡಳಿತ ಮತ್ತು ಎಐ ಮಾರ್ಗಸೂಚಿಗಳ ಕುರಿತು ಭಾರತದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದೊಂದಿಗೂ ಓಪನ್-ಎಐ ಮಾತುಕತೆ ನಡೆಸುತ್ತಿದೆ.

ಅಮೆಜಾನ್ ಮತ್ತು ಗೂಗಲ್ ಬೆಂಬಲಿತ ಆಂಥ್ರೋಪಿಕ್, ತನ್ನ ‘ಕ್ಲಾಡ್’ (Claude) ಮಾಡೆಲ್ಗಳನ್ನು ಹೆಚ್ಚು ಸುರಕ್ಷಿತ ಮತ್ತು ಉದ್ಯಮ ಸ್ನೇಹಿ ಎಂದು ಹೇಳಿಕೊಂಡಿದೆ. ಇತ್ತೀಚೆಗೆ ಇನ್ಫೋಸಿಸ್ ಜೊತೆ ಆಂಥ್ರೋಪಿಕ್ ಒಡಂಬಡಿಕೆ ಮಾಡಿಕೊಂಡಿದ್ದು, ಬ್ಯಾಂಕಿಂಗ್, ಹಣಕಾಸು, ಇನ್ಶೂರೆನ್ಸ್. ಇ–ಕಾಮರ್ಸ್, ಆರೋಗ್ಯ ಕ್ಷೇತ್ರಗಳನ್ನು ಆಂಥ್ರೋಪಿಕ್ ಗುರಿಯಾಗಿಸಿಕೊಂಡಿದೆ.

ಮಾಡೆಲ್ಗಳ ಕಾರ್ಯಕ್ಷಮತೆ, ಬೆಲೆ ಮತ್ತು ದಕ್ಷತೆ ಹಾಗೂ ನೀತಿಗಳು ಭಾರತೀಯ ಮಾರುಕಟ್ಟೆಯಲ್ಲಿ ಪೈಪೋಟಿಯನ್ನು ನಿರ್ಧರಿಸಲಿವೆ. ಭಾರತದ ಪ್ರತಿಭಾವಂತ ಡೆವಲಪರ್ಗಳು ಮತ್ತು ಬೃಹತ್ ಮಾರುಕಟ್ಟೆಯು ಎ.ಐ ತಂತ್ರಜ್ಞಾನದ ಭವಿಷ್ಯವನ್ನು ನಿರ್ಧರಿಸಲಿದೆ. ಓಪನ್-ಎಐ ಮತ್ತು ಆಂಥ್ರೋಪಿಕ್ ನಡುವಿನ ಈ ಪೈಪೋಟಿಯು ಭಾರತದ ತಾಂತ್ರಿಕ ಬೆಳವಣಿಗೆಯನ್ನು ವೇಗಗೊಳಿಸುವುದಂತೂ ದಿಟ.
.ಇಂಡಿಯಾ ಎಐ ಮಿಷನ್: 49 ಕೋಟಿ ಜನರ ಸಬಲೀಕರಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.