ಭಾರತ ಕೃತಕ ಬುದ್ಧಿಮತ್ತೆ ಕೇಂದ್ರಿತವಾದ ಹೊಸದಾದ, ಆಸಕ್ತಿಕರ ಅಧ್ಯಾಯವೊಂದನ್ನು ಆರಂಭಿಸುತ್ತಿದೆ. ಇಲ್ಲಿ, ಸ್ಮಾರ್ಟ್ ತಂತ್ರಜ್ಞಾನ ನಮ್ಮ ಜೀವನದ ಪ್ರತಿಯೊಂದು ಹಂತವನ್ನೂ ತಲುಪಿ, ದೇಶವನ್ನು ಇನ್ನಷ್ಟು ಮುನ್ನಡೆಸಲಿದೆ. ಇಂದು ಎಐ ಕೇವಲ ಸಂಶೋಧನಾ ಪ್ರಯೋಗಾಲಯಗಳಿಗೆ ಸೀಮಿತವಾಗಿಲ್ಲ, ಅಥವಾ ಬೃಹತ್ ಕಂಪನಿಗಳಲ್ಲಿ ಮಾತ್ರವೇ ಬಳಕೆಯಾಗುತ್ತಿಲ್ಲ. ಇಂದು ಎಐ ನನ್ನ ನಿಮ್ಮಂತಹ ಜನ ಸಾಮಾನ್ಯರನ್ನೂ ತಲುಪುತ್ತಿದೆ. ಗ್ರಾಮೀಣ ಪ್ರದೇಶಗಳಿಗೆ ಉತ್ತಮ ವೈದ್ಯಕೀಯ ಸೇವೆಯನ್ನು ತಲುಪಿಸುವುದರಿಂದ, ರೈತರಿಗೆ ಯಾವ ಬೆಳೆಗಳನ್ನು ಬೆಳೆಯಬೇಕು ಎಂದು ನಿರ್ಧರಿಸಲು ನೆರವಾಗುವ ತನಕ, ಎಐ ನಮ್ಮ ದೈನಂದಿನ ಜೀವನದ ಕಾರ್ಯ ಚಟುವಟಿಕೆಗಳನ್ನು ಸರಳ, ಸ್ಮಾರ್ಟ್ ಮತ್ತು ಹೆಚ್ಚು ದಕ್ಷವಾಗುವಂತೆ ಮಾಡುತ್ತಿದೆ. ನಾವು ಹೇಗೆ ವೈಯಕ್ತಿಕೀಕರಿಸಿದ ಪಾಠಗಳನ್ನು ಕಲಿಯಬಹುದು, ನಮ್ಮ ನಗರಗಳನ್ನು ಹೇಗೆ ಸ್ವಚ್ಛ ಮತ್ತು ಸುರಕ್ಷಿತವಾಗಿಸಬಹುದು, ಮತ್ತು ಸ್ಮಾರ್ಟ್, ಮಾಹಿತಿ ಆಧಾರಿತ ನಿರ್ಧಾರಗಳ ಮೂಲಕ ಸರ್ಕಾರಿ ಸೇವೆಗಳನ್ನು ಹೇಗೆ ವೇಗವಾಗಿಸಬಹುದು ಎನ್ನುವ ಬದಲಾವಣೆಗಳನ್ನೂ ಎಐ ತರುತ್ತಿದೆ.

ಇಂಡಿಯಾ ಎಐ ಮಿಷನ್ ಮತ್ತು ಎಐ ಸೆಂಟರ್ಸ್ ಆಫ್ ಎಕ್ಸಲೆನ್ಸ್ ರೀತಿಯ ದೊಡ್ಡ ಯೋಜನೆಗಳು ಈ ಬದಲಾವಣೆಗೆ ಇನ್ನಷ್ಟು ವೇಗ ತುಂಬಿವೆ. ಈ ಯೋಜನೆಗಳು ಸೂಪರ್ ಕಂಪ್ಯೂಟರ್ಗಳನ್ನು ಎಲ್ಲರಿಗೂ ಲಭ್ಯವಾಗುವಂತೆ ಮಾಡಿದ್ದು, ಹೊಸ ಸಂಶೋಧನೆಗಳಿಗೆ ಹೂಡಿಕೆ ಒದಗಿಸಿ, ಜನರಿಗೆ ನೇರವಾಗಿ ನೆರವಾಗುವಂತಹ ಪರಿಹಾರೋಪಾಯಗಳನ್ನು ನಿರ್ಮಿಸಲು ಸ್ಟಾರ್ಟಪ್ ಸಂಸ್ಥೆಗಳಿಗೆ ಸಹಾಯ ಮಾಡುತ್ತಿವೆ. ಭಾರತದ ಕಾರ್ಯತಂತ್ರ ಸರಳ ಮತ್ತು ನೇರವಾಗಿದೆ: ಎಐ ಅನ್ನು ಮುಕ್ತವಾಗಿ, ಕೈಗೆಟುಕುವ ದರದಲ್ಲಿ ಲಭಿಸುವಂತೆ ಮತ್ತು ಸುಲಭವಾಗಿ ಬಳಸಲು ಸಾಧ್ಯವಾಗುವಂತೆ ಮಾಡಿ, ಕೇವಲ ಕೆಲವು ಜನರಿಗೆ ಮಾತ್ರವಲ್ಲದೆ, ಎಲ್ಲರೂ ಅದರ ಪ್ರಯೋಜನ ಪಡೆಯುವಂತೆ ಮಾಡುವುದು.

ಹಾಗಾದರೆ ಈ ಎಐ ಎಂದರೆ ನಿಜಕ್ಕೂ ಏನು?

ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಎಂದರೆ, ಸಾಮಾನ್ಯವಾಗಿ ಮನುಷ್ಯರ ಮೆದುಳಿನ ನೆರವು ಬೇಕಾಗುವ ಕೆಲಸಗಳನ್ನು ಯಂತ್ರಗಳಿಗೆ ಸ್ವತಃ ತಾವೇ ಮಾಡಲು ಸಾಧ್ಯವಾಗುವಂತೆ ಕಲಿಸುವುದು. ಇದು ಕಂಪ್ಯೂಟರ್ ಸಿಸ್ಟಮ್ಗಳಿಗೆ ತಮ್ಮ ಅನುಭವದಿಂದ ಕಲಿಯಲು, ಹೊಸ ಸವಾಲುಗಳಿಗೆ ಹೊಂದಿಕೊಳ್ಳಲು, ಮತ್ತು ಸಂಕೀರ್ಣ ಸವಾಲುಗಳನ್ನು ತಾವೇ ಪರಿಹರಿಸಲು ಅನುಮತಿಸುತ್ತದೆ. ಎಐ ಮಾಹಿತಿಗಳನ್ನು (ಡೇಟಾ), ಸೂಚನೆಗಳನ್ನು (ಅಲ್ಗಾರಿದಂಗಳು), ಮತ್ತು ಆಧುನಿಕ ಭಾಷಾ ಮಾದರಿಗಳನ್ನು ಬಳಸಿಕೊಂಡು, ಬಳಕೆದಾರರಿಗೆ ಪರಿಹಾರಗಳನ್ನು ಒದಗಿಸುತ್ತವೆ. ಕಾಲ ಕ್ರಮೇಣ ಈ ಸಿಸ್ಟಮ್ಗಳು ತಮ್ಮ ಕೆಲಸಗಳಲ್ಲಿ ತಾವು ಇನ್ನಷ್ಟು ಸುಧಾರಿಸಿ, ಬಹುತೇಕ ಮಾನವರ ರೀತಿಯಲ್ಲೇ ಸ್ಪಷ್ಟವಾಗಿ ಆಲೋಚಿಸಿ, ನಿರ್ಧಾರಗಳನ್ನು ಕೈಗೊಂಡು, ಸಂವಹನ ನಡೆಸಲು ಸಾಧ್ಯವಾಗುತ್ತದೆ.

ನೀತಿ ಆಯೋಗದ ಇತ್ತೀಚಿನ ವರದಿ ಎಐ ಹೇಗೆ ಭಾರತದ 90% ಕಾರ್ಮಿಕರ ಪಾಲು ಹೊಂದಿರುವ 49 ಕೋಟಿ ಅನೌಪಚಾರಿಕ ಕಾರ್ಮಿಕರಿಗೆ ಬೆಂಬಲ ನೀಡಬಹುದು ಎಂದು ವಿವರಿಸಿದೆ. ಈ ಕಾರ್ಮಿಕ ವರ್ಗ ದಿನಗೂಲಿ ಸಂಪಾದಿಸುವವರು, ಬೀದಿ ಬದಿ ವ್ಯಾಪಾರಿಗಳು, ಸಣ್ಣ ಮಳಿಗೆಗಳ ಮಾಲಕರನ್ನು ಒಳಗೊಂಡಿದ್ದು, ಅವರಿಗೆ ಉತ್ತಮ ಆರೋಗ್ಯ ಸೇವೆ, ಶಿಕ್ಷಣ, ಕೌಶಲ್ಯ ತರಬೇತಿ, ಮತ್ತು ಬ್ಯಾಂಕಿಂಗ್ ಸೇವೆಗಳನ್ನು ಒದಗಿಸಿ, ಎಐ ಪ್ರಯೋಜನ ಎಲ್ಲ ಭಾರತೀಯರಿಗೂ ತಲುಪುವಂತೆ ಮಾಡಲಿದೆ.

ಬೆಳೆಯುತ್ತಿರುವ ಭಾರತದ ಎಐ ವಲಯ

ಭಾರತದ ತಂತ್ರಜ್ಞಾನ ವಲಯ ವೇಗವಾಗಿ ಬೆಳೆಯುತ್ತಿದೆ. ಈ ವರ್ಷ, ತಂತ್ರಜ್ಞಾನ ವಲಯದ ಆದಾಯ 280 ಬಿಲಿಯನ್ ಡಾಲರ್ (ಅಂದಾಜು 25.2 ಲಕ್ಷ ಕೋಟಿ) ಮೌಲ್ಯವನ್ನು ದಾಟುವ ನಿರೀಕ್ಷೆಗಳಿವೆ. ಭಾರತದ ತಂತ್ರಜ್ಞಾನ ಮತ್ತು ಎಐ ವಲಯದಲ್ಲಿ 60 ಲಕ್ಷಕ್ಕೂ ಹೆಚ್ಚು ಜನರು ಉದ್ಯೋಗ ಮಾಡುತ್ತಿದ್ದಾರೆ. ಭಾರತದ ಬಳಿ 1,800ಕ್ಕೂ ಹೆಚ್ಚು ಗ್ಲೋಬಲ್ ಕೆಪಾಬಿಲಿಟಿ ಸೆಂಟರ್ಗಳು (ಅಂತಾರಾಷ್ಟ್ರೀಯ ಕಂಪನಿಗಳು ತಮ್ಮ ತಂತ್ರಜ್ಞಾನ, ಸಂಶೋಧನೆಗಳನ್ನು ನಡೆಸುತ್ತಾ, ಭಾರತದಲ್ಲಿನ ಕಾರ್ಯಾಚರಣೆಗೆ ಬೆಂಬಲ ನೀಡುವ ಕಚೇರಿಗಳು) ಕಾರ್ಯಾಚರಿಸುತ್ತಿದ್ದು, ಅವುಗಳಲ್ಲಿ 500ಕ್ಕೂ ಹೆಚ್ಚು ಕೇಂದ್ರಗಳು ಎಐ ಕಡೆಗೆ ಗಮನ ಕೇಂದ್ರೀಕರಿಸಿವೆ.

ಭಾರತದ ಬಳಿ 1.8 ಲಕ್ಷ ಸ್ಟಾರ್ಟಪ್ಗಳಿದ್ದು, ಅವುಗಳಲ್ಲಿ ಬಹುತೇಕ 89% ಸ್ಟಾರ್ಟಪ್ಗಳು ತಮ್ಮ ಉತ್ಪನ್ನಗಳಲ್ಲಿ ಎಐ ಅನ್ನೂ ಅಂತರ್ಗತಗೊಳಿಸಿವೆ. ನಾಸ್ಕಾಮ್ ಸಂಸ್ಥೆಯ ಎಐ ಅಡಾಪ್ಷನ್ ಇಂಡೆಕ್ಸ್ ವರದಿಯ ಪ್ರಕಾರ, ಭಾರತ 4ರಲ್ಲಿ 2.45 ಅಂಕಗಳನ್ನು ಗಳಿಸಿದೆ. ಅಂದರೆ, ಭಾರತದ 87% ಕಂಪನಿಗಳು ಸಕ್ರಿಯವಾಗಿ ಎಐ ಪರಿಹಾರಗಳನ್ನು ಬಳಸುತ್ತಿವೆ. ಎಐ ಇಂದು ಉತ್ಪಾದನೆ, ಆಟೋಮೊಬೈಲ್, ಗ್ರಾಹಕ ಉತ್ಪನ್ನಗಳು, ಚಿಲ್ಲರೆ ವ್ಯಾಪಾರ ಉದ್ಯಮ, ಬ್ಯಾಂಕಿಂಗ್, ವಿಮೆ, ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಹೆಚ್ಚಿನ ಬಳಕೆ ಹೊಂದಿದೆ. ಈ ಉದ್ಯಮಗಳೇ ಎಐನ ಒಟ್ಟು ಆರ್ಥಿಕ ಮೌಲ್ಯದ 60% ಪಾಲು ಹೊಂದಿವೆ.

ಸ್ಟಾನ್ಫೋರ್ಡ್ ಎಐ ಇಂಡೆಕ್ಸ್ ವರದಿಯ ಪ್ರಕಾರ, ಭಾರತ ಎಐ ಸ್ಪರ್ಧಾತ್ಮಕತೆಯಲ್ಲಿ ಜಾಗತಿಕವಾಗಿ 3ನೇ ಸ್ಥಾನದಲ್ಲಿದ್ದು, ಕೇವಲ ಅಮೆರಿಕ ಮತ್ತು ಚೀನಾಗಳಿಂದ ಹಿಂದುಳಿದಿದೆ. ಕಳೆದ ವರ್ಷ ಏಳನೇ ಸ್ಥಾನದಲ್ಲಿದ್ದ ಭಾರತ ಈಗ ಸಾಕಷ್ಟು ಮೇಲಕ್ಕೇರಿದೆ. ಇನ್ನು ಗಿಟ್ಹಬ್ನಲ್ಲಿ (ಜಗತ್ತಿನಾದ್ಯಂತ ಡೆವಲಪರ್ಗಳು ಜೊತೆಯಾಗಿ ಸಾಫ್ಟ್ವೇರ್ ಬರೆಯುವ, ಹಂಚಿಕೊಳ್ಳುವ, ಮತ್ತು ಸಾಫ್ಟ್ವೇರ್ ಅಭಿವೃದ್ಧಿಪಡಿಸುವ ಆನ್ಲೈನ್ ವೇದಿಕೆ) ಭಾರತ ಎರಡನೇ ಅತಿದೊಡ್ಡ ಕೊಡುಗೆ ನೀಡುವ ದೇಶವಾಗಿದೆ. ಇದು ಭಾರತದ ಬೃಹತ್ ಕುಶಲ ಪ್ರೋಗ್ರಾಮರ್ಗಳ ಬಹುದೊಡ್ಡ ಸಮೂಹವನ್ನು ಸಾಬೀತುಪಡಿಸಿದೆ.

ಇಂಡಿಯಾಎಐ ಮಿಷನ್

ʼಭಾರತದಲ್ಲಿ ಎಐ ನಿರ್ಮಾಣ ಮತ್ತು ಭಾರತಕ್ಕಾಗಿ ಕಾರ್ಯಾಚರಿಸುವ ಎಐ ನಿರ್ಮಾಣʼ ಎನ್ನುವ ದೂರದೃಷ್ಟಿಯಿಂದ ಭಾರತ ಸರ್ಕಾರ ಮಾರ್ಚ್ 2024ರಲ್ಲಿ ಇಂಡಿಯಾ ಎಐ ಯೋಜನೆಯನ್ನು ಆರಂಭಿಸಿತು. ಇದಕ್ಕಾಗಿ ಸರ್ಕಾರ ಐದು ವರ್ಷಗಳ ಅವಧಿಗೆ 10,371.92 ಕೋಟಿ ರೂಪಾಯಿಯನ್ನು ನಿಯೋಜಿಸಿದೆ.

ಈ ಯೋಜನೆ ಭಾರತದ ಕಂಪ್ಯೂಟಿಂಗ್ ಸಾಮರ್ಥ್ಯಕ್ಕೆ ಅಸಾಧಾರಣ ಉತ್ತೇಜನ ನೀಡಿದೆ. ಆರಂಭದಲ್ಲಿ 10,000 ಜಿಪಿಯುಗಳನ್ನು (ಸಾಮಾನ್ಯ ಪ್ರೊಸೆಸರ್ಗಳಿಂದ ಹೆಚ್ಚು ವೇಗವಾಗಿ ಮಾಹಿತಿಗಳನ್ನು ಸಂಸ್ಕರಿಸುವ ವಿಶೇಷ ಕಂಪ್ಯೂಟರ್ ಚಿಪ್ಗಳು – ಇವನ್ನು 1,000 ಸಾಮಾನ್ಯ ಕಂಪ್ಯೂಟರ್ಗಳು ಜೊತೆಯಾಗಿ ಕಾರ್ಯಾಚರಿಸುವ ಸೂಪರ್ ಚಾರ್ಜ್ಡ್ ಇಂಜಿನ್ ರೀತಿ ಪರಿಗಣಿಸಬಹುದು) ಹೊಂದುವ ಗುರಿ ಹಾಕಿಕೊಳ್ಳಲಾಗಿತ್ತು. ಆದರೆ, ಈಗ ಭಾರತದ ಬಳಿ 38,000 ಜಿಪಿಯುಗಳು ಲಭ್ಯವಿದ್ದು, ಪ್ರತಿ ಗಂಟೆಗೆ 65 ರೂಪಾಯಿ ವೆಚ್ಚದಲ್ಲಿ ಲಭ್ಯವಿದೆ. ಇದು ಎಐ ತರಬೇತಿಗೆ ಜಗತ್ತಿನ ಅತ್ಯಂತ ಕಡಿಮೆ ಬೆಲೆಯ ಸ್ಥಳವಾಗಿದೆ.

ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದಡಿ (MeitY) ಕಾರ್ಯಾಚರಿಸುವ ಇಂಡಿಯಾಎಐ ಯೋಜನೆ ನಾವೀನ್ಯತೆಗೆ ಬೆಂಬಲ ನೀಡುವ, ಸ್ಟಾರ್ಟಪ್ಗಳಿಗೆ ಬೆಂಬಲ ಒದಗಿಸುವ, ಮತ್ತು ಮಾಹಿತಿ ಲಭ್ಯತೆಯನ್ನು ಉತ್ತಮಗೊಳಿಸುವ ಮತ್ತು ಎಐ ಬಳಕೆಯನ್ನು ಜವಾಬ್ದಾರಿಯುತವಾಗಿಸುವ ಗುರಿ ಹೊಂದಿದೆ.

ಏಳು ಆಧಾರ ಸ್ತಂಭಗಳು:

ಈ ಯೋಜನೆ ಏಳು ಮಹಡಿಗಳ ಕಟ್ಟಡದ ರೀತಿಯಲ್ಲಿ ಕಾರ್ಯಾಚರಿಸುತ್ತಿದ್ದು, ಪ್ರತಿಯೊಂದು ಮಹಡಿಯೂ ಬೇರೆ ಬೇರೆ ಅವಶ್ಯಕತೆಗಳಿಗೆ ತಕ್ಕಂತೆ ಬೆಂಬಲ ಒದಗಿಸುತ್ತವೆ.

1. ಇಂಡಿಯಾಎಐ ಕಂಪ್ಯೂಟ್ ಸ್ತಂಭ - ಶಕ್ತಿಶಾಲಿ ಜಿಪಿಯುಗಳನ್ನು ಪ್ರತಿ ಗಂಟೆಗೆ ಕೇವಲ 65 ರೂಪಾಯಿಯ ಸಬ್ಸಿಡಿ ದರದಲ್ಲಿ ಒದಗಿಸುತ್ತದೆ.

2. ಇಂಡಿಯಾಎಐ ಅಪ್ಲಿಕೇಶನ್ ಅಭಿವೃದ್ಧಿ ಉಪಕ್ರಮ ಇದು ಆರೋಗ್ಯ, ಕೃಷಿ, ಹವಾಮಾನ ಬದಲಾವಣೆ, ಸರ್ಕಾರಿ ಸೇವೆಗಳು, ಮತ್ತು ಸಾರ್ವತ್ರಿಕ ಶಿಕ್ಷಣಕ್ಕೆ ಸಂಬಂಧಿಸಿದ ಎಐ ಪರಿಹಾರಗಳನ್ನು ಸೃಷ್ಟಿಸುತ್ತದೆ. ನೈಜ ಜಗತ್ತಿನ ಸಮಸ್ಯೆಗಳನ್ನು ಪರಿಹರಿಸುವ ರೀತಿಯಲ್ಲಿ 30 ಅಪ್ಲಿಕೇಶನ್ಗಳನ್ನು ಅಭಿವೃದ್ಧಿಪಡಿಸಲಾಗಿದೆ.

3. ಎಐಕೋಶ್ (ಡಾಟಾಸೆಟ್ ವೇದಿಕೆ) - ಇದು ಭಾರತದ ರಾಷ್ಟ್ರೀಯ ಎಐ ಡೇಟಾ ವೇದಿಕೆಯಾಗಿದ್ದು, 20ಕ್ಕೂ ಹೆಚ್ಚು ವಲಯಗಳಿಗೆ ಸಂಬಂಧಿಸಿದ 5,500ಕ್ಕೂ ಹೆಚ್ಚು ಡೇಟಾಸೆಟ್ಗಳು ಮತ್ತು 251 ಎಐ ಮಾಡೆಲ್ಗಳನ್ನು ಒಳಗೊಂಡಿದ್ದು, ಎಐ ಏಕಸ್ವಾಮ್ಯ ಉಂಟಾಗದಂತೆ ತಡೆಯಲು ಮತ್ತು ಡೆವಲಪರ್ಗಳಿಗೆ ಸಿದ್ಧ ಸಂಪನ್ಮೂಲಗಳನ್ನು ಒದಗಿಸಲು ನೆರವಾಗಲಿದೆ.

4. ಇಂಡಿಯಾಎಐ ಫೌಂಡೇಶನ್ ಮಾದರಿಗಳು - ಭಾರತೀಯ ಡೇಟಾ ಮತ್ತು ಭಾಷೆಗಳನ್ನು ಆಧರಿಸಿ, ಭಾರತದ ಸ್ವಂತ ಆಧುನಿಕ ಎಐ ಮಾದರಿಗಳನ್ನು ನಿರ್ಮಿಸುತ್ತದೆ. ಇದರ ಎರಡನೇ ಹಂತಕ್ಕಾಗಿ 12 ತಂಡಗಳನ್ನು ಆಯ್ಕೆ ಮಾಡಲಾಗಿದ್ದು, ಇದು ಸರ್ವಮ್ ಎಐ, ಸಾಕೆಟ್ ಎಐ, ಮತ್ತು ಐಐಟಿ ಬಾಂಬೆಯ ಭರತ್ ಜೆನ್ಗಳನ್ನು ಒಳಗೊಂಡಿದೆ. ಇದು ಭಾರತೀಯ ಧ್ವನಿಗಳು ಮತ್ತು ಬರಹಗಳನ್ನು ಮೂಲಕ್ಕೆ ಸರಿಯಾಗುವಂತೆ ಅರ್ಥ ಮಾಡಿಕೊಳ್ಳಬಲ್ಲ ಬೃಹತ್ ಬಹುರೂಪಿ ಮಾದರಿಗಳನ್ನು (ಲಾರ್ಜ್ ಮಲ್ಟಿಮೋಡಲ್ ಮಾಡೆಲ್ಸ್) ನಿರ್ಮಿಸಲಿದೆ.

5. ಇಂಡಿಯಾಎಐ ಫ್ಯೂಚರ್ ಸ್ಕಿಲ್ಸ್ - 500 ಪಿಎಚ್ಡಿ ವಿದ್ಯಾರ್ಥಿಗಳು, 5,000 ಸ್ನಾತಕೋತ್ತರ ವಿದ್ಯಾರ್ಥಿಗಳು ಮತ್ತು 8,000 ಪದವಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ. ಡೇಟಾ ಮತ್ತು ಎಐ ಪ್ರಯೋಗಾಲಯಗಳು ಸಣ್ಣ ನಗರಗಳಿಗೂ ತಲುಪುತ್ತಿದ್ದು, ಎನ್ಐಇಎಲ್ಐಟಿ (ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಇಲೆಕ್ಟ್ರಾನಿಕ್ಸ್ ಆಂಡ್ ಇನ್ಫಾರ್ಮೇಶನ್ ಟೆಕ್ನಾಲಜಿ – ಡಿಜಿಟಲ್ ಮತ್ತು ಐಟಿ ಕೌಶಲಗಳಲ್ಲಿ ಜನರಿಗೆ ತರಬೇತಿ ನೀಡುವ ಸರ್ಕಾರಿ ಸಂಸ್ಥೆ) 31 ಪ್ರಯೋಗಾಲಯಗಳನ್ನು ಆರಂಭಿಸಿದೆ. ಇಂತಹ ತರಬೇತಿಗಾಗಿ 174 ಐಟಿಐಗಳು ಮತ್ತು ಪಾಲಿಟೆಕ್ನಿಕ್ಗಳನ್ನು ಆಯ್ಕೆ ಮಾಡಲಾಗಿದೆ.

6. ಇಂಡಿಯಾಎಐ ಸ್ಟಾರ್ಟಪ್ ಫೈನಾನ್ಸಿಂಗ್ - ಇಂಡಿಯಾಎಐ ಸ್ಟಾರ್ಟಪ್ಸ್ ಗ್ಲೋಬಲ್ ಕಾರ್ಯಕ್ರಮ ಭಾರತದ 10 ಸ್ಟಾರ್ಟಪ್ಗಳಿಗೆ ಯುರೋಪಿಯನ್ ಮಾರುಕಟ್ಟೆ ಪ್ರವೇಶಿಸಲು ನೆರವಾಗಿ, ನಾವೀನ್ಯತೆಯನ್ನು ಉದ್ಯಮವಾಗಿಸುವ ಗುರಿ ಹೊಂದಿದೆ.

7. ಸುರಕ್ಷಿತ ಮತ್ತು ನಂಬಿಕಾರ್ಹ ಎಐ - ಪ್ರಬಲ ನಿಯಂತ್ರಣ ಮತ್ತು ನಿಯಮಗಳ ಮೂಲಕ ಎಐ ಬಳಕೆ ಜವಾಬ್ದಾರಿಯುತವಾಗಿರುವಂತೆ ಖಾತ್ರಿಪಡಿಸುತ್ತದೆ. 13 ಯೋಜನೆಗಳು ಈಗಾಗಲೇ ಎಐ ಸಿಸ್ಟಮ್ಗಳಿಂದ ಅನಗತ್ಯ ಮಾಹಿತಿ ತೆಗೆದುಹಾಕಲು, ಪಕ್ಷಪಾತ ಕಡಿಮೆಗೊಳಿಸಲು, ಖಾಸಗಿತನವನ್ನು ರಕ್ಷಿಸಲು, ಮತ್ತು ಎಐ ವ್ಯವಸ್ಥೆಗಳನ್ನು ಪರೀಕ್ಷಿಸಲು ಕಾರ್ಯಾಚರಿಸುತ್ತಿವೆ.

ಭಾರತದ ಎಐ ಕ್ರಾಂತಿ ಕೇವಲ ತಂತ್ರಜ್ಞಾನಕ್ಕೆ ಸೀಮಿತವಾಗಿಲ್ಲ. ಇದು ಪ್ರತಿಯೊಬ್ಬ ಭಾರತೀಯನೂ ಎಐನಲ್ಲಿ ಪಾಲ್ಗೊಂಡು, ಡಿಜಿಟಲ್ ಪರಿವರ್ತನೆಯ ಲಾಭ ಪಡೆಯುವಂತೆ ಮಾಡುವ ಉನ್ನತ ಗುರಿಯನ್ನು ಹೊಂದಿದೆ. ಕೈಗೆಟುಕುವ ದರದಲ್ಲಿ ಕಂಪ್ಯೂಟಿಂಗ್ ಶಕ್ತಿ, ದೇಶೀಯ ಎಐ ಮಾದರಿಗಳು ಮತ್ತು ಎಲ್ಲರನ್ನೂ ಒಳಗೊಂಡ ಅಭಿವೃದ್ಧಿಗೆ ಗಮನ ನೀಡುವುದರಿಂದ, ಭಾರತ ತನ್ನನ್ನು ತಾನು ಜಾಗತಿಕ ಎಐ ನಾಯಕನಾಗಿಸುವತ್ತ ಸಮಗ್ರ ಹೆಜ್ಜೆ ಇಡುತ್ತಿದೆ. ಈ ಬೆಳವಣಿಗೆಯಲ್ಲಿ ಯಾವ ಭಾರತೀಯರೂ ಹಿಂದುಳಿಯದಂತೆ ಖಾತ್ರಿ ಪಡಿಸಲಾಗುತ್ತಿದೆ.

(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.