ಮಂಗಳವಾರ, ಮಾರ್ಚ್ 28, 2023
22 °C

ಗುಬ್ಬಿ: ಎಸಿಬಿ ಬಲೆಗೆ ಬಿದ್ದಿದ್ದ ಪಿಎಸ್‌ಐ ವಿಚಾರಣೆ ವೇಳೆ ಠಾಣೆಯಿಂದ ಪರಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani Photo

ಗುಬ್ಬಿ: ತಾಲ್ಲೂಕಿನ ಸಿ.ಎಸ್.ಪುರ ಪೊಲೀಸ್ ಠಾಣೆಯಲ್ಲಿ ಬುಧವಾರ ಎಸಿಬಿ ಬಲೆಗೆ ಬಿದ್ದಿದ್ದ ಸಬ್‌ಇನ್ಸ್‌ಪೆಕ್ಟರ್ ಸೋಮಶೇಖರ್ ವಿಚಾರಣೆ ಸಮಯದಲ್ಲಿ ಓಡಿಹೋಗಿ ತಪ್ಪಿಸಿಕೊಂಡಿದ್ದಾರೆ.

ಠಾಣೆಯಿಂದ ಓಡಿ ಹೋಗಲು ಪ್ರಯತ್ನಿಸಿದಾಗ ಸಾರ್ವಜನಿಕರು ಬೆನ್ನಟ್ಟಿ ಹಿಡಿಯಲು ಪ್ರಯತ್ನ ನಡೆಸಿದ್ದಾರೆ. ಪೊಲೀಸರೊಬ್ಬರ ಬೈಕ್ ತೆಗೆದುಕೊಂಡು ಯಾರ ಕೈಗೂ ಸಿಗದೆ ಶರವೇಗದಲ್ಲಿ ಪರಾರಿಯಾಗಿದ್ದಾರೆ.

ಸಬ್‌ಇನ್ಸ್‌ಪೆಕ್ಟರ್ ಸೋಮಶೇಖರ್, ಹೆಡ್‌ ಕಾನ್‌ಸ್ಟೆಬಲ್ ನಯಾಜ್ ಅಹಮದ್ ಅವರು ಲಂಚದ ಹಣ ತೆಗೆದುಕೊಳ್ಳುತ್ತಿದ್ದಾಗ ಹಿಡಿದು ವಿಚಾರಣೆ ಮಾಡುತ್ತಿದ್ದ ಸಮಯದಲ್ಲಿ ಎಸಿಬಿ ಪೊಲೀಸರು ಬಂಧಿಸುವ ಭಯದಿಂದ ತಪ್ಪಿಸಿಕೊಂಡಿದ್ದಾರೆ ಎನ್ನಲಾಗಿದೆ.

ವಶಕ್ಕೆ ಪಡೆದಿದ್ದ ಚಂದ್ರಣ್ಣ ಎಂಬುವರ ಕಾರು ಬಿಡುಗಡೆ ಮಾಡಲು ನಯಾಜ್ ಅಹಮದ್ ಮೂಲಕ ಹಣಕ್ಕೆ ಒತ್ತಾಯಿಸಿದ್ದರು. ಮೊದಲ ಕಂತಿನಲ್ಲಿ ₹12 ಸಾವಿರವನ್ನು ಪಿಎಸ್ಐ ಪಡೆದುಕೊಂಡಿದ್ದು, ಉಳಿದ ₹16 ಸಾವಿರ ತೆಗೆದುಕೊಳ್ಳುತ್ತಿದ್ದ ವೇಳೆ ಎಸಿಬಿ ಬಲೆಗೆ ಬಿದ್ದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು