ಕನ್ನಡಿಗರ ಹೃದಯ ಕೋಗಿಲೆ ಗಂಗಮ್ಮ
ಕನ್ನಡಿಗರ ಹೃದಯ ಕೋಗಿಲೆ ಎಂದು ಖ್ಯಾತಿ ಪಡೆದ ಕೊಪ್ಪಳದ ಗಂಗಮ್ಮನದು ಅದ್ಭುತ ಪ್ರತಿಭೆ. ಕೂಲಿ ಕೆಲಸ ಮಾಡಿಕೊಂಡು ತಾನು ತನ್ನ ಮನೆ ಕೆಲಸವಾಯಿತು ಎಂದು ತನ್ನ ಪಾಡಿಗೆ ತಾನಿರುವ ಇಂಥ ಪ್ರತಿಭೆಯೊಂದು ಕೊಪ್ಪಳದಿಂದ ಹೊರಕ್ಕೆ ಪರಿಚಯವಾಗಲು ಎಷ್ಟೊಂದು ವರ್ಷಗಳೇ ಬೇಕಾದವು. ಹೌದು; ಕೊಪ್ಪಳದ ಗಂಗಮ್ಮನ ಹಾಡು ಕೇಳಿದರೆ ಎಸ್.ಜಾನಕಮ್ಮ ನೆನಪಾಗೋದು ಖಂಡಿತ. ಗಂಗಮ್ಮನ ಈ ಪ್ರತಿಭೆಯನ್ನು ಅವರೂರಿನ ಯುವಕರು ಗುರುತಿಸಿದ್ದರಿಂದ ಅವರು ಹಾಡಿದ ಹಾಡುಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಕೇಳುವಂತಾಗಿದೆ.Last Updated 2 ಅಕ್ಟೋಬರ್ 2018, 19:59 IST