ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2024: ಕಪ್ ಗೆಲ್ಲಲಾಗದ ಆರ್‌ಸಿಬಿ; ಟ್ರೋಲ್ ಮಾಡಿದ ಸಿಎಸ್‌ಕೆ ಫ್ಯಾನ್ಸ್

Published 23 ಮೇ 2024, 3:17 IST
Last Updated 23 ಮೇ 2024, 3:17 IST
ಅಕ್ಷರ ಗಾತ್ರ

ಬೆಂಗಳೂರು: ಐಪಿಎಲ್ ಟೂರ್ನಿಯಲ್ಲಿ ಚೊಚ್ಚಲ ಟ್ರೋಫಿ ಗೆಲ್ಲಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮತ್ತಷ್ಟು ಸಮಯ ಕಾಯಬೇಕಿದೆ. ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಸೋಲುವುದರೊಂದಿಗೆ ಐಪಿಎಲ್‌ ಟೂರ್ನಿಯಲ್ಲಿ ಟ್ರೋಫಿ ಜಯಿಸುವ ಆರ್‌ಸಿಬಿ ತಂಡದ ಕನಸು ಸತತ 17ನೇ ವರ್ಷವೂ ಕಮರಿತು.

ಇದರಿಂದಾಗಿ ಆರ್‌ಸಿಬಿ ಅಭಿಮಾನಿಗಳಿಗೂ ಭಾರಿ ನಿರಾಸೆ ಉಂಟಾಗಿದೆ. ಮತ್ತೊಂದೆಡೆ ಆರ್‌ಸಿಬಿ ತಂಡದ ಸೋಲಿನ ಕುರಿತು ಮೀಮ್ಸ್‌ಗಳು ಹರಿದಾಡುತ್ತಿವೆ.

ಚೆನ್ನೈ ಸೂಪರ್ ಕಿಂಗ್ಸ್ ಅಧಿಕೃತ ಫ್ಯಾನ್ಸ್ ಪುಟದಲ್ಲಿ ಆರ್‌ಸಿಬಿ ಸೋಲನ್ನು ಟ್ರೋಲ್ ಮಾಡಲಾಗಿದೆ. 'ಕರ್ಮ' ಗುರಿಯಿಟ್ಟವನ ಬಳಿಗೇ ತಿರುಗು ಬಾಣದಂತೆ ಹಿಂತಿರುಗಲಿದೆ ಎಂದು ಟ್ರೋಲ್ ಮಾಡಲಾಗಿದೆ.

ಬೆಂಗಳೂರಿನಲ್ಲಿ ನಡೆದ ಗೆಲ್ಲಲೇಬೇಕಾದ ಪಂದ್ಯದಲ್ಲಿ ಸಿಎಸ್‌ಕೆ ತಂಡವನ್ನು ಮಣಿಸಿದ್ದ ಆರ್‌ಸಿಬಿ ಪ್ಲೇ-ಆಫ್‌ಗೆ ಪ್ರವೇಶಿಸಿತ್ತು. ಮತ್ತೊಂದೆಡೆ ಸಿಎಸ್‌ಕೆ ಟ್ರೋಫಿ ಕನಸು ಭಗ್ನಗೊಂಡಿತ್ತು. ಇದರಿಂದಾಗಿ ಸಾಮಾಜಿಕ ಮಾಧ್ಯಮದಲ್ಲಿ ಸಿಎಸ್‌ಕೆ ಹಾಗೂ ಆರ್‌ಸಿಬಿ ಅಭಿಮಾನಿಗಳ ನಡುವೆ ಟ್ರೋಲ್ ವಾರ್ ಸೃಷ್ಟಿಯಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT