ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

7ನೇ ವೇತನ ಆಯೋಗ ಶಿಫಾರಸು ಜೂನ್‌ನಲ್ಲಿ ಜಾರಿ ಸಾಧ್ಯತೆ: ಷಡಾಕ್ಷರಿ ವಿಶ್ವಾಸ

ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಾಕ್ಷರಿ ವಿಶ್ವಾಸ
Published 21 ಮೇ 2024, 13:31 IST
Last Updated 21 ಮೇ 2024, 13:31 IST
ಅಕ್ಷರ ಗಾತ್ರ

ಮಂಗಳೂರು: ಏಳನೇ ವೇತನ ಆಯೋಗದ ಶಿಫಾರಸುಗಳು ಜೂನ್‌ನಲ್ಲಿ ಜಾರಿಯಾಗುವ ಸಾಧ್ಯತೆ ಇದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಹೇಳಿದರು.

ಅವರು ಮಂಗಳವಾರ ಹಂಪನಕಟ್ಟೆಯಲ್ಲಿರುವ ರಾಜ್ಯ ಸರ್ಕಾರಿ ನೌಕರರ ಸಂಘದ ನವೀಕರಣಗೊಂಡ ಸಭಾಂಗಣ ಹಾಗೂ ಅಧ್ಯಕ್ಷರ ನೂತನ ಕೊಠಡಿ ಉದ್ಘಾಟಿಸಿ ಮಾತನಾಡಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 22 ಸಾವಿರ ರಾಜ್ಯ ಸರ್ಕಾರಿ ನೌಕರರಿದ್ದು, ಅವರ ಬೇಡಿಕೆಗಳ ಧ್ವನಿ ಎತ್ತಲು ಸಂಘ ವೇದಿಕೆಯಾಗಿದೆ. ಎಲ್ಲಾ ವರ್ಗಗಳಿಗೆ ಸೇರಿದ ನೌಕರರು ಒಂದು ಕುಟುಂಬದಂತೆ ಒಗ್ಗಟ್ಟಾಗಿದ್ದಾರೆ. ಹಳೆಯ ಪಿಂಚಣಿ ಯೋಜನೆಯನ್ನು ಶೀಘ್ರದಲ್ಲಿ ಪುನರಾರಂಭಿಸುವ ಬಗ್ಗೆ ಸರ್ಕಾರ ನಿರ್ಧರಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪಿ.ಕೆ. ಕೃಷ್ಣ ಮಾತನಾಡಿ, ‘ನಾನು ಅಧಿಕಾರಕ್ಕೆ ಬಂದ ನಂತರ ಸಂಘದಲ್ಲಿ ₹60ಲಕ್ಷ ಠೇವಣಿ ಇಟ್ಟಿದ್ದೇನೆ. ಸಂಘಕ್ಕೆ ತಿಂಗಳಿಗೆ ₹4.30 ಲಕ್ಷದವೆರೆಗೆ ಕಟ್ಟಡದ ಬಾಡಿಗೆ ಹಣ ಬರುತ್ತದೆ’ ಎಂದರು.

ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ಬಿ., ರಾಜ್ಯ ಖಜಾಂಜಿ ಸಿದ್ರಾಮಣ್ಣ, ರಾಜ್ಯ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಬಳ್ಳಾರಿ, ರಾಜ್ಯ ಗೌರವಾಧ್ಯಕ್ಷ ವೆಂಕಟೇಶಯ್ಯ ಬಿ.ಎಚ್, ರಾಜ್ಯ ಹಿರಿಯ ಉಪಾಧ್ಯಕ್ಷರಾದ ರುದ್ರಪ್ಪ ಎಂ.ವಿ, ಎಸ್.ಬಸವರಾಜು, ರಾಜ್ಯ ಉಪಾಧ್ಯಕ್ಷ ಮೋಹನ್ ಕುಮಾರ್, ರಾಜ್ಯ ಕಾರ್ಯದರ್ಶಿ ಸದಾನಂದ ನೆಲ್ಕುದ್ರಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಲಿಲ್ಲಿ ಪಾಯಸ್, ಜಿಲ್ಲಾ ಕಾರ್ಯದರ್ಶಿ ಗಣೇಶ್ ರಾವ್ ಎಚ್, ರಾಜ್ಯ ಪರಿಷತ್‌ ಸದಸ್ಯೆ ಶೆರ್ಲಿ ಸುಮಾಲಿನಿ, ಗೌರವ ಅಧ್ಯಕ್ಷ ಉದಯ ಕುಮಾರ್‌ ಇದ್ದರು.

ಆರೋಗ್ಯ ಇಲಾಖೆಯ ರಜನಿ ಪ್ರಾರ್ಥಿಸಿದರು. ಜಿಲ್ಲಾ ಖಜಾಂಚಿ ನವೀನ್‌ ಕುಮಾರ್‌ ಎಂ.ಎಸ್‌ ಸ್ವಾಗತಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT