ರಸ್ತೆಯಲ್ಲಿ ಹೊತ್ತಿ ಉರಿದ 'ಜಾಗ್ವಾರ್' ಕಾರು
ಬೆಂಗಳೂರು: ರಸ್ತೆಬದಿಯಲ್ಲಿ ನಿಂತಿದ್ದ ಐಷಾರಾಮಿ ಜಾಗ್ವಾರ್ ಕಾರೊಂದು ಮಾದನಾಯಕನಹಳ್ಳಿ ಬಳಿ ಹೊತ್ತಿ ಉರಿದಿದೆ.
ಬೆಂಗಳೂರಿನಿಂದ ತುಮಕೂರು ಕಡೆಗೆ ಹೋಗುತ್ತಿದ್ದ ಕಾರು ಇದ್ದಕ್ಕಿದ್ದಂತೆ ನಿಂತ ಕಾರಣ, ಬಾನೆಟ್ ತೆರೆಯಲಾಗಿತ್ತು. ಈ ವೇಳೆ ಬೆಂಕಿ ಹೊತ್ತಿ ಉರಿದಿದೆ. ತಾಂತ್ರಿಕ ದೋಷದಿಂದ ಕಾರಿನ ಬಾನೆಟ್‍ನಿಂದ ಬೆಂಕಿ ಕಾಣಿಸಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದರು.
ಕಾರಿನಲ್ಲಿದ್ದ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತುಮಕೂರು-ಬೆಂಗಳೂರು ಹೆದ್ದಾರಿಯಲ್ಲಿ ಕೆಲಕಾಲ ಸಂಚಾರ ದಟ್ಟಣೆಯಾಗಿತ್ತು.Last Updated 22 ನವೆಂಬರ್ 2020, 19:44 IST