ಆಲ್-ಎಲೆಕ್ಟ್ರಿಕ್ ಜಾಗ್ವಾರ್ ಐ-ಪೇಸ್, ಐರೋಪ್ಯ ವರ್ಷದ ಕಾರು 2019 ಪ್ರಶಸ್ತಿಗೆ ಆಯ್ಕೆಯಾಗಿದೆ. ಜಾಗ್ವಾರ್ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಗೆಲ್ಲುತ್ತಿರುವುದು ಇದೇ ಮೊದಲು. 23 ದೇಶಗಳಿಂದ ಬಂದ 60 ಮೋಟಾರು ಪತ್ರಿಕೋದ್ಯಮಿಗಳನ್ನು ಒಳಗೊಂಡ ಐರೋಪ್ಯ ವರ್ಷದ ಕಾರು ತೀರ್ಪುಗಾರರ ತಂಡ ಈ ಪ್ರಶಸ್ತಿಯನ್ನು ನಿರ್ಣಯಿಸುತ್ತದೆ. ತಾಂತ್ರಿಕ ಆವಿಷ್ಕಾರ, ವಿನ್ಯಾಸ, ಕಾರ್ಯಕ್ಷಮತೆ, ಸಾಮರ್ಥ್ಯ ಮತ್ತು ಹಣಕ್ಕಾಗಿ ಮೌಲ್ಯ- ಇವು ಪ್ರಶಸ್ತಿ ಆಯ್ಕೆಗಿರುವ ಮಾನದಂಡಗಳು.

‘ಜಾಗ್ವಾರ್ ಎಲೆಕ್ಟ್ರಿಕ್ ವಾಹನಕ್ಕೆ ಐರೋಪ್ಯ ವರ್ಷದ ಕಾರು ಪ್ರಶಸ್ತಿ ಸಂದಿರುವುದು ಹೆಮ್ಮೆಯ ಸಂಗತಿ. ತಾಂತ್ರಿಕವಾಗಿ ಇದು ಅತ್ಯಂತ ಮುಂದುವರಿದ ಬ್ಯಾಟರಿ ಎಲೆಕ್ಟ್ರಿಕ್ ವಾಹನ’ ಎನ್ನುತ್ತಾರೆ ಜಾಗ್ವಾರ್ ಲ್ಯಾಂಡ್ ರೋವರ್ನ ಪ್ರಧಾನ ಕಾರ್ಯಕಾರಿ ಅಧಿಕಾರಿ ಪ್ರೊ.ಡಾ. ರಾಲ್ಫ್ ಸ್ಪೆತ್ .

ಜಾಗ್ವಾರ್ ಐ-ಪೇಸ್, ಜಾಗತಿಕವಾಗಿ ಎಂಟು ಸಾವಿರಕ್ಕಿಂತ ಹೆಚ್ಚಿನ ಗ್ರಾಹಕರನ್ನು ಇದು ತಲುಪಿದೆ. ಇವುಗಳ ಪೈಕಿ ಶೇ 75ರಷ್ಟು ಯೂರೋಪ್ನಲ್ಲಿ ಮಾರಾಟವಾಗಿವೆ. ತನ್ನ ಎಲೆಕ್ಟ್ರಿಕ್ ಪವರ್ ಟ್ರೇನ್ ಹಾಗೂ ಬಿಸ್ಪೋಕ್ ಅಲ್ಯುಮಿನಿಯಮ್ ರಚನೆಯ ಸಂಪೂರ್ಣ ಪ್ರಯೋಜನ ಪಡೆಯುವುದಕ್ಕಾಗಿಯೇ ಇಂಜಿನಿಯರಿಂಗ್ ಮಾಡಲಾಗಿರುವ ಇದು ಸ್ಪೋರ್ಟ್ಸ್ ಕಾರ್ ಮತ್ತು ಎಸ್ಯುವಿಯ ಕಾರ್ಯಕ್ಷಮತೆ ನೀಡುತ್ತದೆ.

ಜಾಗ್ವಾರ್ ಸಾರ್ವಜನಿಕ ಚಾರ್ಜಿಂಗ್ ಸೇವೆಯನ್ನು ಬಳಸಿ ಗಾಹಕರು ಸುಲಭವಾಗಿ ಇದನ್ನು ಚಾರ್ಜ್ ಮಾಡಿಕೊಳ್ಳಬಹುದಾಗಿದೆ.

ಒಂದು ವರ್ಷದ ಹಿಂದೆ ಪರಿಚಯಿಸಲಾಗಿರುವ ಐ-ಪೇಸ್ ವಿಶ್ವವ್ಯಾಪಿಯಾಗಿ 55 ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ. ಇದರಲ್ಲಿ, ಜರ್ಮನ್, ನಾರ್ವೆ, ಯುಕೆ ವರ್ಷದ ಕಾರು, ಬಿಬಿಸಿ ಟಾಪ್ ಗೇರ್ ಮ್ಯಾಗಜೀನ್ ಇವಿ(ವಿದ್ಯುತ್ ವಾಹನ) ವರ್ಷದ ಕಾರು, ಚೀನಾದ ಹಸಿರು ವರ್ಷದ ಕಾರು ಮತ್ತು ಆಟೋಬೆಸ್ಟ್ನ ಎಕೋಬೆಸ್ಟ್ ಪ್ರಶಸ್ತಿಗಳು ಸೇರಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.