ಮಲ್ಪೆ ಸಮುದ್ರದಲ್ಲಿ ಕನ್ನಡದ ಕಂಪು: 4000ಕ್ಕೂ ಹೆಚ್ಚು ಮಂದಿಯಿಂದ ಗಾಯನ
ಉಡುಪಿಜಿಲ್ಲೆಯ ಇತಿಹಾಸದಲ್ಲಿ ಮೊದಲ ಬಾರಿಗೆ ಮಲ್ಪೆಯ ಸಮುದ್ರದ ಮಧ್ಯೆ ಕನ್ನಡದ ಕಹಳೆ ಮೊಳಗಿತು. 130ಕ್ಕೂ ಹೆಚ್ಚು ಬೋಟ್ಗಳಲ್ಲಿ 4000ಕ್ಕೂ ಹೆಚ್ಚು ಮಂದಿ ಭಾಗವಹಿಸಿ ಏಕಕಾಲದಲ್ಲಿ, ಏಕ ಕಂಠದಲ್ಲಿ ಶುಶ್ರಾವ್ಯವಾಗಿ ಕನ್ನಡದ ಗೀತೆಗಳನ್ನು ಹಾಡಿ ಸಂಭ್ರಮಿಸಿದರು. ಸಮುದ್ರದ ಅಲೆಗಳ ಸದ್ದನ್ನೂ ಮೀರಿಸುವಂತೆ ಕನ್ನಡದ ಧ್ವನಿ ಮಾರ್ಧನಿಸಿತು.Last Updated 28 ಅಕ್ಟೋಬರ್ 2022, 12:50 IST