ಉಡುಪಿ: ಫಸಲು ಮಾಗಿ ಕೊಯ್ಲಿಗೆ ಬಂದಿರುವ ಭತ್ತದ ಬೆಳೆ, ಗೊನೆ ಬಿಟ್ಟಿರುವ ಬಾಳೆ, ಮಿಡಿ ತುಂಬಿರುವ ಮಾವಿನ ಮರಗಳು, ಗಮನ ಸೆಳೆಯುವ ತರಾವರಿ ಹೂವಿನ ಗಿಡಗಳು, ಕೊಳದ ತುಂಬಾ ಮೀನುಗಳು, ಹಕ್ಕಿಗಳ ಇಂಚರ...

ಇದು ಯಾವುದೋ ಗ್ರಾಮೀಣ ಪ್ರದೇಶದ ರಮಣೀಯ ಸ್ಥಳವಲ್ಲ ಬದಲಾಗಿ ಮಲ್ಪೆ ಮೀನುಗಾರಿಕಾ ಬಂದರಿನ ಸನಿಹದಲ್ಲೇ ಇರುವ ಕರಾವಳಿ ಕಾವಲು ಪೊಲೀಸ್ ಕರ್ನಾಟಕದ (ಸಿಎಸ್ಪಿ) ಪ್ರಧಾನ ಕಚೇರಿ ಮತ್ತು ಠಾಣೆಯ ಆವರಣದ ಒಳಹೊಕ್ಕಾಗ ಕಾಣ ಸಿಗುವ ದೃಶ್ಯಗಳು.

ಯಾವುದೇ ಕೃಷಿ ಮಾಡಲು ಸಾಧ್ಯವಿಲ್ಲದ ಕಡಲ ತಡಿಯ ಮರಳಿನ ಮೇಲೆ ಇಂದು ತರಕಾರಿ, ತೋಟಗಾರಿಕಾ ಗಿಡಗಳು ತಲೆಎತ್ತಿ ನಿಂತಿವೆ.

ಸಿಎಸ್ಪಿ ಮಲ್ಪೆ ಠಾಣೆಯ ವಾಹನ ವಿಭಾಗದ ಹೆಡ್ ಕಾನ್ಸ್ಟೆಬಲ್ ಸಂತೋಷ್ ಶೆಟ್ಟಿ ಅವರ ಇಚ್ಛಾಶಕ್ತಿ ಹಾಗೂ ಹಿರಿಯ ಅಧಿಕಾರಿಗಳ ಪ್ರೋತ್ಸಾಹದಿಂದ ಠಾಣೆಯ ಆವರಣದ ಒಂದು ಎಕರೆ ಪ್ರದೇಶವು ಕೃಷಿ ಭೂಮಿಯಾಗಿ ಕಂಗೊಳಿಸುತ್ತಿದೆ.

ಪಿಎಚ್.ಡಿ. ಪದವೀಧರರಾದ ಬ್ರಹ್ಮಾವರದ ಸಾಲಿಕೇರಿಯ ಸಂತೋಷ್ ಶೆಟ್ಟಿ ಅವರು ಕೃಷಿ ಕುಟುಂಬದಿಂದ ಬಂದವರು. ಕೃಷಿಯ ಮೇಲೆ ಅವರಿಗಿರುವ ಅಪಾರ ಪ್ರೀತಿ ಠಾಣೆಯ ಆವರಣದಲ್ಲಿ ಅರಳಿದೆ.

ಒಂದೆಡೆ ಎಂಒ4 ತಳಿಯ ಭತ್ತವನ್ನು ಬೆಳೆದರೆ, ಅದರ ಪಕ್ಕದಲ್ಲೇ ಸಣ್ಣ ಕೊಳದಲ್ಲಿ ಆರು ವಿಧದ ಮೀನುಗಳನ್ನು ಸಾಕಲಾಗುತ್ತಿದೆ. ಪಕ್ಕದಲ್ಲೇ ಹಕ್ಕಿಗಳ ನೀರಡಿಕೆಯನ್ನು ತಣಿಸುವ ತಾಣವಿದೆ. ಅಲ್ಲಿ ನೀರಿನ ಜೊತೆ ಪಪ್ಪಾಯ ಮೊದಲಾದ ಹಣ್ಣುಗಳನ್ನು ದಿನನಿತ್ಯ ಇರಿಸಲಾಗುತ್ತದೆ. ಬಗೆ ಬಗೆಯ ಪಕ್ಷಿಗಳು ಬೆಳಿಗ್ಗೆ ಹಾಗೂ ಸಂಜೆ ಬಂದು ಇಲ್ಲಿ ನೀರಾಟವಾಡುತ್ತವೆ.

ಅಷ್ಟೇ ಅಲ್ಲದೆ ನಾಲ್ಕು ದನಗಳನ್ನು ಸಾಕಲಾಗುತ್ತಿದೆ. ಕಟ್ಟಡವೊಂದರ ಛಾವಣಿಯ ಸುತ್ತಲೂ ಅನೇಕ ಮಡಿಕೆಯ ಗೂಡುಗಳನ್ನು ಸ್ಥಾಪಿಸಿದ್ದು, ಅದರಲ್ಲಿ ಪಾರಿವಾಳ, ಗುಬ್ಬಚ್ಚಿಗಳು ಬೀಡುಬಿಟ್ಟಿವೆ. ಪಕ್ಕದಲ್ಲೇ ಬಾತುಕೋಳಿ ಹಾಗೂ ನಾಟಿ ಕೋಳಿಯನ್ನೂ ಸಾಕಲಾಗುತ್ತದೆ. ಠಾಣೆಯ ಆವರಣದಲ್ಲಿ ಎರೆಗೊಬ್ಬರ ತಯಾರಿ ಘಟಕವೂ ಇದೆ. ಇದು ಬೆಳೆಗಳ ಪೋಷಣೆಗೆ ಅನುಕೂಲವಾಗುತ್ತಿದೆ.

‘ಕಚೇರಿಯ ಆವರಣದಲ್ಲಿ 25 ತೆಂಗಿನ ಮರಗಳು, 10 ಅಡಿಕೆ ಮರಗಳಿವೆ. 50 ಬಾಳೆ ಗಿಡಗಳಿದ್ದರೆ, ಡ್ರ್ಯಾಗನ್ ಫ್ರೂಟ್ನ 25 ಗಿಡಗಳಿವೆ. ಈ ಗಿಡಗಳಲ್ಲಿ ಡ್ರ್ಯಾಗನ್ ಫ್ರೂಟ್ ಆಗಿದೆ. ಜೊತೆಗೆ ಹಾಲು ಬೆಂಡೆ, ಅಲಸಂಡೆ ಮೊದಲಾದ ತರಕಾರಿಗಳನ್ನೂ ಬೆಳೆಸಿದ್ದೇವೆ’ ಎನ್ನುತ್ತಾರೆ ಸಂತೋಷ್ ಶೆಟ್ಟಿ.

‘ನೋನಿ, ಬಜೆ ಮೊದಲಾದ ಔಷಧೀಯ ಗಿಡ, ಬಿಲ್ವ ಪತ್ರೆ, ಗಜನಿಂಬೆ, ನಿಂಬೆ, ನುಗ್ಗೆ, ಬಾಂಬೆ ನೆಲ್ಲಿ, ಹೊಂಗೆ ಮರ, ಸೀತಾ ಫಲ, ರಾಮ ಫಲ, ಪಪ್ಪಾಯ ಗಿಡಗಳೂ ಸೇರಿದಂತೆ ಹಲವಾರು ಹಣ್ಣಿನ ಗಿಡಗಳನ್ನು ಬೆಳೆಸಿದ್ದೇವೆ. ಇವುಗಳು ಪಕ್ಷಿಗಳನ್ನು ಆಕರ್ಷಿಸುತ್ತವೆ. ನಮ್ಮ ತೋಟವನ್ನು ನೋಡಲು ಶಾಲಾ ಮಕ್ಕಳೂ ಬರುತ್ತಾರೆ ’ ಎಂದು ಅವರು ಹೇಳುತ್ತಾರೆ.

ನಮ್ಮ ಕಚೇರಿಯ ಆವರಣದ ಹಸಿರಿನ ವಾತಾವರಣವು ತುಂಬಾ ಮುದ ನೀಡುತ್ತಿದೆ. ಹಿಂದಿನ ಎಸ್ಪಿ ಚೇತನ್ ಮೊದಲಾದವರ ಪ್ರೋತ್ಸಾಹದಿಂದ ಉತ್ತಮ ತೋಟ ನಿರ್ಮಾಣವಾಗಿದೆ
ಜಿತೇಂದ್ರ ದಯಾಮ ಸಿಎಸ್ಪಿ ಪ್ರಭಾರ ಎಸ್ಪಿ

ಮರಳಿನ ಮೇಲೆ ಹಸುರಿನ ಹೊದಿಕೆ

‘2014ರಲ್ಲಿ ಸಿಎಸ್ಪಿ ಕಚೇರಿ ಆರಂಭವಾಗುವಾಗ ಸುತ್ತಲೂ ಮರಳು ತುಂಬಿದ ಭೂಮಿಯಾಗಿತ್ತು. ಮರಳಿನ ಮೇಲೆ ಮಣ್ಣು ಹಾಕಿ ಕೃಷಿ ಮಾಡಿದ್ದೇವೆ. ಸಿಎಸ್ಪಿಯ ಮೊದಲ ಎಸ್ಪಿ ಚೆನ್ನಬಸವಣ್ಣ ಅವರಿಂದ ಮೊದಲ್ಗೊಂಡು ಅನಂತರ ಬಂದ ಎಸ್ಪಿಗಳಾದ ಚೇತನ್ ಅಬ್ದುಲ್ ಅಹದ್ ಮಿಥುನ್ ಅವರು ಮತ್ತು ಎಲ್ಲಾ ಸಹೋದ್ಯೋಗಿಗಳು ಈ ಕೃಷಿ ಚಟುವಟಿಕೆಗೆ ಅಪಾರ ಪ್ರೋತ್ಸಾಹ ನೀಡಿದ್ದಾರೆ’ ಎಂದು ಸಂತೋಷ್ ಶೆಟ್ಟಿ ತಿಳಿಸಿದರು. ‘ಎರಡು ಕೊಳವೆ ಬಾವಿಗಳಿದ್ದು ಅದರ ನೀರನ್ನು ಕೃಷಿಗೆ ಬಳಸುತ್ತೇವೆ. 10 ಸೆಂಟ್ಸ್ ಜಾಗದಲ್ಲಿ ಭತ್ತದ ಎರಡು ಬೆಳೆ ಬೆಳೆಯುತ್ತೇವೆ. ಒಂದು ಕ್ವಿಂಟಲ್ ಭತ್ತ ಸಿಗುತ್ತಿದ್ದು ಅದರಿಂದ ಅಕ್ಕಿ ತಯಾರಿಸಿ ದನಗಳ ಆಹಾರಕ್ಕೆ ಬಳಸುತ್ತೇವೆ’ ಎನ್ನುತ್ತಾರೆ ಅವರು. ‘ನಾನು ಹಾಗೂ ಸಹೋದ್ಯೋಗಿಗಳು ಬಿಡುವಿನ ವೇಳೆಯಲ್ಲಿ ಗಿಡಗಳಿಗೆ ನೀರುಣಿಸುವ ಕೆಲಸ ಮಾಡುತ್ತೇವೆ’ ಎಂದೂ ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.