ಕೋಲ್ಕತ್ತ: ಬೆಂಗಳೂರಿನಲ್ಲಿ ನಡೆದ ಭಾರತ ‘ಎ’ ತಂಡದ ವಿರುದ್ಧ ‘ಟೆಸ್ಟ್’ ಪಂದ್ಯದಲ್ಲಿ ಆಡಿದ್ದ ದಕ್ಷಿಣ ಆಫ್ರಿಕಾ ತಂಡದ ನಾಯಕ ತೆಂಬಾ ಬವುಮಾ ಅವರು ಸೋಮವಾರ ರಾಷ್ಟ್ರೀಯ ಸೀನಿಯರ್ ತಂಡವನ್ನು ಸೇರಿಕೊಂಡರು. ದಕ್ಷಿಣ ಆಫ್ರಿಕಾ ತಂಡವು ಇಲ್ಲಿನ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ಶುಕ್ರವಾರದಿಂದ ಭಾರತ ತಂಡದ ವಿರುದ್ಧ ಮೊದಲ ಟೆಸ್ಟ್ ಆಡಲಿದೆ.

ತೆಂಬಾ ಅವರ ಸೇರ್ಪಡೆಯಿಂದ ತಂಡ ಪೂರ್ಣಪ್ರಮಾಣದ ಸಾಮರ್ಥ್ಯ ಪಡೆದಂತಾಗಿದೆ. ಕೋಚ್ ಶುಕ್ರಿ ಕೊನ್ರಾಡ್, ವೇಗದ ಬೌಲರ್ಗಳಾದ ಕಗಿಸೊ ರಬಾಡ, ಮಾರ್ಕೊ ಯಾನ್ಸೆನ್ ಮತ್ತು ಇತರ ಕೆಲವು ಆಟಗಾರರಿದ್ದ ತಂಡದ ಮೊದಲ ಬ್ಯಾಚ್ ಭಾನುವಾರ ಬೆಳಿಗ್ಗೆ ಇಲ್ಲಿಗೆ ಬಂದಿಳಿದಿತ್ತು.

‘ಬವುಮಾ, ಮತ್ತೊಬ್ಬ ಆಟಗಾರ ಹಾಗೂ ಕೆಲವು ಅಧಿಕಾರಿಗಳು ಬೆಂಗಳೂರಿನಿಂದ ಸೋಮವಾರ ಬೆಳಿಗ್ಗೆ ಇಲ್ಲಿಗೆ ಬಂದಿದ್ದಾರೆ’ ಎಂದು ಪ್ರವಾಸಿ ತಂಡದ ಸ್ಥಳೀಯ ಮ್ಯಾನೇಜರ್ ಪಿಟಿಐಗೆ ತಿಳಿಸಿದರು.

ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಪ್ರಶಸ್ತಿ ಉಳಿಸಿಕೊಳ್ಳುವ ಅಭಿಯಾನದ ಭಾಗವಾಗಿ ಹೋದ ತಿಂಗಳು ಪಾಕಿಸ್ತಾನ ವಿರುದ್ಧ ಎರಡು ಟೆಸ್ಟ್ಗಳ ಸರಣಿಯಲ್ಲಿ ಅವರು ಆಡಬೇಕಿತ್ತು. ಆದರೆ ಮೀನಖಂಡದ ನೋವಿನಿಂದಾಗಿ ವಿಶ್ರಾಂತಿ ಪಡೆದಿದ್ದರು. ಈಚೆಗೆ ಭಾರತ ಎ ವಿರುದ್ದ ಎರಡನೇ ‘ಟೆಸ್ಟ್’ ವೇಳೆಗೆ ದಕ್ಷಿಣ ಆಫ್ರಿಕಾ ಎ ತಂಡಕ್ಕೆ ಸೇರ್ಪಡೆಯಾಗಿದ್ದರು. ಎ ತಂಡಕ್ಕೆ ಮಾರ್ಕ್ವೆಸ್ ಆಕರ್ಮನ್ ನಾಯಕರಾಗಿದ್ದರು.

ಮಧ್ಯಮ ಸರದಿಯ ಬ್ಯಾಟರ್ ಜುಬೇರ್ ಹಮ್ಜಾ ಅವರೂ ಬೆಂಗಳೂರಿನಿಂದ ಬಂದು ತಂಡಕ್ಕೆ ಸೇರ್ಪಡೆಯಾದರು.

ಎರಡೂ ತಂಡಗಳು ಟೆಸ್ಟ್ಗೆ ಪೂರ್ವಭಾವಿಯಾಗಿ ಮಂಗಳವಾರ ಮೊದಲ ಬಾರಿ ಅಭ್ಯಾಸದಲ್ಲಿ ತೊಡಗಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.