ರೈಲು ಭಾರತೀಯರ ಪ್ರಮುಖ ಸಾರಿಗೆಯಾಗಿದೆ. ಆದರೆ, ಇಲ್ಲಿರುವ ಕೆಲವು ಐಷರಾಮಿ ರೈಲುಗಳಲ್ಲಿ ಸಂಚರಿಸಲು ಲಕ್ಷಗಟ್ಟಲೇ ಹಣ ಪಾವತಿಸಬೇಕಾಗುತ್ತದೆ. ಹಾಗಿದ್ದರೆ ಭಾರತದಲ್ಲಿರುವ ಐಷಾರಾಮಿ ರೈಲುಗಳು ಯಾವುವು ಎಂಬ ಮಾಹಿತಿ ನೋಡೋಣ.

ಈ ಐಷರಾಮಿ ರೈಲಿನಲ್ಲಿ ಡೈನಿಂಗ್ ಟೇಬಲ್, ಐಷರಾಮಿ ಬೆಡ್ ವ್ಯವಸ್ಥೆ, ಆಧುನಿಕ ಶೌಚಾಲಯಗಳು, ವಿವಿಧ ಬಗೆಯ ಊಟದ ಸೇರಿದಂತೆ ರಾಜಗೃಹದಲ್ಲಿರುವ ಅನುಭವವಾಗುತ್ತದೆ.

ಮಹಾರಾಜ ಎಕ್ಸ್ಪ್ರೆಸ್:

ಭಾರತದ ಐಷರಾಮಿ ರೈಲಿನಲ್ಲಿ ಮಹಾರಾಜ ಎಕ್ಸ್ಪ್ರೆಸ್ ಒಂದು. ಹೆಸರೇ ಹೇಳುವಂತೆ ಈ ರೈಲು ರಾಜಮನೆತನದ ಅನುಭವವನ್ನು ಪ್ರಯಾಣಿಕರಿಗೆ ನೀಡುತ್ತದೆ. ಈ ರೈಲಿನಲ್ಲಿ ಪ್ರಯಾಣ ಮಾಡುವವರಿಗೆ ರಾಜ–ರಾಣಿಯರಂತೆ ಸೇವೆ ದೊರೆಯುತ್ತದೆ.

ಈ ಐಷರಾಮಿ ರೈಲನ್ನು ಐಆರ್ಸಿಟಿಸಿಯು ನಿರ್ವಹಣೆ ಮಾಡುತ್ತದೆ. ಇದು ಅಕ್ಟೋಬರ್ ಹಾಗೂ ಏಪ್ರಿಲ್ಗಳ ನಡುವೆ ವಾಯುವ್ಯ ಮತ್ತು ಮಧ್ಯ ಭಾರತದಾದ್ಯಂತ ನಾಲ್ಕು ಪ್ರಮುಖ ಮಾರ್ಗಗಳಲ್ಲಿ ಸಂಚರಿಸುತ್ತದೆ.

ಮುಂಬೈ, ಉದಯಪುರ, ಜೋಧ್ಪುರ, ಬಿಕಾನೇರ್, ಜೈಪುರ, ರಣಥಂಬೋರ್ ಮತ್ತು ಫತೇಪುರ್ ಸಿಕ್ರಿ, ಆಗ್ರಾ, ದೆಹಲಿ.

ದೆಹಲಿ, ಜೈಪುರ, ರಣಥಂಬೋರ್, ಫತೇಪುರ್ ಸಿಕ್ರಿ, ಆಗ್ರಾ, ಓರ್ಚಾ, ಖಜುರಾಹೊ, ವಾರಣಾಸಿ ಮತ್ತು ದೆಹಲಿ.

ದೆಹಲಿ, ಆಗ್ರಾ, ರಣಥಂಬೋರ್, ಜೈಪುರ, ಬಿಕಾನೇರ್, ಜೋಧ್ಪುರ, ಉದಯಪುರ ಮತ್ತು ಮುಂಬೈ.

ದೆಹಲಿ, ಆಗ್ರಾ, ರಣಥಂಬೋರ್, ಜೈಪುರ ಮತ್ತು ದೆಹಲಿ.

ದಕ್ಷಿಣ ಭಾರತ ಮಾರ್ಗ: ಮುಂಬೈ, ರತ್ನಗಿರಿ, ಗೋವಾ, ಹಂಪಿ, ಮೈಸೂರು, ಕೊಚ್ಚಿ ಮತ್ತು ಕುಮಾರಕೋಮ್ ಮೂಲಕ ತಿರುವನಂತಪುರಂ.

ಟಿಕೇಟ್ ದರ: ₹6,98,100 ದಿಂದ ₹22,37,500 ವರೆಗೆ ಇದೆ.

ಗೋಲ್ಡನ್ ಚಾರಿಯಟ್ ರೈಲು:

ಕರ್ನಾಟಕ ಹಾಗೂ ದಕ್ಷಿಣ ಭಾರತದ ಪ್ರಮುಖ ಪ್ರವಾಸಿ ತಾಣಗಳಿಗೆ ಪ್ರಯಾಣಿಕರನ್ನು ಹೊತ್ತು ಸಾಗುವ ಐಷರಾಮಿ ಪ್ರವಾಸಿ ರೈಲು. ಈ ರೈಲಿಗೆ ಹಂಪಿಯ ಕಲ್ಲಿನ ರಥದ ಹೆಸರನ್ನು ಇಡಲಾಗಿದೆ. ಈ ರೈಲಿನ ನಿರ್ವಹಣೆಯನ್ನು ಕೆಎಸ್ಟಿಡಿಸಿ ಹಾಗೂ ಐಆರ್ಸಿಟಿಸಿ ಜಂಟಿಯಾಗಿ ಮಾಡುತ್ತವೆ.

ಪ್ರಯಾಣ ಮಾರ್ಗ: ಹಂಪಿ, ಗೋವಾ, ಕೇರಳ, ತಮಿಳುನಾಡು ಮತ್ತು ಪುದುಚೇರಿ.

ರೈಲಿನ ಒಳಾಂಗಣವು ಹೊಯ್ಸಳ ಹಾಗೂ ವಿಜಯನಗರ ಸಾಮ್ರಾಜ್ಯಗಳ ವಾಸ್ತುಶಿಲ್ಪ ಶೈಲಿಗಳಿಂದ ನಿರ್ಮಾಣ ಮಾಡಲಾಗಿದೆ. ರೈಲಿನ ಪ್ರತಿ ಬೋಗಿಗೂ ಕರ್ನಾಟಕದ ರಾಜಮನೆತನದ ಹೆಸರನ್ನು ಇಡಲಾಗಿದೆ. ಅಕ್ಟೋಬರ್ನಿಂದ ಮಾರ್ಚ್ವರೆಗೆ ಸಂಚರಿಸುವ ಗೋಲ್ಡನ್ ಚಾರಿಯಟ್ ಪ್ರಯಾಣ ಬೆಂಗಳೂರಿನಿಂದ ಆರಂಭವಾಗಿ, ಬೆಂಗಳೂರಿನಲ್ಲಿಯೇ ಕೊನೆಗೊಳ್ಳುತ್ತದೆ.

ಟಿಕೇಟ್ ದರ: ₹2,65,440 ರಿಂದ ₹4,00,530 ವರೆಗೆ ಇದೆ.

ಡೆಕ್ಕನ್ ಒಡಿಸ್ಸಿ ರೈಲು:

2004 ರಿಂದ ಭಾರತದ ಪ್ರವಾಸೋದ್ಯಮದಲ್ಲಿ ಚಾಲ್ತಿಯಲ್ಲಿರುವ ಐಷರಾಮಿ ಪ್ರವಾಸಿ ರೈಲು ಆಗಿದೆ. ಈ ರೈಲು ಪಶ್ಚಿಮ ಹಾಗೂ ಮಧ್ಯ ಭಾರತದ ಪ್ರಮುಖ ಸ್ಥಳಗಳಿಗೆ 7 ರಾತ್ರಿಗಳ ಸುಂದರ ಪ್ರಯಾಣ ಮಾಡಬಹುದು. ಇದರಲ್ಲಿ ಊಟದ ಕೋಣೆಗಳು, ಫಿಟ್ನೆಸ್ ಕೇಂದ್ರ ಹಾಗೂ ಬಾರ್ಗಳಿವೆ.

ರೈಲಿನ ಪ್ರತಿ ಬೋಗಿ ಮಹಾರಾಷ್ಟ್ರದ ವಿಭಿನ್ನ ರಾಜವಂಶ ಹಾಗೂ ಅಲ್ಲಿನ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ರೈಲು ಮುಂಬೈನಿಂದ ಹೊರಟು ನಾಸಿಕ್, ಗುಜರಾತ್, ಮಹಾರಾಷ್ಟ್ರ ಮತ್ತು ರಾಜಸ್ಥಾನದ ಪ್ರಮುಖ ಪ್ರವಾಸಿ ತಾಣಗಳು ಹಾಗೂ ಅಜಂತಾ, ಎಲ್ಲೋರಾ, ಹಂಪಿ, ಮತ್ತು ಕುನೊ ರಾಷ್ಟ್ರೀಯ ಉದ್ಯಾನಕ್ಕೆ ಪ್ರಯಾಣಿಕರನ್ನು ಕರೆದೊಯ್ತುತ್ತದೆ.

ಟಿಕೇಟ್ ದರ: ₹7 ಲಕ್ಷದಿಂದ –₹16 ಲಕ್ಷದ ವರೆಗೆ ಇದೆ.

ಪ್ಯಾಲೇಸ್ ಒನ್ ವಿಲ್ಹ್ಸ್:

ಪ್ಯಾಲೇಸ್ ಒನ್ ವಿಲ್ಹ್ಸ್ ರೈಲು ಭಾರತದ ಮೊದಲ ಐಷರಾಮಿ ಹಾಗೂ ಪರಂಪರಿಕ ರೈಲು ಎಂದು ಗುರುತಿಸಲಾಗಿದೆ. ಇದರ ಪ್ರಯಾಣ ನವ ದೆಹಲಿಯಿಂದ ಆರಂಭವಾಗಿ ಜೈಪುರ, ಉದಯಪುರ, ಜೋಧ್ಪುರ ಹಾಗೂ ಆಗ್ರಾ ಸೇರಿದಂತೆ ಇತರೆ ಐತಿಹಾಸಿಕ ಸ್ಥಳಗಳನ್ನು ಒಳಗೊಂಡಿದೆ.

ರೈಲಿನ ಬೋಗಿಗಳಲ್ಲಿ ರಾಜಸ್ಥಾನದ ರಾಜಮನೆತನದ ವೈಭವ, ಕಲೆ ಹಾಗೂ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತವೆ. ಬೋಗಿಗಳಿಗೆ ರಾಜಮನೆತನಗಳ ಹೆಸರುಗಳನ್ನು ಇಡಲಾಗಿದೆ.

ಟಿಕೇಟ್ ದರ: ₹70,800 ದಿಂದ ₹2,87,800 ವರೆಗೆ ಇದೆ.

ರಾಯಲ್ ರಾಜಸ್ಥಾನ್ ಒನ್ ವಿಲ್ಹ್ಸ್:

ಹೆಸರೇ ಹೇಳುವಂತೆ ಈ ರೈಲು ರಾಯಲ್ ಆಗಿದೆ. ರಾಜಸ್ಥಾನ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಸಹಯೋಗದೊಂದಿಗೆ ಭಾರತೀಯ ರೈಲ್ವೆಯಿಂದ ನಿರ್ವಹಿಸುವ ಐಷರಾಮಿ ಪ್ರವಾಸಿ ರೈಲು. ಈ ರೈಲು ರಾಜಸ್ಥಾನ ಹಾಗೂ ದೇಶದ ಇತರೆ ಸ್ಥಳಗಳಿಗೆ ಪ್ರಯಾಣಿಸುತ್ತದೆ. ನವದೆಹಲಿ , ಜೋಧ್ಪುರ, ಉದಯಪುರ, ಚಿತ್ತೋರ್ಗಢ, ಸವಾಯಿ, ಮಾಧೋಪುರ್ , ಜೈಪುರ , ಖಜುರಾಹೊ , ವಾರಣಾಸಿ ಮತ್ತು ಆಗ್ರಾಕ್ಕೆ ಪ್ರಯಾಣಿಸುತ್ತದೆ. ರಜಪೂತರ ಶೌರ್ಯ ಮತ್ತು ಆತಿಥ್ಯವನ್ನು ಪ್ರಯಾಣಿಕರು ಅನುಭವಿಸಬಹುದು. ಕೋಟೆಗಳು ಮತ್ತು ಅರಮನೆಗಳನ್ನು ನೋಡುತ್ತ ಈ ರೈಲಿನಲ್ಲಿ ಪ್ರಯಾಣ ಮಾಡಬಹುದು.

ಟಿಕೇಟ್ ದರ: 70,800 ರಿಂದ 2,87,800 ವರೆಗೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.