ಬೆಂಗಳೂರು: ಕಶ್ವಿ ಕಂಡಿಕೊಪ್ಪ ಹಾಗೂ ಯಶಿಕಾ ಕೆ. ಗೌಡ ಅವರ ಆಲ್ರೌಂಡ್ ಆಟದ ನೆರವಿನಿಂದ ಕರ್ನಾಟಕ ತಂಡವು ಬಿಸಿಸಿಐ 15 ವರ್ಷದೊಳಗಿನ ಬಾಲಕಿಯರ ಏಕದಿನ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ 134 ರನ್ಗಳಿಂದ ಉತ್ತರ ಪ್ರದೇಶ ತಂಡವನ್ನು ಸುಲಭವಾಗಿ ಮಣಿಸಿತು.

ಕೋಲ್ಕತ್ತದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕರ್ನಾಟಕ ತಂಡವು 35 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 299 ರನ್ ಗಳಿಸಿತು. ಕಶ್ವಿ 79 ಎಸೆತಗಳಲ್ಲಿ ಅಜೇಯ 142 ರನ್ ಬಾರಿಸಿದರು. ಅವರ ಇನಿಂಗ್ಸ್ನಲ್ಲಿ 23 ಬೌಂಡರಿ ಹಾಗೂ 6 ಸಿಕ್ಸರ್ ಇದ್ದವು. ಯಶಿಕಾ (87 ರನ್; 72ಎ; 4x13, 6x1) ಅರ್ಧಶತಕ ಗಳಿಸಿದರು.

ಕಠಿಣ ಗುರಿ ಬೆನ್ನಟ್ಟಿದ ಉತ್ತರ ಪ್ರದೇಶ ತಂಡವು ಕರ್ನಾಟಕದ ಬೌಲರ್ಗಳ ಸಂಘಟಿತ ದಾಳಿ ಎದುರು 35 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 165 ರನ್ ಗಳಿಸಿತು. ನೈನಿಷಾ ರೆಡ್ಡಿ ಪಾಟೀಲ್ 32 ರನ್ ನೀಡಿ 3 ವಿಕೆಟ್ ಪಡೆದರೆ, ಯಶಿಕಾ ಹಾಗೂ ಕಶ್ವಿ ತಲಾ 2 ವಿಕೆಟ್ ಕಿತ್ತರು. ಉತ್ತರ ಪ್ರದೇಶ ತಂಡದ ಪರ ಮೀನಾಕ್ಷಿ ಯಾದವ್ (59; 65ಎ) ಏಕಾಂಗಿ ಹೋರಾಟ ತೋರಿದರು.

ಸಂಕ್ಷಿಪ್ತ ಸ್ಕೋರು: ಕರ್ನಾಟಕ: 35 ಓವರ್ಗಳಲ್ಲಿ 5 ವಿಕೆಟ್ಗೆ 299 (ಶೀತಲ್ ಸಂತೋಷ್ 34, ಕಶ್ವಿ ಕಂಡಿಕೊಪ್ಪ ಔಟಾಗದೇ 142, ಯಶಿಕಾ ಕೆ. ಗೌಡ 87; ಕಲ್ಪನಾ 40ಕ್ಕೆ2, ಸುಪ್ರಿಯಾ ಸಿಂಗ್ 51ಕ್ಕೆ2); ಉತ್ತರ ಪ್ರದೇಶ: 35 ಓವರ್ಗಳಲ್ಲಿ 9 ವಿಕೆಟ್ಗೆ 165 (ಕಾವ್ಯ ಭಾಂದೊ 39, ಮೀನಾಕ್ಷಿ ಯಾದವ್ 59; ನೈನಿಷಾ ರೆಡ್ಡಿ ಪಾಟೀಲ್ 32ಕ್ಕೆ3, ಯಶಿಕಾ ಕೆ. ಗೌಡ 31ಕ್ಕೆ2, ಕಶ್ವಿ ಕಂಡಿಕೊಪ್ಪ 19ಕ್ಕೆ2).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.