ಕನ್ನಡ ಕಿರುತೆರೆಯ ಕಲಾವಿದೆ ರಜಿನಿ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅಮೃತವರ್ಷಿಣಿ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದುಕೊಂಡಿದ್ದ ನಟಿ ರಜಿನಿ ಅವರು ಅರುಣ್ ವೆಂಕಟೇಶ್ ಎಂಬುವವರ ಜೊತೆಗೆ ಮದುವೆಯಾಗಿದ್ದಾರೆ.

‘ಅಮೃತವರ್ಷಿಣಿ’, ‘ಹಿಟ್ಲರ್ ಕಲ್ಯಾಣ’, ‘ನೀ ಇರಲು ಜೊತೆಯಲಿ’ ಸೇರಿದಂತೆ ಸಾಕಷ್ಟು ಧಾರಾವಾಹಿಗಳಲ್ಲಿ ನಟಿ ರಜಿನಿ ನಟಿಸಿದ್ದಾರೆ. ಮಾತ್ರವಲ್ಲದೇ ಡ್ಯಾನ್ಸ್ ರಿಯಾಲಿಟಿ ಶೋ, ‘ಮಜಾ ಟಾಕೀಸ್’ ಕಾಮಿಡಿ ಶೋನಲ್ಲಿಯೂ ರಜಿನಿ ಭಾಗವಹಿಸಿದ್ದರು.

ಇಂದು (ನವೆಂಬರ್ 10) ರಜಿನಿ ಅವರು ಅರುಣ್ ವೆಂಕಟೇಶ್ ಜೊತೆಗೆ ಸಪ್ತಪದಿ ತುಳಿದಿದ್ದಾರೆ. ಬೆಂಗಳೂರಿನಲ್ಲಿ ನಡೆದ ವಿವಾಹದಲ್ಲಿ ಕಿರುತೆರೆ ನಟ ಹಾಗೂ ನಟಿಯರು ಬಂದು ನವಜೋಡಿಗೆ ಶುಭ ಹಾರೈಸಿದ್ದಾರೆ. ನಟಿ ರಜಿನಿ ಅವರನ್ನು ಮದುವೆಯಾದ ಅರುಣ್ ವೆಂಕಟೇಶ್ ಜಿಮ್ ತರಬೇತುದಾರ ಆಗಿದ್ದಾರೆ. ಬಾಡಿ ಬಿಲ್ಡರ್ ಆಗಿರುವ ಅರುಣ್ ಜೊತೆಗೆ ರಜಿನಿ ಸಾಮಾಜಿಕ ಮಾಧ್ಯಮದಲ್ಲಿ ರೀಲ್ಸ್ ಮಾಡುತ್ತ, ವಿಡಿಯೊಗಳನ್ನು ಹಂಚಿಕೊಳ್ಳುತ್ತಿದ್ದರು.

ಈ ಹಿಂದೆ ಖಾಸಗಿ ಸಂದರ್ಶನದಲ್ಲಿ ಅರುಣ್ ವೆಂಕಟೇಶ್ ವಿಡಿಯೊ ಪಾರ್ಟ್ನರ್, ನನ್ನ ಒಳ್ಳೆಯ ಸ್ನೇಹಿತ ಅಷ್ಟೇ. ಗೆಳೆಯನೇ ಸಂಗಾತಿ ಆಗ್ತಾರಾ ಅಂತ ನನಗೆ ಗೊತ್ತಿಲ್ಲ. ಸ್ನೇಹಿತರಾಗಿದ್ದವರು ಮದುವೆ ಆದರೆ ತಪ್ಪಿಲ್ಲ. ಅದೆಲ್ಲ ಅವರವರಿಗೆ ಬಿಟ್ಟಿದ್ದು ಎಂದು ಹೇಳಿದ್ದರು. ಈಗ ಸ್ನೇಹಿತ ಅರುಣ್ ವೆಂಕಟೇಶ್ ಅವರನ್ನೇ ನಟಿ ರಜಿನಿ ಮದುವೆಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.