‘ನಗುವುದೋ ಅಳುವುದೋ ನೀವೇ ಹೇಳಿ…’ ಬೆಕ್ಕಣ್ಣ ಬೆಳಗ್ಗೆಯೇ ರಾಗವಾಗಿ ಉದಯಶಂಕರ್ ಬರೆದಿದ್ದ ಚಿತ್ರಗೀತೆಯನ್ನು ಹಾಡುತ್ತಿತ್ತು. ದನಿಯಲ್ಲಿ ಒಂದು ಬಗೆಯ ದುಃಖವೂ, ಒಂದು ಬಗೆಯ ಗೊಂದಲವೂ ಇತ್ತು.

‘ಯಾಕಲೇ… ಅಂಥಾ ಪರಿ ಏನಾತೀಗ?’ ಅಂತ ಕೇಳಿದೆ.

‘ಅದೇ ನ್ಯೂಯಾರ್ಕ್ ಮೇಯರ್ ಆಗಿ ಜೊಹ್ರಾನ್ ಮಮ್ದಾನಿ ಆಯ್ಕೆಯಾಗಿದ್ದಕ್ಕೆ ನಗುವುದೋ ಅಳುವುದೋ ಗೊತ್ತಾಗವಲ್ಲದು’ ಎಂದು ನಿಟ್ಟುಸಿರು ಬಿಟ್ಟಿತು.

‘ಅವನ ತಾಯಿ ಮೀರಾ ನಾಯರ್ ಭಾರತೀಯಳು. ತಂದೆ ಕಡೆ ಗುಜರಾತ್ ಮೂಲದವರಂತೆ. ಅಂದರೆ ಅಂವಾ ಡಬ್ಬಲ್ ಭಾರತೀಯ ಮೂಲದಂವಾ! ಅಗದಿ ಭಯಂಕರ ಖುಷಿಯಿಂದ ನಗಬೇಕು ಕಣಲೇ’ ಎಂದೆ.

‘ಅವನ ತಂದೆ ಕಡೆವ್ರು ಗುಜರಾತ್ ಮೂಲದವ್ರು ಖರೇ… ಆದ್ರೆ ಅವ್ರ ಅಡ್ಡಹೆಸರು ಮಮ್ದಾನಿ. ಪಟೇಲ್, ಶಾ, ವಘೇಲ ಇಂತಾ ಗುಜರಾತಿ ಅಡ್ಡಹೆಸರು ಅಲ್ಲವಲ್ಲ’ ಬೆಕ್ಕಣ್ಣ ಅಲವತ್ತುಕೊಂಡಿತು.

‘ಮಮ್ದಾನಿನೂ ಗುಜರಾತಿ ಅಡ್ಡಹೆಸರೇ. ಅಂವಾ ತನ್ನ ಭಾರತೀಯ ಬೇರುಗಳನ್ನು ಮರೆತಿಲ್ಲ. ಮೇಯರ್ ಆದ ಮ್ಯಾಲೆ ಮೊದಲ ಭಾಷಣದಾಗೆ ನೆಹರೂ ಮಾತುಗಳನ್ನು ನೆನಪಿಸಿಕೊಂಡಾನೆ. ವಲಸಿಗರಿಗೆ ಎಲ್ಲ ಥರದ ಅನುಕೂಲ ಮಾಡಿಕೊಡ್ತೀವಿ ಅಂದಾನೆ. ಹಿಂಗಾಗಿ, ನಗಬೇಕಲೇ’ ಎಂದು ನಾನು ವಾದಿಸಿದೆ.

‘ಅದೇ ಮತ್ತೆ… ಅಂವಾ ನೆಹರೂ ಚಾಚಾನ್ನ ಎದಕ್ಕೆ ನೆನಪಿಸಿಕೋಬೇಕು? ಹಿಂದೆ ಒಂದು ಸಲ ಭಾಷಣ ಮಾಡಬೇಕಿದ್ದರೆ ನಮ್ ಮೋದಿಮಾಮಾನ್ನ ಬೈದಾನೆ… ಹಿಂಗಾಗಿ ಅಳುವುದೇ ಈಗ’ ಎಂದಿತು ಮತ್ತೆ ಅಳುದನಿಯಲ್ಲಿ.

‘ಅಂವಾ ಬೈದಿಲ್ಲಲೇ… ಖರೇ ಏನೈತಿ ಅಂತ ಹೇಳ್ಯಾನೆ ಅಷ್ಟೇ!’ ಎಂದು ಸಮಾಧಾನಿಸಿದೆ.

‘2019ರಲ್ಲಿ ನಮ್ಮ ಮೋದಿ ಮಾಮಾ ಹೂಸ್ಟನ್ನಿನಲ್ಲಿ ಹೌಡಿ ಮೋದಿ ಕಾರ್ಯಕ್ರಮ ಮಾಡಿದ್ದರಲ್ಲ… ಹಂಗೆ ಮುಂದೆ ಯಾವಾಗಾದ್ರೂ ನ್ಯೂಯಾರ್ಕಿನಾಗೂ ಹೌಡಿ ಮೋದಿ ಕಾರ್ಯಕ್ರಮ ಮಾಡಬೌದು ಅಂದುಕೊಂಡಿದ್ದೆ. ಇನ್ನು ಅದು ಆಗೂದು ಡೌಟು… ಅಳುವುದೇ ಈಗ’ ಎಂದು ಕಣ್ಣೊರೆಸಿಕೊಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.