‘ಬೊಲೆರೊ ಸಿಟಿ ಪಿಕ್ ಅಪ್’ ಬಿಡುಗಡೆ
ದಟ್ಟಣೆ ಹೊಂದಿರುವ ನಗರಗಳಲ್ಲಿ ಸುಲಭವಾಗಿ ಸಂಚರಿಸಿ ಸಾಮಗ್ರಿಗಳನ್ನು ರವಾನಿಸಲು ಅನುಕೂಲವಾಗುವಂತೆ ರೂಪಿಸಿರುವ ‘ಬೊಲೆರೊ ಸಿಟಿ ಪಿಕ್ ಅಪ್’ ಈಗ ಮಾರುಕಟ್ಟೆ ಪ್ರವೇಶಿಸಿದೆ.
ಮಹೀಂದ್ರಾ ಕಂಪನಿಯ ಈ ವಾಹನ 1.4 ಟನ್ ತೂಕದ ಸಾಮಗ್ರಿಗಳನ್ನು ಕೊಂಡೊಯ್ಯುವ ಸಾಮರ್ಥ್ಯವನ್ನು ಹೊಂದಿರುವುದು ವಿಶೇಷವಾಗಿದೆ. ಮಾರುಕಟ್ಟೆಯಂತಹ ಪ್ರದೇಶಗಳಲ್ಲಿ ಸುಲಭವಾಗಿ ಸಂಚರಿಸುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ.
ಮಹೀಂದ್ರಾ ಮತ್ತು ಮಹೀಂದ್ರಾ ಲಿಮಿಟೆಡ್ನ ಅಟೊಮೊಟಿವ್ ವಿಭಾಗದ ಮಾರುಕಟ್ಟೆ ಉಪಾಧ್ಯಕ್ಷ ವಿಕ್ರಂ ಗಾರ್ಗ್ ಗುರುವಾರ ಇಲ್ಲಿ ಈ ವಾಹನ ಬಿಡುಗಡೆ ಮಾಡಿದರು.Last Updated 29 ಆಗಸ್ಟ್ 2019, 19:45 IST