ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬೊಲೆರೊ ಸಿಟಿ ಪಿಕ್‌ ಅಪ್‌’ ಬಿಡುಗಡೆ

Last Updated 29 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ಬೆಂಗಳೂರು: ದಟ್ಟಣೆ ಹೊಂದಿರುವ ನಗರಗಳಲ್ಲಿ ಸುಲಭವಾಗಿ ಸಂಚರಿಸಿ ಸಾಮಗ್ರಿಗಳನ್ನು ರವಾನಿಸಲು ಅನುಕೂಲವಾಗುವಂತೆ ರೂಪಿಸಿರುವ ‘ಬೊಲೆರೊ ಸಿಟಿ ಪಿಕ್‌ ಅಪ್‌’ ಈಗ ಮಾರುಕಟ್ಟೆ ಪ್ರವೇಶಿಸಿದೆ.

ಮಹೀಂದ್ರಾ ಕಂಪನಿಯ ಈ ವಾಹನ 1.4 ಟನ್‌ ತೂಕದ ಸಾಮಗ್ರಿಗಳನ್ನು ಕೊಂಡೊಯ್ಯುವ ಸಾಮರ್ಥ್ಯವನ್ನು ಹೊಂದಿರುವುದು ವಿಶೇಷವಾಗಿದೆ. ಮಾರುಕಟ್ಟೆಯಂತಹ ಪ್ರದೇಶಗಳಲ್ಲಿ ಸುಲಭವಾಗಿ ಸಂಚರಿಸುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ.

ಮಹೀಂದ್ರಾ ಮತ್ತು ಮಹೀಂದ್ರಾ ಲಿಮಿಟೆಡ್‌ನ ಅಟೊಮೊಟಿವ್‌ ವಿಭಾಗದ ಮಾರುಕಟ್ಟೆ ಉಪಾಧ್ಯಕ್ಷ ವಿಕ್ರಂ ಗಾರ್ಗ್‌ ಗುರುವಾರ ಇಲ್ಲಿ ಈ ವಾಹನ ಬಿಡುಗಡೆ ಮಾಡಿದರು.

ಈ ವಾಹನವನ್ನು ಸಣ್ಣ ಮತ್ತು ಮಧ್ಯಮ ಗಾತ್ರದ ವ್ಯಾಪಾರಿಗಳ ಸಾರಿಗೆ ಅಗತ್ಯತೆಯನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗಿದೆ.ಜತೆಗೆ, ಬೆಂಗಳೂರು, ಮುಂಬೈ, ಚೆನ್ನೈನಂತಹ ಮಹಾನಗರಗಳ ಸಂಚಾರ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಈ ವಾಹನದ ವಿನ್ಯಾಸ ರೂಪಿಸಲಾಗಿದೆ ಎಂದು ಗಾರ್ಗ್‌ ತಿಳಿಸಿದರು.

ವಿಶೇಷಗಳು:ಮೂರು ವರ್ಷಗಳವರೆಗೆ ಅಥವಾ ಒಂದು ಲಕ್ಷ ಕಿಲೋ ಮೀಟರ್‌ವರೆಗೆ ವಾರಂಟಿಯನ್ನು ಈ ವಾಹನಕ್ಕೆ ನೀಡಲಾಗಿದೆ. 2523 ಸಿಸಿ ಎಂ2ಡಿಐ ಎಂಜಿನ್‌, ನಾಲ್ಕು ಸಿಲಿಂಡರ್‌ ಮತ್ತು 63 ಅಶ್ವಶಕ್ತಿ ಹಾಗೂಡಿಸೇಲ್‌ ಎಂಜಿನ್‌ ಹೊಂದಿದೆ. 8.7 ಅಡಿ ಎತ್ತರ ಹಾಗೂ 5.6 ಉದ್ದದ ಕಾರ್ಗೊ ಬಾಕ್ಸ್‌ ಹೊಂದಿರುವುದರಿಂದ ಹೆಚ್ಚಿನ ತೂಕದ ಸಾಮಗ್ರಿಗಳನ್ನು ಕೊಂಡೊಯ್ಯಬಹುದಾಗಿದೆ.ಈ ವಾಹನ ಬೆಲೆ ₹6.25 ಲಕ್ಷ (ಬೆಂಗಳೂರು ಎಕ್ಸ್‌ ಶೋರೂಂ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT