ಸೋಮವಾರ, 4 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಜೂನಿಯರ್‌, ಯೂಥ್ ಅಥ್ಲೆಟಿಕ್ಸ್‌: ಮಳೆಯ ನಡುವೆ ಐದು ಕೂಟ ದಾಖಲೆ

ತುಷಾರ್‌ಗೆ ‘ಡಬಲ್‌’ ಚಿನ್ನದ ಸಂಭ್ರಮ
Published 30 ಸೆಪ್ಟೆಂಬರ್ 2023, 0:27 IST
Last Updated 30 ಸೆಪ್ಟೆಂಬರ್ 2023, 0:27 IST
ಅಕ್ಷರ ಗಾತ್ರ

ಮಂಗಳೂರು: ಬಿಟ್ಟೂ ಬಿಟ್ಟೂ ಸುರಿಯುತ್ತಿದ್ದ ಧಾರಾಕಾರ ಮಳೆಯ ನಡುವೆ ಛಲ ಬಿಡದೆ ‘ಬಲ’ ಪ್ರದರ್ಶಿಸಿದ ಅಥ್ಲೀಟ್‌ಗಳು ಲೋಕನಾಥ ಬೋಳಾರ್ ಸ್ಮಾರಕ ರಾಜ್ಯ ಜೂನಿಯರ್ ಮತ್ತು ಯೂಥ್ ಅಥ್ಲೆಟಿಕ್ ಕೂಟದ ಮೂರನೇ ದಿನವಾದ ಶುಕ್ರವಾರ ನಗರದ ಮಂಗಳಾ ಕ್ರೀಡಾಂಗಣದಲ್ಲಿ ಐದು ಕೂಟ ದಾಖಲೆಗಳನ್ನು ನಿರ್ಮಿಸಿದರು.

ರಾಜ್ಯ ಮತ್ತು ಜಿಲ್ಲಾ ಅಥ್ಲೆಟಿಕ್ ಸಂಸ್ಥೆಗಳು ಮೊಗವೀರ ವ್ಯವಸ್ಥಾಪನ ಮಂಡಳಿ ಮತ್ತು ಮಂಗಳೂರು ಯಾಂತ್ರಿಕ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದ ಆಶ್ರಯದಲ್ಲಿ ಆಯೋಜಿಸಿರುವ ಚಾಂಪಿಯನ್‌ಷಿಪ್‌ನ 23 ವರ್ಷದೊಳಗಿನ ಪುರುಷರ ಲಾಂಗ್‌ಜಂಪ್‌ನಲ್ಲಿ ಹಾಸನದ ಪುರುಷೋತ್ತಮ್‌ ಹೊಸ ದಾಖಲೆ ಬರೆದರು. 

20 ವರ್ಷದೊಳಗಿನ ಮಹಿಳೆಯರ 1500 ಮೀ ಓಟದಲ್ಲಿ ಬೆಂಗಳೂರಿನ ಪ್ರಿಯಾಂಕಾ, 16 ವರ್ಷದೊಳಗಿನ ಬಾಲಕಿಯರ 2000 ಮೀಟರ್ಸ್ ಓಟದಲ್ಲಿ ದಕ್ಷಿಣ ಕನ್ನಡದ ಚರಿಷ್ಮಾ, 300 ಮೀ ಓಟದಲ್ಲಿ ದಕ್ಷಿಣ ಕನ್ನಡದ ರೀತುಶ್ರೀ ಮತ್ತು 16 ವರ್ಷದೊಳಗಿನ ಬಾಲಕರ 80 ಮೀ ಹರ್ಡಲ್ಸ್‌ನಲ್ಲಿ ಬೆಂಗಳೂರಿನ ವೀರೇಶ್ ಪಿ ಚಿನ್ನದೊಂದಿಗೆ ದಾಖಲೆಯ ಸಂಭ್ರಮದಲ್ಲಿ ನಲಿದರು.

ಕೂಟದ ಮೊದಲ ದಿನ 800 ಮೀಟರ್ಸ್ ಓಟದಲ್ಲಿ ಚಿನ್ನ ಗೆದ್ದಿದ್ದ ತುಷಾರ್‌ ಶುಕ್ರವಾರ ಮತ್ತೊಮ್ಮೆ ಪಾರಮ್ಯ ಮೆರೆದರು. ಯಾದಗಿರಿಯ ಸೂರ್ಯ ಮತ್ತು ಬೆಂಗಳೂರಿನ ರೋಹಿತ್ ಅವರಿಂದ ತೀವ್ರ ಪೈಪೋಟಿ ಎದುರಿಸಿದ ತುಷಾರ್‌ ಅಂತಿಮ ಕ್ಷಣದಲ್ಲಿ ಒಂದು ಸೆಕೆಂಡು ಅಂತರದಲ್ಲಿ ಗೆದ್ದು ಸಂಭ್ರಮಿಸಿದರು. ಬೆಂಗಳೂರಿನ ಖೇಲೊ ಇಂಡಿಯಾ ಶ್ರೇಷ್ಠತಾ ಕೇಂದ್ರದಲ್ಲಿ ವಸಂತ ಕುಮಾರ್ ಬಳಿ ಅವರು ತರಬೇತಿ ಪಡೆಯುತ್ತಿದ್ದಾರೆ.

3ನೇ ದಿನದ ಫಲಿತಾಂಶಗಳು (ಚಿನ್ನ ಮಾತ್ರ): ಪುರುಷರು: 23 ವರ್ಷದೊಳಗಿನವರು: 400 ಮೀ: ಮಹಾಂತೇಶ್ ಸಿದ್ದಪ್ಪ (ದಕ್ಷಿಣ ಕನ್ನಡ). ಕಾಲ: 47.99 ಸೆ; 1500 ಮೀ: ತುಷಾರ್ ವಸಂತ್‌ ಬಿ (ಬೆಳಗಾವಿ). ಕಾಲ: 4 ನಿ 2.34 ಸೆ; 110 ಮೀ ಹರ್ಡಲ್ಸ್‌: ಸುಶಾಂತ್ ಎಂ.ಡಿ (ಉಡುಪಿ). ಕಾಲ: 14.91 ಸೆ; ಲಾಂಗ್‌ಜಂಪ್‌: ಪುರುಷೋತ್ತಮ್ (ಹಾಸನ). ಅಂತರ: 7.41ಮೀ (ಕೂಟ ದಾಖಲೆ. ಹಿಂದಿನ ದಾಖಲೆ: ಆರ್ಯ ಎಸ್‌: 7.31 ಮೀ; 2022); 20 ವರ್ಷದೊಳಗಿನವರು: 400 ಮೀ: ರಿಹಾನ್‌ ಸಿ.ಎಚ್‌ (ಬೆಂಗಳೂರು). ಕಾಲ: 48.36 ಸೆ; 1500 ಮೀ: ಲೋಕೇಶ್‌ ಕೆ (ಯಾದಗಿರಿ). ಕಾಲ: 4ನಿ 7.15 ಸೆ; 110 ಮೀ ಹರ್ಡಲ್ಸ್‌: ಅಂಕಿತ್ ಜೋಗಿ (ಉಡುಪಿ). ಕಾಲ: 15.65 ಸೆ; ಲಾಂಗ್‌ಜಂಪ್‌: ಸುಹಾನ್ ಎಸ್‌ ಸುವರ್ಣ (ದಕ್ಷಿಣ ಕನ್ನಡ). ಅಂತರ: 7.14 ಮೀ; ಡಿಸ್ಕಸ್‌ ಥ್ರೋ: ವರುಣ್ ಡಿ.ಸಿ (ದಕ್ಷಿಣ ಕನ್ನಡ). ದೂರ: 43.76 ಮೀ; ಬಾಲಕರು: 18 ವರ್ಷದೊಳಗಿನವರು: 400 ಮೀ: ಪ್ರತೀಕ್  ಡಿ (ಬೆಂಗಳೂರು). ಕಾಲ: 49.88 ಸೆ; 1500 ಮೀ: ಚಿಂತನ್ ಎಚ್‌.ವಿ (ಕೊಡಗು). ಕಾಲ: 4ನಿ 6.89ಸೆ; 3000 ಮೀ: ನಿಖಿಲ್ ಸಿ (ಶಿವಮೊಗ್ಗ). ಕಾಲ: 9ನಿ 22.71 ಸೆ, 110 ಮೀ ಹರ್ಡಲ್ಸ್‌: ಚೈತನ್ಯ ಶ್ರೀಧರ್‌ (ಬೆಳಗಾವಿ). ಕಾಲ: 14.82 ಸೆ; 10000 ಮೀ ವೇಗ ನಡಿಗೆ: ದರ್ಶನ್‌ ಭರಮಪ್ಪ (ದಕ್ಷಿಣ ಕನ್ನಡ). ಕಾಲ: 54 ನಿ 41.53 ಸೆ; ಲಾಂಗ್‌ಜಂಪ್‌: ಉಜ್ವಲ್ ಕೆ.ಪೂಜಾರಿ (ದಕ್ಷಿಣ ಕನ್ನಡ). ಅಂತರ: 6.28ಮೀ; 16 ವರ್ಷದೊಳಗಿನವರು: 300 ಮೀ: ಮೋನಿಶ್ ಚಂದ್ರಶೇಖರ್‌ (ಬೆಂಗಳೂರು). ಕಾಲ: 36.61 ಸೆ;  80 ಮೀ ಹರ್ಡಲ್ಸ್‌: ವೀರೇಶ್ ಪಿ (ಬೆಂಗಳೂರು). ಕಾಲ: 11.1 ಸೆ (ಕೂಟ ದಾಖಲೆ: ಹಿಂದಿನ ದಾಖಲೆ: ತೇಜಲ್ ಕೆ.ಪಿ: 11.7ಸೆ, 2022); ಲಾಂಗ್‌ಜಂಪ್‌: ಹರ್ಷಿತ್‌ (ಉಡುಪಿ). ಅಂತರ: 5.67 ಮೀ; ಡಿಸ್ಕಸ್ ಥ್ರೋ: ಅಭಿಜಿತ್ ಟಿ.ನಾಯಕ್‌ (ಚಾಮರಾಜನಗರ). ದೂರ: 39.34ಮೀ; ಜಾವೆಲಿನ್: ಪುಷ್ಪಕ್ ನೆಲ್ವಾಡೆ (ಬೀದರ್‌). ದೂರ: 58.12ಮೀ; 14 ವರ್ಷದೊಳಗಿನವರು: 600 ಮೀ: ಅರ್ಜುನ್‌ ರಾಥೋಡ್‌ (ವಿಜಯಪುರ). ಕಾಲ: 1ನಿ 33.52 ಸೆ; ಲಾಂಗ್‌ ಜಂಪ್‌: ಸುಧಾಂಶು ರಾವ್‌ (ಬೆಂಗಳೂರು). ಅಂತರ: 5.10 ಮೀ; ಹೈಜಂಪ್‌: ದಕ್ಷ್‌ ಎಂ (ಬೆಂಗಳೂರು). ಎತ್ತರ: 1.54ಮೀ; ಜಾವೆಲಿನ್ ಥ್ರೋ: ಶರತ್‌ ಕೆ.ಜೆ (ಶಿವಮೊಗ್ಗ). ದೂರ: 7 ಮೀ.

ಮಹಿಳೆಯರು: 23 ವರ್ಷದೊಳಗಿನವರು: 400 ಮೀ: ಮೇಘಾ ರೇವಣಸಿದ್ದಯ್ಯ (ಧಾರವಾಡ). ಕಾಲ: 57.64 ಸೆ; ಹ್ಯಾಮರ್ ಥ್ರೋ: ವೀಕ್ಷಾ (ಉಡುಪಿ). ದೂರ: 37.24 ಮೀ; 20 ವರ್ಷದೊಳಗಿನವರು: 400 ಮೀ: ಶ್ರೇಯಾ ರಾಜೇಶ್‌ (ಬೆಂಗಳೂರು). ಕಾಲ: 57.18 ಸೆ; 1500 ಮೀ: ಪ್ರಿಯಾಂಕಾ (ಬೆಂಗಳೂರು). ಕಾಲ 4ನಿ 37.94 ಸೆ (ಕೂಟ ದಾಖಲೆ. ಹಿಂದಿನ ದಾಖಲೆ: ಶ್ರದ್ಧಾರಾಣಿ ದೇಸಾಯಿ: 4 ನಿ 42 ಸೆ; 2012); 3000 ಮೀ: ಆರಾಧನಾ (ಬೆಂಗಳೂರು). ಕಾಲ: 9ನಿ 54.81 ಸೆ; 100 ಮೀ ಹರ್ಡಲ್ಸ್‌: ಕೆ.ಪಿ.ಜಸ್ಮಿತಾ (ಉಡುಪಿ). ಕಾಲ: 16.57 ಸೆ; ಲಾಂಗ್‌ಜಂಪ್‌: ದಿಶಾ ಗಣಪತಿ (ಮೈಸೂರು). ಅಂತರ: 5.39 ಮೀ; ಡಿಸ್ಕಸ್‌ ಥ್ರೋ: ರೋಷಿಣಿ (ಚಾಮರಾಜನಗರ). ದೂರ: 40.52 ಮೀ; ಹ್ಯಾಮರ್ ಥ್ರೋ: ರೇವತಿ ಚಂದ್ರ (ಉಡುಪಿ). ದೂರ: 30.66ಮೀ; ಬಾಲಕಿಯರು: 18 ವರ್ಷದೊಳಗಿನವರು: 400 ಮೀ: ಗೀತಾ ಸಿ (ದಕ್ಷಿಣ ಕನ್ನಡ). ಕಾಲ: 58.81 ಸೆ; 1500 ಮೀ: ಸೀಮಾ ಮಹಾಂತೇಶ್‌ (ಹಾಸನ). ಕಾಲ: 5ನಿ 18.61 ಸೆ; 3000 ಮೀ: ಪ್ರಣತಿ (ಬೆಂಗಳೂರು). ಕಾಲ: 10ನಿ 37.50ಸೆ; ಲಾಂಗ್‌ಜಂಪ್‌: ಭುವನಾ ಸಾರಯ್ಯ (ವಿಜಯಪುರ). ಅಂತರ: 5.11ಮೀ; ಹ್ಯಾಮರ್ ಥ್ರೋ: ಸ್ಪೃಹಾ ನಾಯಕ್‌ (ಬೆಳಗಾವಿ). ದೂರ: 38.55 ಮೀ; 16 ವರ್ಷದೊಳಗಿನವರು: 300 ಮೀ: ರೀತುಶ್ರೀ (ದಕ್ಷಿಣ ಕನ್ನಡ). ಕಾಲ: 40.95 ಸೆ (ಕೂಟ ದಾಖಲೆ. ಹಿಂದಿನ ದಾಖಲೆ: 41.3 ಸೆ. ಉನ್ನತಿ ಅಯ್ಯಪ್ಪ; 2021); 2000 ಮೀ: ಚರಿಷ್ಮಾ (ದಕ್ಷಿಣ ಕನ್ನಡ). ಕಾಲ: 6ನಿ 51.64 ಸೆ (ಕೂಟ ದಾಖಲೆ. ಹಿಂದಿನ ದಾಖಲೆ: ಭವ್ಯಾ ಬಿ.ಯು: 6ನಿ 53.2 ಸೆ; 2019); 80 ಮೀ ಹರ್ಡಲ್ಸ್‌: ಎಂ.ಎಂ.ಜನ್ಯ ಬೊಳ್ಳಮ್ಮ (ಕೊಡಗು). ಕಾಲ:12.98ಸೆ; ಲಾಂಗ್‌ಜಂಪ್‌: ಅವನಿ ಗಣೇಶ್‌ (ಉಡುಪಿ). ಅಂತರ: 4.87 ಮೀ; ಡಿಸ್ಕಸ್ ಥ್ರೋ: ತೇಜಸ್ವಿನಿ ಸಿ (ಮೈಸೂರು). ದೂರ: 31.28 ಮೀ; ಜಾವೆಲಿನ್ ಥ್ರೋ: ಅಹರ್ನಿಶಿ ಕೆ.ವಿ (ಬೆಂಗಳೂರು). ದೂರ: 22.37 ಮೀ; 14 ವರ್ಷದೊಳಗಿನವರು: 600 ಮೀ: ಗೌರಿ ಪೂಜಾರಿ (ಬೆಳಗಾವಿ). ಕಾಲ: 1ನಿ 42.11ಸೆ; ಲಾಂಗ್‌ಜಂಪ್‌: ಚೇತನಾ ಭಾಸ್ಕರ್‌ (ಬೆಂಗಳೂರು). ಅಂತರ: 4.78 ಮೀ; ಹೈಜಂಪ್‌: ಚಿನ್ಮಯಿ (ದಕ). ಎತ್ತರ: 1.30 ಮೀ; ಜಾವೆಲಿನ್ ಥ್ರೋ: ನೇಹಾ ಆರ್‌ (ಬೆಂಗಳೂರು). ದೂರ: 21.5 ಮೀ.

[object Object]

23 ವರ್ಷದೊಳಗಿನ ಪುರುಷರ ಲಾಂಗ್‌ಜಂಪ್‌ನಲ್ಲಿ ದಾಖಲೆ ಮಾಡಿದ ಹಾಸನದ ಪುರುಷೋತ್ತಮ ಜಿಗಿತದ ಭಂಗಿ

– ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್

[object Object]

23 ವರ್ಷದೊಳಗಿನ ಪುರುಷರ 400 ಮೀಟರ್ಸ್ ಓಟದಲ್ಲಿ ಚಿನ್ನ ಗಳಿಸಿದ ದಕ್ಷಿಣ ಕನ್ನಡದ ಮಹಾಂತೇಶ್‌ ಸಿದ್ದಪ್ಪ –

ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್

ಅವಳಿ ಸಹೋದರರ ಮಧ್ಯೆ

ಸ್ಪರ್ಧೆ ಚಾಂಪಿಯನ್‌ಷಿಪ್‌ನ 20 ವರ್ಷದೊಳಗಿನ ಪುರುಷರ ಟ್ರಿಪಲ್ ಜಂಪ್‌ನಲ್ಲಿ ಪವನ್‌ ಚಿನ್ನ ಮತ್ತು ಪಂಕಜ್ ಬೆಳ್ಳಿ ಪದಕ ಗಳಿಸಿದರು. ಇವರಿಬ್ಬರೂ ಅವಳಿ ಸಹೋದರರು. ಹಾಸನ ಜಿಲ್ಲೆ ಹೊಳೆನರಸೀಪುರದವರಾದ ಇಬ್ಬರೂ ಈಗ ಮೈಸೂರಿನ ಬಿಜಿಎಸ್‌ ಕಾಲೇಜಿನಲ್ಲಿ ಮೊದಲ ವರ್ಷದ ಬಿಕಾಂ ವಿದ್ಯಾರ್ಥಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT