ನವದೆಹಲಿ: ದೇಶದ ಗ್ರಾಹಕರಿಗೆ ಸ್ಟಾರ್ಲಿಂಕ್ನ ಉಪಗ್ರಹ ಆಧಾರಿತ ಇಂಟರ್ನೆಟ್ ಸೇವೆಯನ್ನು ಒದಗಿಸಲು ಉದ್ಯಮಿ ಇಲಾನ್ ಮಸ್ಕ್ ಒಡೆತನದ ಸ್ಪೇಸ್ಎಕ್ಸ್ ಜೊತೆ ಒಪ್ಪಂದಕ್ಕೆ ಸಹಿ ಹಾಕಿರುವುದಾಗಿ ದೇಶದ ದೂರಸಂಪರ್ಕ ಕಂಪನಿ

ಭಾರ್ತಿ ಏರ್ಟೆಲ್ ಮಂಗಳವಾರ ತಿಳಿಸಿದೆ.

ಭಾರತದಲ್ಲಿ ಸ್ಪೇಸ್ಎಕ್ಸ್ ಜೊತೆಗೆ ಮಾಡಲಾಗುತ್ತಿರುವ ಮೊದಲ ಒಪ್ಪಂದ ಇದು. ಭಾರತದಲ್ಲಿ ಸ್ಟಾರ್ಲಿಂಕ್ ಅನ್ನು ಮಾರಾಟ ಮಾಡಲು ಸ್ಪೇಸ್ಎಕ್ಸ್ ಅನುಮತಿ ಪಡೆದರೆ ಮಾತ್ರ ಒಪ್ಪಂದವು ಅನುಷ್ಠಾನಗೊಳ್ಳಲಿದೆ ಎಂದು ಕಂಪನಿಯು ತಿಳಿಸಿದೆ.

ಉಪಗ್ರಹ ತರಂಗಾಂತರಯನ್ನು ಹೇಗೆ ಹಂಚಿಕೆ ಮಾಡಲು ಸಾಧ್ಯ ಎಂಬುದರ ಕುರಿತು ಮಸ್ಕ್ ಮತ್ತು ಮುಕೇಶ್ ಅಂಬಾನಿ ನಡುವೆ ತಿಕ್ಕಾಟ ನಡೆದಿತ್ತು. ಮಸ್ಕ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನೂ ವಾಷಿಂಗ್ಟನ್ನಲ್ಲಿ ಕಳೆದ ತಿಂಗಳು ಭೇಟಿಯಾಗಿದ್ದರು.

‘ಭಾರತದಲ್ಲಿರುವ ಏರ್ಟೆಲ್ ಗ್ರಾಹಕರಿಗೆ ಸ್ಟಾರ್ಲಿಂಕ್ ಸೇವೆ ನೀಡಲು ಸ್ಪೇಸ್ಎಕ್ಸ್ನೊಂದಿಗೆ

ಕೆಲಸ ಮಾಡಲಾಗುತ್ತಿದೆ. ಈ ಸಹಯೋಗದಿಂದ ಗ್ರಾಹಕರಿಗೆ ವಿಶ್ವದರ್ಜೆಯ ಹೈ-ಸ್ಪೀಡ್ ಬ್ರಾಡ್ಬ್ಯಾಂಡ್ ಸೇವೆ ನೀಡಲಾಗುವುದು’ ಎಂದು ಭಾರ್ತಿ ಏರ್ಟೆಲ್ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಉಪಾಧ್ಯಕ್ಷ ಗೋಪಾಲ್ ವಿಟ್ಟಲ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.