ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಷನ್ ಪ್ರೊ | ವರ್ಚುವಲ್ ರಿಯಾಲಿಟಿ ಹೆಡ್‌ಸೆಟ್‌ ‍ಪರಿಚಯಿಸಿದ ಆ್ಯಪಲ್ 

Published 6 ಜೂನ್ 2023, 6:09 IST
Last Updated 6 ಜೂನ್ 2023, 6:09 IST
ಅಕ್ಷರ ಗಾತ್ರ

ಕೂಪುಟಿನೊ (ಕ್ಯಾಲಿಫೋರ್ನಿಯಾ): ನೈಜ ಜಗತ್ತನ್ನು ಕಂಪ್ಯೂಟರ್‌ನ ಕಾಲ್ಪನಿಕ ಜಗತ್ತನ್ನಾಗಿ (ವರ್ಚುವಲ್ ರಿಯಾಲಿಟಿ) ಬದಲಿಸುವ ಅತ್ಯಾಧುನಿಕ ಕನ್ನಡಕವನ್ನು ಆ್ಯಪಲ್ ಕಂಪನಿ ಸೋಮವಾರ ಇಲ್ಲಿ ಬಿಡುಗಡೆ ಮಾಡಿತು.

3,500 ಅಮೆರಿಕನ್ ಡಾಲರ್‌ ಮೊತ್ತದ ಈ ಅತ್ಯಾಧುನಿಕ ಕನ್ನಡಕಕ್ಕೆ ‘ವಿಷನ್ ಪ್ರೊ‘ ಎಂದು ಹೆಸರಿಸಿದೆ. ಆಗ್ಮೆಂಟೆಡ್ ರಿಯಾಲಿಟಿ ಜತೆಗೆ, ಯಾವುದೇ ವಸ್ತುವನ್ನು ನೋಡಿದಾಕ್ಷಣ ಅದನ್ನು ಗ್ರಹಿಸಿ ಅದರ 3ಡಿ ಮಾಹಿತಿಯಾಗಿ ಪರಿವರ್ತಿಸಬಲ್ಲ ಸ್ಪೇಷಿಯಲ್ ಕಂಪ್ಯೂಟಿಂಗ್ ಅನ್ನೂ ಆ್ಯಪಲ್ ಇದರಲ್ಲಿ ಅಳವಡಿಸಿರುವುದರಿಂದ ಜಾಗತಿಕ ಮಟ್ಟದಲ್ಲಿ ಸಾಕಷ್ಟು ಸದ್ದು ಮಾಡಿದೆ.‌

ಕೊರೊನಾ ಸಂದರ್ಭದಲ್ಲಿ ಯಾರನ್ನೂ ಭೇಟಿಯಾಗದ ಸಂದರ್ಭದಲ್ಲಿ ವರ್ಚುವಲ್ ರಿಯಾಲಿಟಿ ಕುರಿತು ಸಾಕಷ್ಟು ಚರ್ಚೆಗಳು ನಡೆದವು. ಆ ಸಂದರ್ಭದಲ್ಲಿ ಇಂಥದ್ದೊಂದು ಪರಿಕಲ್ಪನೆ ಕುರಿತು ಭಾರೀ ಚರ್ಚೆ ನಡೆದಿತ್ತು. ಅವುಗಳ ವಿನ್ಯಾಸಗಳೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಆ ಪರಿಕಲ್ಪನೆ ಈಗ ಮೂರ್ತರೂಪ ಪಡೆದಿದೆ. ಆದರೆ ಕೊರೊನಾ ಸೋಂಕು ಮರೆಯಾಗಿ ಎಲ್ಲರೂ ಮುಕ್ತವಾಗಿ ಬೆರೆಯುತ್ತಿರುವ ಕಾಲಘಟ್ಟದಲ್ಲಿ ’ವಿಷನ್ ಪ್ರೊ‘ ಅನ್ನು ಗ್ರಾಹಕರು ಹೇಗೆ ಸ್ವೀಕರಿಸಲಿದ್ದಾರೆ ಎಂಬುದನ್ನು ಕಾಲವೇ ನಿರ್ಧರಿಸಬೇಕು ಎಂಬುದು ತಂತ್ರಜ್ಞಾನ ಪಂಡಿತರ ಅಂಬೋಣ.

ವರ್ಚುವಲ್ ರಿಯಾಲಿಟಿಯಲ್ಲಿ ಗೂಗಲ್‌ ಗ್ಲಾಸ್, ಮ್ಯಾಜಿಕ್ ಲೀಪ್, ಮೈಕ್ರೊಸಾಫ್ಟ್ ಹೊಲೊಲೆನ್ಸ್‌ ಹಾಗೂ ಮೆಟಾ ಕ್ವೆಸ್ಟ್ ಪ್ರೊಗಳಿವೆ. ಆದರೆ ಜನರನ್ನು ದೊಡ್ಡ ಮಟ್ಟದಲ್ಲಿ ತಲುಪಿದ್ದು ಕಡಿಮೆ. ಕಂಪನಿಗಳೂ ಇಂಥ ಅತ್ಯಾಧುನಿಕ ಕನ್ನಡಗಳು ವರ್ಚುವಲ್ ರಿಯಾಲಿಟಿ ಹೇಗಾಗಲಿವೆ ಎಂಬುದನ್ನು ವಿವರಿಸುವಲ್ಲೂ ಸಫಲವಾಗಿಲ್ಲ. 

ಈಗ ಇದಕ್ಕೊಂದು ಹೊಸ ಸೇರ್ಪಡೆ ವಿಷನ್ ಪ್ರೊ. ಮುಂದಿನ ವರ್ಷ ಮಾರುಕಟ್ಟೆಗೆ ಬರಲಿರುವ ಈ ಉತ್ಪನ್ನದ ಬೆಲೆ ಬಹಳಷ್ಟು ಗ್ರಾಹಕರ ಹುಬ್ಬೇರಿಸಿದೆ.

ನೋಡಲ್ ವಿಷನ್ ಪ್ರೊ ಸ್ಕೀ ಕನ್ನಡಕವಿದ್ದಂತಿದೆ (ಹಿಮದಲ್ಲಿ ಸ್ಕೇಟಿಂಗ್ ನಡೆಸುವಾಗ ಬಳಸುವ ಕನ್ನಡ). ಆದರೆ ಮೂರನೇ ಆಯಾಮದ ದೃಶ್ಯದೊಂದಿಗೆ ಸಂವಹನ ಸಾಧ್ಯವಾಗಲಿದೆ. ತಮ್ಮ ಸುತ್ತಮುತ್ತಲಿನ ನೈಜ ದೃಶ್ಯಗಳ ಜನತೆಗೆ ವರ್ಚುವಲ್ ರಿಯಾಲಿಟಿಯನ್ನು ಏಕಕಾಲಕ್ಕೆ ಅಥವಾ ಪ್ರತ್ಯೇಕವಾಗಿ ನೋಡಲು ಸಾಧ್ಯ. 

ಇದೇ ಸಂದರ್ಭದಲ್ಲಿ ಫೇಸ್‌ಟೈಮ್, ಸಫಾರಿ ಹಾಗೂ ಆ್ಯಪಲ್‌ನ ಇತರ ಅಪ್ಲಿಕೇಷನ್‌ಗಳನ್ನು ಬಳಸಲೂ ಸಾಧ್ಯ. ಎಲ್ಲವೂ ಕನ್ನಡಕದ ಗಾಜಿನ ಪರದೆ ಎದುರು ಗಾಳಿಯಲ್ಲಿ ಹಾರಿ ಬಂದಂತೆ ಗೋಚರಿಸಲಿವೆ. ಎರಡು ಗಂಟೆ ಬ್ಯಾಟರಿ ಬ್ಯಾಕಪ್‌ ಇರುವ ವಿಷನ್‌ ಪ್ರೊಗೆ ಬ್ಯಾಟರಿ ಪ್ಯಾಕ್‌ನಿಂದ ವೈರ್‌ ಅಳವಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT