ಸೋಮವಾರ, ಏಪ್ರಿಲ್ 6, 2020
19 °C

ಥಾಮ್ಸನ್‌ ಸ್ಮಾರ್ಟ್‌ ಟಿವಿ ರಿಯಾಯಿತಿ ಕೊಡುಗೆ: ₹9,999ರಿಂದ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಥಾಮ್ಸನ್‌ ತನ್ನ ಹೊಸ ಟಿವಿಗಳ ದರ ಕಡಿತ ಘೋಷಿಸಿದೆ. ಮಾರ್ಚ್‌ 19ರಿಂದ ಆರಂಭವಾಗಿರುವ ಫ್ಲಿಪ್‌ಕಾರ್ಟ್‌ ಬಿಗ್‌ ಸೇಲ್‌ ಡೇನಲ್ಲಿ ಅತಿ ಕಡಿಮೆ ಬೆಲೆಗೆ ಥಾಮ್ಸನ್‌ ಟಿವಿ ಲಭ್ಯವಿದೆ. ಇತ್ತೀಚೆಗೆ ಬಿಡುಗಡೆಯಾಗಿರುವ 40 ಇಂಚುಗಳ 4ಕೆ ಟಿವಿ 21,999ಕ್ಕೆ ಲಭ್ಯವಿದೆ. 

ಪೂರ್ಣ ಸ್ಮಾರ್ಟ್‌ ಆಯ್ಕೆಗಳನ್ನು ಒಳಗೊಂಡಿರುವ ಥಾಮ್ಸನ್‌ ಟಿವಿಗಳಿಗೆ ₹9,999ರಿಂದ ₹17,999 ಬೆಲೆ ನಿಗದಿಯಾಗಿದೆ. 40 ಇಂಚು 4ಕೆ ಟಿವಿಗಳ ಆರಂಭಿಕ ಬೆಲೆ ₹19,499 ಇದೆ. ಸ್ಮಾರ್ಟ್‌ ಅಲ್ಲದ ಎಲ್‌ಇಡಿ ಟಿವಿಗಳು ₹7,499ಕ್ಕೆ ಲಭ್ಯವಿದೆ. 

2019ರಲ್ಲಿ ಥಾಮ್ಸನ್‌ 4ಕೆ ಮತ್ತು ಆ್ಯಂಡ್ರಾಯ್ಡ್‌ ಸ್ಮಾರ್ಟ್‌ ಟಿವಿಗಳನ್ನು ಪರಿಚಯಿಸಿತು. ಭಾರತದ ಗ್ರಾಹಕರಿಗೆ ಕೈಗೆಟುಕುವ ಬೆಲೆಗೆ ಉತ್ತಮ ಆಯ್ಕೆಗಳನ್ನು ಹೊಂದಿರುವ ಹಾಗೂ 4ಕೆ ಗುಣಮಟ್ಟದ ವಿಡಿಯೊಗಳ ವೀಕ್ಷಣೆಗೆ ಸಹಕಾರಿಯಾಗುವ ಟಿವಿಗಳನ್ನು ಪೂರೈಸಲು ಕಂಪನಿ ಪ್ರಯತ್ನಿಸುತ್ತಿದೆ.  

ಥಾಮ್ಸನ್‌ ಪೂರ್ಣ ಭಾರತದಲ್ಲಿಯೇ ತಯಾರಾಗುತ್ತಿರುವ ಏಕೈಕ ಟಿವಿ ಬ್ರ್ಯಾಂಡ್‌ ಆಗಿದೆ. ಸೂಪರ್‌ ಪ್ಲಾಸ್ಟ್ರಾನಿಕ್ಸ್‌ ಪ್ರೈ. ಲಿ. (SPPL) ಟಿವಿಗಳ ತಯಾರಿ, ಮಾರಾಟ ನಡೆಸುತ್ತಿದೆ. ಕಂಪನಿಯ ಅಧಿಕೃತ ವೆಬ್‌ಸೈಟ್‌ www.thomsontv.in ನಲ್ಲಿ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ. 

32 ಇಂಚು ಎಚ್‌ಡಿ ಎಲ್‌ಇಡಿ ಸ್ಮಾರ್ಟ್‌ ಟಿವಿ– ₹9,999

40 ಇಂಚು ಅಲ್ಟ್ರಾ ಎಚ್‌ಡಿ (4ಕೆ) ಎಲ್‌ಇಡಿ ಸ್ಮಾರ್ಟ್‌ ಟಿವಿ– ₹19,499

65 ಇಂಚು ಅಲ್ಟ್ರಾ ಎಚ್‌ಡಿ (4ಕೆ) ಎಲ್‌ಇಡಿ ಸ್ಮಾರ್ಟ್‌ ಟಿವಿ– ₹52,999

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು