ಚೀನಾದ ಸ್ಮಾರ್ಟ್ಫೋನ್ ತಯಾರಿಕಾ ಕಂಪನಿ ರಿಯಲ್ಮಿ ಭಾರತದಲ್ಲಿ ಹೊಸ ಬಜೆಟ್ ಫೋನ್ ಬಿಡುಗಡೆ ಮಾಡಿದೆ. ರಿಯಲ್ಮಿ ಸಿ3 ಬೆಲೆ ₹ 6,999 ನಿಗದಿಯಾಗಿದೆ.

ಈಗಾಗಲೇ ಮಾರುಕಟ್ಟೆಯಲ್ಲಿರುವ ರಿಯಲ್ಮಿ ಸಿ2 ಮಾದರಿಗಿಂತಲೂ ದೊಡ್ಡ ಡಿಸ್ಪ್ಲೇ, ವಿನ್ಯಾಸ ಮತ್ತು ಸಾಮರ್ಥ್ಯದಲ್ಲಿ ಬದಲಾವಣೆಯನ್ನು ಸಿ3 ಹೊಂದಿದೆ. 3ಜಿಬಿ ರ್ಯಾಮ್ ಮತ್ತು 32ಜಿಬಿ ಸಂಗ್ರಹ ಸಾಮರ್ಥ್ಯ ಹೊಂದಿರುವ ಸ್ಮಾರ್ಟ್ಫೋನ್ನ್ನು ಕಂಪನಿ 'ಎಂಟರ್ಟೈನ್ಮೆಂಟ್ ಕಾ ಸೂಪರ್ಸ್ಟಾರ್' ಎಂದೇ ಪ್ರಚಾರ ಮಾಡುತ್ತಿದೆ.

'ರಿಯಲ್ಮಿ ಸಿ3' 4ಜಿ ರ್ಯಾಮ್ ಮತ್ತು 64ಜಿಬಿ ಸಂಗ್ರಹ ಸಾಮರ್ಥ್ಯದಲ್ಲೂ ಲಭ್ಯವಿದ್ದು, ಬೆಲೆ ₹ 7,999 ನಿಗದಿಯಾಗಿದೆ.

12 ಎಂಪಿ + 2 ಎಂಪಿ ಹಿಂಬದಿಯ ಕ್ಯಾಮೆರಾ ಇದ್ದು, ಕ್ರೋಮಾ ಬೂಸ್ಟ್, 4X ಡಿಜಿಟಲ್ ಜೂಮ್, ಟೈಮ್ ಲ್ಯಾಪ್ಸ್, ಸ್ಲೋ ಮೋಷನ್ ವಿಡಿಯೊ ಹಾಗೂ ನೈಟ್ಸ್ಟೇಪ್ ಮೋಡ್ ಆಯ್ಕೆಗಳನ್ನು ಕ್ಯಾಮೆರಾ ಒಳಗೊಂಡಿದೆ. ಮುಂದೆ 5 ಎಂಪಿ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ. ಎಚ್ಡಿಆರ್, ಪನೋರಮಿಕ್ ವ್ಯೂ ಹಾಗೂ ಪೋರ್ಟ್ರೇಟ್ ಮೋಡ್ ಆಯ್ಕೆಗಳಿವೆ.

5,000 ಎಂಎಎಚ್ ಬ್ಯಾಟರಿ ಹೊಂದಿರುವುದರಿಂದ ಇಡೀ ದಿನ ಬ್ಯಾಟರಿ ಚಾರ್ಜ್ ಇರಲಿದೆ ಹಾಗೂ 10 ವ್ಯಾಟ್ ಚಾರ್ಜಿಂಗ್ ಸಹಕರಿಸುತ್ತದೆ. ಆ್ಯಂಡ್ರಾಯ್ಡ್ 10 ಔಟ್–ಆಫ್–ದಿ–ಬಾಕ್ಸ್ ಒಎಸ್ ಹೊಂದಿದೆ. 3.5 ಎಂಎಂ ಹೆಡ್ಫೋನ್ ಜ್ಯಾಕ್, ಬ್ಲೂಟೂಥ್ 5.0, ಯುಎಸ್ಬಿ 2.0 ಪೋರ್ಟ್ ಒಳಗೊಂಡಿದೆ.

ಫ್ರೋಜನ್ ಬ್ಲೂ ಮತ್ತು ಬ್ಲೇಜಿಂಗ್ ರೆಡ್ ಎರಡು ಬಣ್ಣಗಳಲ್ಲಿ ಫೋನ್ ಲಭ್ಯವಿದ್ದು, ಫೆ.14ರಂದು ಫ್ಲಿಪ್ಕಾರ್ಟ್ನಲ್ಲಿ ಮಾರಾಟ ಆರಂಭಿಸಲಿದೆ. ರಿಯಲ್ಮಿ ಅಧಿಕೃತ ವೆಬ್ಸೈಟ್ ಹಾಗೂ ಮಳಿಗೆಗಳಲ್ಲೂ ಖರೀದಿಗೆ ಸಿಗಲಿದೆ.

ರಿಯಲ್ಮಿ ಸಿ3 ವೈಶಿಷ್ಟ್ಯಗಳು

* 6.52 ಇಂಚು ಎಚ್ಡಿ ಡಿಸ್ಪ್ಲೇ + 2.5ಡಿ ಗೋರಿಲ್ಲ ಗ್ಲಾಸ್ 3 ರಕ್ಷಣಾ ಕವಚ

* ಮೀಡಿಯಾಟೆಕ್ ಹೀಲಿಯೊ ಜಿ70 ಪ್ರೊಸೆಸರ್

* ಗ್ರಾಫಿಕ್ಸ್ಗಾಗಿ ಜಿ52 ಜಿಪಿಯು

* ಹಿಂಬದಿಯಲ್ಲಿ ಎರಡು ಕ್ಯಾಮೆರಾ: 12 ಎಂಪಿ + 2 ಎಂಪಿ

* ಸೆಲ್ಫಿಗಾಗಿ 5 ಎಂಪಿ ಕ್ಯಾಮೆರಾ

* 5,000 ಎಂಎಎಚ್ ಬ್ಯಾಟರಿ

ಬೆಲೆ ₹ 6,999

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.