ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಯಾಮ್‌ಸಂಗ್ ಕ್ಯೂಎಲ್‌ಇಡಿ ಸ್ಮಾರ್ಟ್ ಟಿ.ವಿ.ಗಳ ಮಾರಾಟದಲ್ಲಿ ಶೇ.53ರಷ್ಟು ಹೆಚ್ಚಳ

Last Updated 2 ನವೆಂಬರ್ 2020, 11:15 IST
ಅಕ್ಷರ ಗಾತ್ರ

ಬೆಂಗಳೂರು: ಎಲೆಕ್ಟ್ರಾನಿಕ್ಸ್‌ ಬ್ರ್ಯಾಂಡ್‌ ಸ್ಯಾಮ್‌ಸಂಗ್‌ ಹಬ್ಬದ ಮೊದಲ 20 ದಿನಗಳಲ್ಲಿ ಒಟ್ಟಾರೆ ಗ್ರಾಹಕ ಎಲೆಕ್ಟ್ರಾನಿಕ್ಸ್‌ ವಹಿವಾಟಿನಲ್ಲಿ ಶೇ 13ರಷ್ಟು ಪ್ರಗತಿ ಸಾಧಿಸಿದೆ.

ಬೆಂಗಳೂರಿನ ಗ್ರಾಹಕರು ದೊಡ್ಡ ಸ್ಕ್ರೀನ್‌ನ ಸ್ಯಾಮ್‌ಸಂಗ್ ಸ್ಮಾರ್ಟ್ ಟಿ.ವಿ.ಗಳಿಗೆ ಮತ್ತು ಹೆಚ್ಚಿನ ಸಾಮರ್ಥ್ಯದ ಸ್ಯಾಮ್‌ಸಂಗ್ ವಾಷಿಂಗ್ ಮೆಷಿನ್‌ಗಳು ಹಾಗೂ ರೆಫ್ರಿಜಿರೇಟರ್‌ಗಳಿಗೆ ಹಬ್ಬದ ಸಂದರ್ಭದಲ್ಲಿ ಅಪ್‌ಗ್ರೇಡ್ ಮಾಡುತ್ತಿದ್ದಾರೆ. ಇದರಿಂದಾಗಿ ಕಂಪನಿಯ ಒಟ್ಟಾರೆ ಟಿ.ವಿ. ವಿಭಾಗದಲ್ಲಿ ಶೇ.18ರಷ್ಟು ಪ್ರಗತಿ ದಾಖಲಾಗಿದ್ದರೆ, ನಗರದಲ್ಲಿ 55-ಇಂಚು ಮತ್ತು ಮೇಲ್ಪಟ್ಟ ವಿಭಾಗವು ಶೇ.31ರಷ್ಟು ಉನ್ನತಿ ಕಂಡಿದೆ.

ಸ್ಯಾಮ್‌ಸಂಗ್ ಕ್ಯೂಎಲ್‌ಇಡಿ ಸ್ಮಾರ್ಟ್ ಟಿ.ವಿ.ಗಳ ಮಾರಾಟದಲ್ಲಿ ಶೇ.53ರಷ್ಟು ಹೆಚ್ಚಳವಾಗಿದೆ. ಹೊಸ ಸ್ಮಾರ್ಟ್‌ಫೋನ್‌ಗಳು ಹಾಗೂ ಟಿವಿಗಳನ್ನು ಬಿಡುಗಡೆ ಮಾಡಿರುವ ಸ್ಯಾಮ್‌ಸಂಗ್‌, ನವೆಂಬರ್‌ 20ರ ವರೆಗೂ ₹20,000ವರೆಗೂ ಕ್ಯಾಷ್‌ಬ್ಯಾಕ್‌, ಕಡಿಮೆ ಮೊತ್ತದ ಇಎಂಐ ಕೊಡುಗೆಗಳನ್ನು ನೀಡುತ್ತಿದೆ.

ಇನ್ನೂ ಪ್ರೀಮಿಯಂ ರೆಫ್ರಿಜಿರೇಟರ್ ಮತ್ತು ವಾಷಿಂಗ್ ಮೆಷಿನ್ ಮಾರಾಟ ಕ್ರಮವಾಗಿ ಶೇ.60 ಮತ್ತು ಶೇ.34ರಷ್ಟು ಹೆಚ್ಚಳವಾಗಿದೆ. 8ಕೆಜಿ ಮತ್ತು ಮೇಲ್ಪಟ್ಟ ಫುಲ್ಲಿ ಆಟೊಮ್ಯಾಟಿಕ್ ಫ್ರಂಟ್ ಲೋಡ್ ವಾಷಿಂಗ್ ಮೆಷಿನ್ ವಲಯವು ಶೇ.34ರಷ್ಟು ಪ್ರಗತಿ ಕಂಡಿರುವುದಾಗಿ ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT