ಶುಕ್ರವಾರ, 1 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

samsung galaxy: ಸ್ಯಾಮ್ಸಂಗ್ ಗ್ಯಾಲಕ್ಸಿ ಬಡ್ಸ್‌ಗೆ ಬಂದ ಎಐ ವೈಶಿಷ್ಟ್ಯ

Published 13 ಫೆಬ್ರುವರಿ 2024, 15:00 IST
Last Updated 13 ಫೆಬ್ರುವರಿ 2024, 15:00 IST
ಅಕ್ಷರ ಗಾತ್ರ

ಬೆಂಗಳೂರು: ಭಾರತದ ಅತಿದೊಡ್ಡ ಎಲೆಕ್ಟ್ರಾನಿಕ್ಸ್ ಕಂಪನಿ ಸ್ಯಾಮ್‌ಸಂಗ್‌, ಗ್ಯಾಲಕ್ಸಿ ಬಡ್ಸ್ 2 ಪ್ರೊ, ಗ್ಯಾಲಕ್ಸಿ ಬಡ್ಸ್ 2 ಮತ್ತು ಗ್ಯಾಲಕ್ಸಿ ಬಡ್ಸ್ ಎಫ್ಇಗಳಲ್ಲಿ ಎಐ (AI) ವೈಶಿಷ್ಟ್ಯಗಳನ್ನು ಆನಂದಿಸಬಬಹುದು. 

ಸ್ಯಾಮ್‌ಸಂಗ್‌ ಬಳಕೆದಾರರು ಇದೀಗ ಭಾರತದಲ್ಲಿ ತಯಾರಾದ ಗ್ಯಾಲಕ್ಸಿ ಎಸ್24 ಸರಣಿಯ ಫೋನ್‌ಗಳ ಮೂಲಕ ಗ್ಯಾಲಕ್ಸಿ ಬಡ್ಸ್‌ನಲ್ಲಿ ಎಐ ವೈಶಿಷ್ಟ್ಯಗಳನ್ನು ಪರಿಚಯಿಸಿದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ. 

ಎಐ ಚಾಲಿತ ನೇರ ಅನುವಾದದಿಂದ ಬಳಕೆದಾರರು ಗ್ಯಾಲಕ್ಸಿ ಬಡ್ಸ್ ಮೂಲಕ ಮಾತನಾಡುವಾಗ ಗ್ಯಾಲಕ್ಸಿ ಎಸ್24 ಸರಣಿಯ ಮೊಬೈಲ್‌ಗಳ ಪರದೆಯ ಮೇಲೆ ಭಾಷಾಂತರವನ್ನು ನೋಡುತ್ತ ಮಾತನಾಡಬಹುದು. ಗ್ಯಾಲಕ್ಸಿ ಬಡ್ಸ್‌ ಮತ್ತು ಎಸ್24 ಸರಣಿಯ ಪೋನ್‌ಗಳನ್ನು ಹೊಂದಿರುವ ಇಬ್ಬರು ವ್ಯಕ್ತಿಗಳು ನೇರವಾಗಿ ಬಡ್ಸ್‌ ಮೈಕ್‌ನಲ್ಲಿ ಮಾತನಾಡಿದಾಗ ಅವರ ಅನುವಾದಿತ ಧ್ವನಿಯು ನೈಸರ್ಗಿಕ ಸಂಭಾಷಣೆ ರೀತಿಯಲ್ಲೇ ಇರುತ್ತದೆ. ಇದು ಫೋನ್‌ ಹಸ್ತಾಂತರಿಸುವ ಮತ್ತು ಅನುವಾದಿತ ಮಾತುಕತೆ ನಿರ್ವಹಿಸುವ ಅಗತ್ಯವನ್ನು ನಿವಾರಿಸುತ್ತದೆ.

ಎಐ ವೈಶಿಷ್ಟ್ಯಗಳನ್ನು ಹೊಂದಿರುವ ಗ್ಯಾಲಕ್ಸಿ ಬಡ್ಸ್‌ಗಳು ಉತ್ಕೃಷ್ಟವಾದ ಧ್ವನಿ ಗುಣಮಟ್ಟನ್ನು ಹೊಂದಿವೆ. ಪ್ರೀಮಿಯಂ ಗ್ಯಾಲಕ್ಸಿ ಬಡ್ಸ್ 2 ಪ್ರೊನಲ್ಲಿ 24ಬಿಟ್ ಹೈ-ಫೈ ಧ್ವನಿ ಗುಣಮಟ್ಟವಿದೆ. ಬಡ್ಸ್‌ ಎಫ್‌ಇನಲ್ಲಿ ಉತ್ತಮ ಸೌಂಡ್‌ ಬಾರ್‌ ಮತ್ತು ಹೊಸ ಬಾಸ್‌ ತಂತ್ರಜ್ಞಾನದ ಮೂಲಕ ಸಂಗೀತ ಆಲಿಸಬಹುದು. 

ಎಐ ಚಾಲಿತ ಗ್ಯಾಲಕ್ಸಿ ಬಡ್ಸ್‌ನ ವೈಶಿಷ್ಟ್ಯಗಳ ಹೆಚ್ಚಿನ ಮಾಹಿತಿಗೆ ಕಂಪನಿಯ ವೆಬ್‌ಸೈಟ್‌ಗೆ (samsung.com) ಲಾಗಿನ್‌ ಆಗಿ ನೋಡಬಹುದು.

ಗ್ಯಾಲಕ್ಸಿ ಬಡ್ಸ್‌ | ಗ್ಯಾಲಕ್ಸಿ S24 ಸರಣಿಯ ಮೊಬೈಲ್‌ಗಳ ಬೆಲೆ

1. ಗ್ಯಾಲಕ್ಸಿ S24: 8GB(ರ‍್ಯಾಮ್‌), 256GB (ಸ್ಟೋರೆಜ್‌), ಬೆಲೆ–  ₹ 79,999

2. ಗ್ಯಾಲಕ್ಸಿ S24: 12GB(ರ‍್ಯಾಮ್‌), 512GB (ಸ್ಟೋರೆಜ್‌), ಬೆಲೆ–  ₹ 89,999

3, ಗ್ಯಾಲಕ್ಸಿ S24+: 12GB (ರ‍್ಯಾಮ್‌), 256GB (ಸ್ಟೋರೆಜ್‌), ಬೆಲೆ–  ₹ 99,999

4, ಗ್ಯಾಲಕ್ಸಿ S24+: 12GB (ರ‍್ಯಾಮ್‌), 512GB (ಸ್ಟೋರೆಜ್‌), ಬೆಲೆ–  ₹ 109,999

5, ಗ್ಯಾಲಕ್ಸಿ S24 Ultra: 12GB (ರ‍್ಯಾಮ್‌), 256GB (ಸ್ಟೋರೆಜ್‌), ಬೆಲೆ–  ₹ 129,999

6, ಗ್ಯಾಲಕ್ಸಿ S24 Ultra: 12GB (ರ‍್ಯಾಮ್‌), 512GB (ಸ್ಟೋರೆಜ್‌), ಬೆಲೆ–  ₹ 139,999

7, ಗ್ಯಾಲಕ್ಸಿ S24 Ultra: 12GB (ರ‍್ಯಾಮ್‌), 1TB (ಸ್ಟೋರೆಜ್‌), ಬೆಲೆ–  ₹ 159,999

ಗ್ಯಾಲಕ್ಸಿ ಬಡ್ಸ್‌ಗಳ ಬೆಲೆ 

1. ಗ್ಯಾಲಕ್ಸಿ ಬಡ್ಸ್ 2 ಪ್ರೊ ಬೆಲೆ: ₹ 17,999

2. ಗ್ಯಾಲಕ್ಸಿ ಬಡ್ಸ್ 2 ಬೆಲೆ: ₹ 11,999

3. ಗ್ಯಾಲಕ್ಸಿ ಬಡ್ಸ್ ಎಫ್ಇ ಬೆಲೆ: ₹ 9,999

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT