ಬುಧವಾರ, ಅಕ್ಟೋಬರ್ 5, 2022
27 °C

ಭಾರತದ ಮಾರುಕಟ್ಟೆಗೂ ಬರಲಿದೆ ಗೂಗಲ್ ಪಿಕ್ಸೆಲ್ 7 ಸ್ಮಾರ್ಟ್‌ಫೋನ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

DH FILE

ಬೆಂಗಳೂರು: ಕಳೆದ ಜುಲೈನಲ್ಲಿ ಗೂಗಲ್, ಪಿಕ್ಸೆಲ್ ಸರಣಿಯಲ್ಲಿ ನೂತನ ಸ್ಮಾರ್ಟ್‌ಫೋನ್ ಪಿಕ್ಸೆಲ್ 6A ಅನ್ನು ದೇಶದಲ್ಲಿ ಬಿಡುಗಡೆ ಮಾಡಿತ್ತು.

ಈ ಬಾರಿ ಗೂಗಲ್, ಪಿಕ್ಸೆಲ್ 7 ಸರಣಿಯನ್ನು ಭಾರತದಲ್ಲಿ ಪರಿಚಯಿಸಲು ಮುಂದಾಗಿದೆ.

ಗೂಗಲ್, ಹೊಸ ಪಿಕ್ಸೆಲ್ 7 ಸರಣಿ ಕುರಿತು ಟೀಸರ್ ಬಿಡುಗಡೆ ಮಾಡಿದೆ.

ಹೊಸದಾಗಿ ಪಿಕ್ಸೆಲ್ 7 ಮತ್ತು ಪಿಕ್ಸೆಲ್ 7 ಪ್ರೊ ಜಾಗತಿಕ ಮಾರುಕಟ್ಟೆಗೆ ಲಗ್ಗೆ ಇರಿಸಲಿದೆ. ಅಕ್ಟೋಬರ್ 6ರಂದು ನೂತನ ಪಿಕ್ಸೆಲ್ ಸರಣಿ ಬಿಡುಗಡೆಯಾಗಲಿದ್ದು, ಅಂದೇ ಪ್ರಿಬುಕಿಂಗ್ ಕೂಡ ಆರಂಭವಾಗಲಿದೆ.

ಕಳೆದ ಬಾರಿ ಬಿಡುಗಡೆಯಾಗಿದ್ದ ಪಿಕ್ಸೆಲ್ 6a ಸ್ಮಾರ್ಟ್‌ಫೋನ್, ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇ ಸೇಲ್ ಮೂಲಕ ಆಫರ್ ದರದಲ್ಲಿ ಖರೀದಿಗೆ ಲಭ್ಯವಾಗುತ್ತಿದೆ.

ಪಿಕ್ಸೆಲ್ 7 ಸ್ಮಾರ್ಟ್‌ಫೋನ್‌ನಲ್ಲಿ ಹಿಂಭಾಗದಲ್ಲಿ ಎರಡು ಕ್ಯಾಮೆರಾ ಮತ್ತು ಪಿಕ್ಸೆಲ್ 7 ಪ್ರೊ ಸ್ಮಾರ್ಟ್‌ಫೋನ್‌ನಲ್ಲಿ ತ್ರಿವಳಿ ಕ್ಯಾಮೆರಾ ಇರಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು