ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್‌ಪಿ ಪೆವಿಲಿಯನ್‌ ಏರೊ 13 ಲ್ಯಾ‍ಪ್‌ಟಾಪ್ ಬಿಡುಗಡೆ: ಇಲ್ಲಿದೆ ಸಂಪೂರ್ಣ ಮಾಹಿತಿ

Last Updated 6 ಆಗಸ್ಟ್ 2021, 8:07 IST
ಅಕ್ಷರ ಗಾತ್ರ

ಬೆಂಗಳೂರು: ಎಚ್‌ಪಿ ಪೆವಿಲಿಯನ್‌ ಏರೊ 13 ಬಿಡುಗಡೆ ಮಾಡುವ ಮೂಲಕ ಎಚ್‌ಪಿ ಕಂಪನಿಯು ತನ್ನ ಪೆವಿಲಿಯನ್‌ ನೋಟ್‌ಬುಕ್‌ ಮಾದರಿಯನ್ನು ವಿಸ್ತರಿಸಿದೆ.

ಎಎಂಡಿ ರೇಡಿಯಾನ್‌ ಗ್ರಾಫಿಕ್ಸ್‌ ಜೊತೆಗೆ ಎಎಂಡಿ ರೇಜನ್‌ 5&7 5800ಯು ಮೊಬೈಲ್‌ ಪ್ರೊಸೆಸರ್ ಹೊಂದಿದೆ. 10.5 ಗಂಟೆಗಳ ಬ್ಯಾಟರಿ ಬಾಳಿಕೆ, ಸ್ಕ್ರೀನ್‌–ಟು–ಬಾಡಿ ರೇಶಿಯೊ ಶೇ 90ರಷ್ಟು ಹೊಂದಿರುವ ಮೊದಲ ಪೆವಿಲಿಯನ್‌ ನೋಟ್‌ಬುಕ್‌ ಇದಾಗಿದೆ. 16:10 ಆಸ್ಪೆಕ್ಟ್‌ ರೇಶಿಯೊ ಮತ್ತು 1990 ರೆಸಲ್ಯೂಶನ್‌, 13.3 ಇಂಚು ಡಿಸ್‌ಪ್ಲೇ ಹೊಂದಿದೆ ಎಂದು ಕಂಪನಿ ತಿಳಿಸಿದೆ. ಅಲೆಕ್ಸಾ ಮತ್ತು ಫಿಂಗರ್‌ಪ್ರಿಂಟ್‌ ರೀಡರ್‌ ಸೌಲಭ್ಯಗಳನ್ನೂ ಇದು ಒಳಗೊಂಡಿದೆ.

6 ಸಾವಿರಕ್ಕೂ ಅಧಿಕ ಪ್ಲಾಸ್ಟಿಕ್‌ ಬಾಟಲಿಗಳು ಹಾಗೂ ಇನ್ನಿತರ ಮರುಬಳಕೆ ಮಾಡಬಹುದಾದ ಉತ್ಪನ್ನಗಳನ್ನು ಬಳಸಿ ಈ ಲ್ಯಾಪ್‌ಟಾಪ್‌ ರೂಪಿಸಲಾಗಿದೆ ಎಂದು ಕಂಪನಿಯು ತಿಳಿಸಿದೆ.

ಪಿಸಿಗಳು ಭಾರತದ ಡಿಜಿಟಲ್ ರೂಪಾಂತರದ ಪ್ರಮುಖ ಭಾಗವಾಗಿದೆ. ಗ್ರಾಹಕರು ಹೈಬ್ರಿಡ್ ಕೆಲಸ ಮತ್ತು ಕಲಿಕೆಗಾಗಿ ಶಕ್ತಿಯುತವಾದ ಆದರೆ, ಅತ್ಯಂತ ಹಗುರವಾದ ಸಾಧನವನ್ನು ಬಯಸುತ್ತಾರೆ. ಹೊಸ ಎಚ್‌ಪಿ ಪೆವಿಲಿಯನ್ ಏರೊ 13 ಅತ್ಯುತ್ತಮ ಗುಣಮಟ್ಟದ ವಿನ್ಯಾಸ ಮತ್ತು ಕಾರ್ಯಕ್ಷಮತೆಯನ್ನು ಹೊಂದಿದೆ ಎಂದು ಎಚ್‌ಪಿ ಇಂಡಿಯಾ ಮಾರ್ಕೆಟ್‌ನ ಹಿರಿಯ ನಿರ್ದೇಶಕ ವಿಕ್ರಂ ಬೇಡಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT