ಬುಧವಾರ, ನವೆಂಬರ್ 20, 2019
21 °C
ಮಾರುಕಟ್ಟೆಗೆ ಲಗ್ಗೆ

ಶಿಯೋಮಿ ಸ್ಮಾರ್ಟ್‌ ಉತ್ಪನ್ನ | ₹54,999ಕ್ಕೆ 65 ಇಂಚಿನ ಮಿ ಟಿವಿ 4ಎಕ್ಸ್‌

Published:
Updated:
Prajavani

ಬೆಂಗಳೂರು: ಶಿಯೋಮಿ ಕಂಪನಿಯು ‘ಸ್ಮಾರ್ಟರ್‌ ಲಿವಿಂಗ್–2020’ ಪರಿಕಲ್ಪನೆಯಡಿ ಹಲವು ಸ್ಮಾರ್ಟ್‌ ಸಾಧನಗಳನ್ನು ಮಂಗಳವಾರ ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಪ್ರತಿಯೊಬ್ಬರಿಗೂ 4ಕೆ ಟಿವಿ ಲಭ್ಯವಾಗುವಂತೆ ಮಾಡುವ ಉದ್ದೇಶದಿಂದ ಮಿ4ಕೆ ಸರಣಿ ಘೋಷಿಸಲಾಗಿದೆ. 43,50 ಮತ್ತು 65 ಇಂಚಿನ ಸ್ಮಾರ್ಟ್‌ ಟಿವಿಗಳನ್ನು ಬಿಡುಗಡೆ ಮಾಡಲಾಗಿದೆ. ಈ ಹೊಸ ಟಿವಿಗಳು ಆಂಡ್ರಾಯ್ಡ್‌ 9.0 ಆಧಾರಿತ ಪ್ಯಾಚ್‌ವಾಲ್‌ನಿಂದ ಕಾರ್ಯನಿರ್ವಹಿಸುತ್ತವೆ. ಮಿ ಗ್ರಾಹಕರ ಬೇಡಿಕೆಯನ್ನು ಈ ಟಿವಿಗಳಲ್ಲಿ ಈಡೇರಿಸಲಾಗಿದೆ. ನೆಟ್‌ಫ್ಲಿಕ್‌ ಮತ್ತು ಅಮೆರಜಾನ್‌ನ ಪ್ರೈಮ್‌ ವಿಡಿಯೊ ಕಂಟೆಂಟ್‌ಗಳನ್ನೂ ಆನಂದಿಸಬಹುದು ಎಂದು ಕಂಪನಿ ತಿಳಿಸಿದೆ.

ಡೇಟಾ ಸೇವರ್: ಗೂಗಲ್‌ನ ಡೇಟಾ ಸೇವರ್‌ ಮೋಡ್‌ ಅಳವಡಿಸಲಾಗಿದೆ. ಇದರಿಂದ ಮೂರು ಪಟ್ಟು ಹೆಚ್ಚಿನ ವೀಕ್ಷಣೆ ಸಾಧ್ಯವಾಗಲಿದೆ ಎಂದೂ ಹೇಳಿದೆ.

ಇನ್ನು, ಮಿ ಸ್ಮಾರ್ಟ್ ವಾಟರ್‌ ‌ಪ್ಯೂರಿಫೈಯರ್‌, ಮಿ ಸ್ಮಾರ್ಟ್‌ ಬ್ಯಾಂಡ್‌ 4 ಹಾಗೂ ಮೋಷನ್‌ ಆ್ಯಕ್ಟಿವೇಟೆಡ್‌ ನೈಟ್‌ ಲೈಟ್‌ 2 ಸಹ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಗಿದೆ.

‘ಶಿಯೋಮಿ ಸ್ಮಾರ್ಟ್‌ಫೋನ್‌ ಕಂಪನಿಯಾಗಿ ಮಾತ್ರವೇ ಉಳಿದಿಲ್ಲ. ನಿತ್ಯ ಜೀವನದ ಅಗತ್ಯಕ್ಕೆ ಬೇಕಾದಂತಹ ಸ್ಮಾರ್ಟ್‌ ಸಾಧನಗಳನ್ನು ಪರಿಚಯಿಸಲಾಗುತ್ತಿದೆ. ಭಾರತದಲ್ಲಿ ಸ್ಮಾರ್ಟ್‌ಫೋನ್‌ ಮತ್ತು ಸ್ಮಾರ್ಟ್‌ ಟಿವಿ ವಿಭಾಗದಲ್ಲಿ ಶಿಯೋಮಿ ಬ್ರ್ಯಾಂಡ್‌ ಮೊದಲ ಸ್ಥಾನ ಪಡೆದುಕೊಂಡಿದೆ. 5 ವರ್ಷದಲ್ಲಿ 10 ಕೋಟಿ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡಲಾಗಿದೆ’ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೆಶಕ ಮನು ಕುಮಾರ್‌ ಜೈನ್‌ ಅವರು ಮಾಹಿತಿ ನೀಡಿದರು.

ಸ್ಮಾರ್ಟ್‌ ಸಾಧನಗಳ ಬೆಲೆ

* ಮಿಟಿವಿ 4ಎಕ್ಸ್‌ 65 ಇಂಚು; ₹54,999

* ಮಿಟಿವಿ 4ಎಕ್ಸ್‌ 50 ಇಂಚು; ₹29,999

* ಮಿಟಿವಿ 4ಎಕ್ಸ್‌ 43 ಇಂಚು; ₹ 24,999

* ಮಿಟಿವಿ 4ಎ 40 ಇಂಚು; ₹17,999

* ಮಿ ಸ್ಮಾರ್ಟ್‌ ವಾಟರ್‌ ಪ್ಯೂರಿಫೈಯರ್; ₹11,999

* ಮಿ ಸ್ಮಾರ್ಟ್‌ ಬ್ಯಾಂಡ್‌ 4; ₹ 2,299

 

ಪ್ರತಿಕ್ರಿಯಿಸಿ (+)