ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಹ್ಲಾದಕರ ಸಂಗೀತ ಆಲಿಸಲು ‘ನೋಕಿಯಾ ಪವರ್ ಈಯರ್‌ ಬಡ್ಸ್ ಲೈಟ್ ’

Last Updated 27 ಫೆಬ್ರುವರಿ 2021, 13:20 IST
ಅಕ್ಷರ ಗಾತ್ರ

ಬೆಂಗಳೂರು: ಜನಪ್ರಿಯ ಮೊಬೈಲ್ ತಯಾರಕ ನೋಕಿಯಾ ಕಂಪನಿ ‘ನೋಕಿಯಾ ಪವರ್ ಈಯರ್‌ ಬಡ್ಸ್ ಲೈಟ್ ’ ಅನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಫೆ. 27ರಿಂದ ಈಯರ್‌ ಬಡ್ಸ್‌ ಲೈಟ್‌ಮಾರುಟ್ಟೆಯಲ್ಲಿಖರೀದಿಗೆ ಲಭ್ಯವಿವೆ.ಇಕಾಮರ್ಸ್‌ ತಾಣ ಅಮೆಜಾನ್.ಇನ್ ಹಾಗೂ ನೋಕಿಯಾ.ಕಾಮ್‌ನಲ್ಲಿ ಇವು ದೊರೆಯಲಿವೆ. ಆರಂಭಿಕ ಬೆಲೆ ₹ 3599 ಆಗಿದ್ದು, ಒಂದು ವರ್ಷದ ವಾರೆಂಟಿ ಇರಲಿದೆ.

ಈ ಬಡ್‌ಗಳು ಪ್ರೀಮಿಯಮ್ ನೊರ್ಯಾಡಿಕ್ ವಿನ್ಯಾಸವನ್ನು ಹೊಂದಿದ್ದು ಬಿಳಿ ಮತ್ತು ಕಪ್ಪು ಬಣ್ಣಗಳಲ್ಲಿ ಲಭ್ಯವಿರುತ್ತದೆ. ಹೊರಾಂಗಣದಲ್ಲೂ ಪರಿಪೂರ್ಣ ಆರಾಮದಾಯಕ ಮತ್ತು ಸ್ಪಷ್ಟವಾಗಿ ಆಲಿಸುವಂತಹ ತಂತ್ರಜ್ಞಾನ ಈ ಬಡ್ಸ್‌ಗಳಲ್ಲಿ ಇದೆ.

35 ಗಂಟೆಗಳ ಪ್ಲೇ ಟೈಮ್ ಮತ್ತು ಐಪಿಎಕ್ಸ್7 ನೀರು ನಿರೋಧಕ ರೇಟಿಂಗ್ ಇರುವುದರಿಂದ ಹೊರಾಂಗಣದಲ್ಲಿ ಮಳೆ ಹಾಗೂ ಬೆವರಿನ ವಾತಾವರಣದಲ್ಲೂ ಈ ಬಡ್‌ಗಳು ಸುರಕ್ಷಿತವಾಗಿರಲಿವೆ. ಸರಳ ಟ್ಯಾಪ್‍ಗಳಿಂದ ನಿಯಂತ್ರಿಸಬಹುದಾದ ಆಕರ್ಷಕ ವಿನ್ಯಾಸವನ್ನು ಹೊಂದಿವೆ.

ಗರಿಷ್ಠ 2 ದಿನಗಳವರೆಗೂ ಬ್ಯಾಟರಿ ಬಾಳಿಕೆ ಬರಲಿದೆ. 5.4 ಬ್ಲೂಟೂತ್‌ ವೈಶಿಷ್ಟ್ರ ಸ್ಪಷ್ಟವಾಗಿ ಧ್ವನಿ ಆಲಿಸಲು ಪೂರಕವಾಗಿದೆ ಎಂದು ತಯಾರಿಕೆ ಮೆನುವಿನಲ್ಲಿ ಬರೆಯಲಾಗಿದೆ. ಪ್ರಕೃತಿಯ ಮಧ್ಯೆ ಸೈಕ್ಲಿಂಗ್ ಹಾಗೂ ಜಾಗಿಂಗ್ ಮಾಡುವ ಸಮಯದಲ್ಲೂಸಂಗೀತ ಆಲಿಸಬಹುದು.

ಭಾರತದಲ್ಲಿ ಹೊಸ ನೋಕಿಯಾ ಪವರ್ ಈಯರ್‌ ಬಡ್‌ ಲೈಟ್ ಬಿಡುಗಡೆ ಮಾಡಲು ನಮಗೆ ಸಂತೋಷವಾಗುತ್ತಿದೆ ಎಂದು ಎಚ್‍ಎಂಡಿ ಗ್ಲೋಬಲ್‍ನ ಉಪಾಧ್ಯಕ್ಷ ಸುಮೀತ್ ಸಿಂಗ್ ಕೊಚಾರ್ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗೆ:www.nokia.com/phones ಅಥವಾwww.amazon.in ನೋಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT