ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಒನ್‌ಪ್ಲಸ್‌ ಬಡ್ಸ್‌ ಜೆಡ್‌2

ಫಾಲೋ ಮಾಡಿ
Comments

ಒನ್‌ಪ್ಲಸ್‌ ಬಡ್ಸ್‌ ಜೆಡ್‌2 ಅತ್ಯಂತ ಹಗುರಾಗಿದ್ದು, 4.5 ಗ್ರಾಂ ಇದೆ. ಕಿವಿಯಲ್ಲಿ ಸುಲಭವಾಗಿ ಇಟ್ಟುಕೊಳ್ಳಬಹುದು. ಇದರ ಟಚ್‌ ಆಯ್ಕೆಗಳು ಬಹಳ ಚೆನ್ನಾಗಿ ಕೆಲಸ ಮಾಡುತ್ತವೆ. ಬೆಲೆ ₹ 4,999.

ಹೊರಗಿನ ಶಬ್ಧವು ಕೇಳಿಸದಂತೆ ತಡೆಯುವುದು (ಆ್ಯಕ್ಟಿವ್‌ ನಾಯ್ಸ್‌ ಕ್ಯಾನ್ಸಲೇಷನ್‌–ಎಎನ್‌ಸಿ), ಬ್ಯಾಟರಿ ಬಾಳಿಕೆ ಹಾಗೂ ಸಾಧನದ ಗುಣಮಟ್ಟ ಉತ್ತಮವಾಗಿದೆ.

ಆಂಡ್ರಾಯ್ಡ್‌ ಮತ್ತು ಐಒಎಸ್‌ಗೆ ಬೆಂಬಲಿಸುತ್ತದೆ. ಹೇ ಮೆಲೊಡಿ ಆ್ಯಪ್‌ ಮೂಲಕ ಇದರ ಬ್ಯಾಟರಿ ಮಟ್ಟವನ್ನು ಪರಿಶೀಲಿಸಬಹುದು. ಟಚ್‌ ಆಯ್ಕೆಯನ್ನು ನಿಯಂತ್ರಿಸಬಹುದು. ನಾಯ್ಸ್‌ ಕ್ಯಾನ್ಸಲೇಷನ್ ಆಯ್ಕೆಯನ್ನು ಆನ್‌/ಆಫ್‌ ಮಾಡಬಹುದು. ಒನ್‌ಪ್ಲಸ್‌ ಫೋನ್‌ ಅನ್ನೇ ಬಳಸಿದರೆ ಆ್ಯಪ್‌ ನೆರವಿಲ್ಲದೆಯೇ ಬ್ಲುಟೂತ್‌ ಸೆಟ್ಟಿಂಗ್ಸ್‌ನಲ್ಲಿಯೇ ಎಲ್ಲವನ್ನೂ ನಿರ್ವಹಿಸಬಹುದು. ಧ್ವನಿಯು ಬಹಳ ಸ್ಪಷ್ಟವಾಗಿ ಕೇಳಿಸುತ್ತದೆ. ಬ್ಲುಟೂತ್‌ 5.2 ಆವೃತ್ತಿ ಹೊಂದಿದೆ.

‌ಆಕರ್ಷಕ ವಿನ್ಯಾಸ ಹೊಂದಿದೆ. ಪ್ಲಾಸ್ಟಿಕ್‌ನಿಂದ ಬಡ್ಸ್‌ ತಯಾರಿಸಲಾಗಿದೆ. ಹೀಗಿದ್ದರೂ ಗಟ್ಟಿಮುಟ್ಟಾಗಿವೆ. ಧೂಳು ಮತ್ತು ನೀರಿನಿಂದ ರಕ್ಷಿಸಲು ಐಪಿ55 3 ರೇಟಿಂಗ್ಸ್‌ ಹೊಂದಿದೆ. ಇದರ ಚಾರ್ಜಿಂಗ್‌ ಕೇಸ್‌ ಐಪಿಎಕ್ಸ್‌4 ನೀರು ನಿರೋಧಕವಾಗಿದೆ. ಕಿವಿಯ ಗಾತ್ರಕ್ಕೆ ಅನುಗುಣವಾಗಿ ಮೂರು ರೀತಿಯ ಇಯರ್‌ ಟಿಪ್‌ಗಳನ್ನು ನೀಡಲಾಗಿದೆ. ಯುಎಸ್‌ಬಿ ಟೈಪ್–ಸಿ ಚಾರ್ಜಿಂಗ್‌ ಕೇಬಲ್‌ ಹೊಂದಿದೆ.

ಇಯರ್‌ ಕೇಸ್‌ನಿಂದ ಬಡ್ಸ್‌ಗಳನ್ನು ಹೊರತೆಗೆದಾಗ ಅವು ಆನ್ ಆಗಿ ಸಂಪರ್ಕಕ್ಕೆ ಬರುತ್ತವೆ. ಫೋನ್‌ನ ಬ್ಲೂಟೂತ್‌ ಆನ್‌ ಮಾಡಿ ಬಡ್ಸ್ ಜೆಡ್‌2 ಎಂದು ಹುಡುಕಿ ಪರಸ್ಪರ ಸಂಪರ್ಕಿಸಬಹುದು. ಏಕಕಾಲಕ್ಕೆ ಎರಡು ಸಾಧನಗಳೊಂದಿಗೆ ಸಂಪರ್ಕಿಸಬಹುದಾಗಿದೆ.
ಚಾರ್ಜಿಂಗ್‌ ಕೇಸ್‌ 42 ಗ್ರಾಂ ತೂಕ ಇದೆ. ಬಡ್ಸ್‌ ಒಂದರ ತೂಕ 4.6 ಗ್ರಾಂ. ಚಾರ್ಜಿಂಗ್‌ ಕೇಸ್‌ ಐಪಿಎಕ್ಸ್‌4 3 ರೇಟಿಂಗಸ್‌ ಹೊಂದಿದ್ದರೆ, ಬಡ್ಸ್‌ ಐಪಿ55 3 ರೇಟಿಂಗ್ಸ್‌ ಹೊಂದಿವೆ.

ಚಾರ್ಜಿಂಗ್‌ ಕೇಸ್‌ 520ಎಂಎಎಚ್‌ ಬ್ಯಾಟರಿ ಹೊಂದಿದ್ದರೆ, ಇಯರ್‌ ಬಡ್‌ ತಲಾ 40ಎಂಎಎಚ್‌ ಬ್ಯಾಟರಿ ಹೊಂದಿವೆ. 10 ನಿಮಿಷ ಚಾರ್ಜ್‌ ಮಾಡಿದರೆ 5 ಗಂಟೆ ಬಳಸಬಹುದು. ಒಮ್ಮೆ ಚಾರ್ಜಿಂಗ್ ಕೇಸ್‌ ಪೂರ್ತಿ ಚಾರ್ಜ್‌ ಆದರೆ, ಅದರಿಂದ ಬಡ್ಸ್‌ ಅನ್ನು ಮೂರು ಬಾರಿ ಚಾರ್ಜ್‌ ಮಾಡಬಹುದು.

ಎಎನ್‌ಸಿ ಆನ್‌ ಆಗಿದ್ದರೆ 5 ಗಂಟೆಗಳವರೆಗೆ, ಎಎನ್‌ಸಿ ಆಫ್‌ ಆಗಿದ್ದರೆ 7ಗಂಟೆಗಳವರೆಗೆ ಬಳಸಬಹುದು.
ಎಎನ್‌ಸಿ ಆನ್‌ ಆಗಿದ್ದಾಗ 24 ಗಂಟೆ ಮತ್ತು ಆಫ್‌ ಆಗಿದ್ದಾಗ 38ಗಂಟೆ ಬಾಳಿಕೆ ಬರುತ್ತದೆ. ಕೇವಲ ಫೋನ್‌ ಕಾಲ್‌ಗೆ ಬಳಸಿದರೆ 3.5ಗಂಟೆಗಳವರೆಗೆ ಚಾರ್ಜ್‌ ಉಳಿಯುತ್ತದೆ

ಬಡ್ಸ್‌ ಅನ್ನು ಕಿವಿಯಲ್ಲಿ ಇಟ್ಟುಕೊಂಡಿದ್ದಾಗ ಹೊರಗಿನ ಶಬ್ಧ ಕೇಳದಂತೆ ತಡೆಯುವ (ಎಎನ್‌ಸಿ) ವ್ಯವಸ್ಥೆಯು ಉತ್ತಮವಾಗಿದೆ. ಮನೆಯಿಂದ ಹೊರಗಡೆ ಓಡಾಡುವಾಗಲೂ ಫೋನಿನಲ್ಲಿ ನಮ್ಮೊಂದಿಗೆ ಮಾತನಾಡುತ್ತಿರುವವರಿಗೆ ನಮ್ಮ ಧ್ವನಿ ಸ್ವಷ್ಟವಾಗಿ ಕೇಳುವುದಷ್ಟೇ ಅಲ್ಲದೆ, ಅವರ ಧ್ವನಿಯೂ ನಮಗೆ ಸ್ಪಷ್ಟವಾಗಿ ಕೇಳುತ್ತದೆ. ಹಾಡು ಕೇಳುವಾಗ, ವಿಡಿಯೊ ನೋಡುವಾಗಲೂ ಹೊರಗಿನ ಶಬ್ಧವು ನಮಗೆ ಕೇಳಿಸದಷ್ಟು ಸ್ಪಷ್ಟವಾಗಿತ್ತು.

ಹೇ-ಮೆಲೋಡಿ (HeyMelody) ಆ್ಯಪ್‌ ಮೂಲಕ ಆಂಡ್ರಾಯ್ಡ್‌ ಮತ್ತು ಐಒಎಸ್‌ ಸ್ಮಾರ್ಟ್‌ಫೋನ್‌ಗಳಲ್ಲಿ ಸೆಟ್ಟಿಂಗ್ಸ್‌ ಮಾಡಬಹುದು. ಒನ್‌ಪ್ಲಸ್‌ ಬಡ್ಸ್‌ ಪ್ರೊಗೆ ಹೋಲಿಸಿದರೆ ಇದರ ಬಳಕೆ ಸುಲಭವಾಗಿದೆ. ಬಡ್ಸ್‌ ಅನ್ನು ಒಂದು ಬಾರಿ ಟ್ಯಾಪ್‌ ಮಾಡಿದರೆ ಮ್ಯೂಸಿಕ್‌ ಪ್ಲೇ/ಪಾಸ್‌ ಆಗುತ್ತದೆ. ಎರಡು ಬಾರಿ ಟ್ಯಾಪ್‌ ಮಾಡಿದರೆ ಮುಂದಿನ ಹಾಡಿಗೆ ಹಾಗೆಯೇ ಮೂರು ಬಾರಿ ಟ್ಯಾಪ್‌ ಮಾಡಿದರೆ ಹಿಂದಿನ ಹಾಡಿಗೆ ಹೋಗುತ್ತದೆ.

ಕರೆ ಸ್ವೀಕರಿಸಲು ಅಥವಾ ಕರೆಯನ್ನು ಮುಗಿಸಲು ಒಂದು ಬಾರಿ ಟ್ಯಾಪ್‌ ಮಾಡಬೇಕು. ಎರಡು ಬಾರಿ ಟ್ಯಾಪ್‌ ಮಾಡಿದರೆ ಒಳಬರುವ ಕರೆಯನ್ನು ರಿಜೆಕ್ಟ್‌ ಮಾಡಬಹುದು. ಫೋನ್‌ ನಮ್ಮ ಬಳಿ ಇಲ್ಲದೇ ಇದ್ದರೂ 10ಮೀಟರ್‌ ವ್ಯಾಪ್ತಿಯಲ್ಲಿ ಹಾಡು ಕೇಳಲು, ಮಾತನಾಡಲು ಇದನ್ನು ಬಳಸಬಹುದು. ಒ‌ನ್ ಪ್ಲಸ್ ಸಾಧನಗಳನ್ನು ಇಷ್ಟಪಡುವವರಿಗೆ ಗುಣಮಟ್ಟ ಮತ್ತು ಬಾಳಿಕೆ ದೃಷ್ಟಿಯಿಂದ ಉತ್ತಮ ಆಯ್ಕೆ ಇದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT