ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

OnePlus: ಭಾರತದ ಮಾರುಕಟ್ಟೆಗೆ ಕಂಪ್ಯೂಟರ್ ಮಾನಿಟರ್ ಬಿಡುಗಡೆ

ಒನ್‌ಪ್ಲಸ್, ಹೊಸ ಮಾದರಿಯ ಕಂಪ್ಯೂಟರ್ ಮಾನಿಟರ್
Last Updated 13 ಡಿಸೆಂಬರ್ 2022, 9:50 IST
ಅಕ್ಷರ ಗಾತ್ರ

ಬೆಂಗಳೂರು: ದೇಶದ ಗ್ಯಾಜೆಟ್ ಮಾರುಕಟ್ಟೆಗೆ ಒನ್‌ಪ್ಲಸ್ ನೂತನ ಕಂಪ್ಯೂಟರ್ ಮಾನಿಟರ್ ಪರಿಚಯಿಸಿದೆ.

ಒನ್‌ಪ್ಲಸ್ ಎಕ್ಸ್ ಮತ್ತು ಇ ಸರಣಿಯಲ್ಲಿ ನೂತನ ಮಾನಿಟರ್ ಮಾರುಕಟ್ಟೆಗೆ ಲಗ್ಗೆ ಇರಿಸಿದೆ.

ಒನ್‌ಪ್ಲಸ್ X27 ಎನ್ನುವುದು 27 ಇಂಚಿನ ಗೇಮಿಂಗ್ ಮಾನಿಟರ್ ಆಗಿದೆ. ಮತ್ತೊಂದು ಇ ಸರಣಿಯಲ್ಲಿ ಹೊಸದಾಗಿ E24 ಮಾದರಿ ಬಿಡುಗಡೆಯಾಗಿದೆ.

ಒನ್‌ಪ್ಲಸ್ X27 ಮಾನಿಟರ್‌ ದರ ದೇಶದಲ್ಲಿ ₹27,999 ಇದ್ದು, ಡಿ. 15ರಿಂದ ಒನ್‌ಪ್ಲಸ್ ಆನ್‌ಲೈನ್ ಸ್ಟೋರ್ ಮೂಲಕ ಲಭ್ಯವಾಗಲಿದೆ. ಅಲ್ಲದೆ, ಆರಂಭಿಕ ಕೊಡುಗೆಯಾಗಿ ಐಸಿಐಸಿಐ ಬ್ಯಾಂಕ್ ಕಾರ್ಡ್ ಮೂಲಕ ಖರೀದಿಗೆ ₹1,000 ಡಿಸ್ಕೌಂಟ್ ಕೂಡ ಇರಲಿದೆ.

ಒನ್‌ಪ್ಲಸ್ E24 ಮಾನಿಟರ್ ಬೆಲೆ ಮತ್ತು ಲಭ್ಯತೆಯನ್ನು ಕಂಪನಿ ಬಹಿರಂಗಪಡಿಸಿಲ್ಲ.

ಬಳಕೆದಾರರ ವಿವಿಧ ಅವಶ್ಯಕತೆಗಳಿಗೆ ಅನುಗುಣವಾಗಿ ನೂತನ ಮಾನಿಟರ್ ಸಿದ್ಧಪಡಿಸಲಾಗಿದೆ ಎಂದು ಕಂಪನಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT