ಮಂಗಳವಾರ, ಜನವರಿ 28, 2020
20 °C

ನಾಲ್ಕು ಕ್ಯಾಮೆರಾಗಳ ಒಪ್ಪೊ ಸ್ಮಾರ್ಟ್‌ಫೋನ್‌ 'ಎಫ್‌15'; ಬೆಲೆ ₹ 19,990

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

OPPO F15 smartphone

ಸೆಲ್ಫಿ ಎಕ್ಸ್‌ಪರ್ಟ್‌ ಎಂದೇ ಕರೆದುಕೊಳ್ಳುವ ಮೂಲಕ ಭಾರತದ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ವಿಸ್ತರಿಸಿಕೊಂಡ ಚೀನಾ ಮೂಲದ 'ಒಪ್ಪೊ' ಗುರುವಾರ ಎಫ್‌15 ಮಾದರಿಯ ಫೋನ್‌ ಬಿಡುಗಡೆ ಮಾಡಿದೆ. 

ವೇಗ, ಉತ್ತಮ ವಿನ್ಯಾಸ, ಮನರಂಜನೆ ಹಾಗೂ ಹೊಸತನ್ನು ಬಯಸುವ ಯುವ ಪೀಳಿಗೆಯನ್ನು ಸೆಳೆಯುವ ನಿಟ್ಟಿನಲ್ಲಿ ಎಫ್‌ ಸರಣೆಯ ಹೊಸ ಸ್ಮಾರ್ಟ್‌ಫೋನ್‌ ರೂಪಿಸಿರುವುದಾಗಿ ಒಪ್ಪೊ ಹೇಳಿಕೊಂಡಿದೆ. 7.9 ಮಿಮೀ ದಪ್ಪ ಮತ್ತು 172 ಗ್ರಾಂ ತೂಕವಿರುವ 'ಎಫ್‌15'; ಲೈಟ್ನಿಂಗ್‌ ಬ್ಲ್ಯಾಕ್‌ ಮತ್ತು ಯುನಿಕಾರ್ನ್‌ ವೈಟ್‌ ಎರಡು ಬಣ್ಣಗಳಲ್ಲಿ ಲಭ್ಯವಿದೆ. 

0.32 ಸೆಕೆಂಡ್‌ಗಳಲ್ಲಿ ಫಿಂಗರ್‌ಪ್ರಿಂಟ್‌ ಅನ್‌ಲಾಕ್‌ ಆಗುತ್ತದೆ. ವಿಒಒಸಿ ಫ್ಲಾಷ್‌ ಚಾರ್ಜ್‌ 3.0 ವ್ಯವಸ್ಥೆಯೊಂದಿಗೆ 4000 ಎಂಎಎಚ್‌ ಬ್ಯಾಟರಿ ಹೊಂದಿದೆ. 

ಅಮೊಲೆಡ್‌ 6.4 ಫುಲ್‌ ಎಚ್‌ಡಿ ಡಿಸ್‌ಪ್ಲೇ, 8 ಜಿಬಿ ರ್‍ಯಾಮ್‌ ಮತ್ತು 128 ಜಿಬಿ ಸಂಗ್ರಹಣ ಸಾಮರ್ಥ್ಯ ಹಾಗೂ ಮಿಡಿಯಾಟೆಕ್‌ ಪಿ70 ಪ್ರೊಸೆಸರ್‌ ಒಳಗೊಂಡಿದೆ. ಎಕ್ಸ್‌ಟರ್ನಲ್‌ ಕಾರ್ಡ್‌ ಮೂಲಕ 250 ಜಿಬಿ ವರೆಗೂ ಸಂಗ್ರಹ ಸಾಮರ್ಥ್ಯ ವಿಸ್ತರಿಸಿಕೊಳ್ಳಲು ಅವಕಾಶವಿದೆ. ಅಡಚಣೆ ಇಲ್ಲಿದ ಗೇಮಿಂಗ್‌ಗೆ ಎಫ್‌ 15 ಸಹಕಾರಿಯಾಗಲಿದೆ. 

ಬೆಲೆ ₹ 19,990 ನಿಗದಿಯಾಗಿದ್ದು, ಜನವರಿ 24ರಿಂದ ಆನ್‌ಲೈನ್‌ ಹಾಗೂ ಮಳಿಗೆಗಳಲ್ಲಿ ಮೊಬೈಲ್ ಖರೀದಿಗೆ ಲಭ್ಯವಾಗಲಿದೆ. 

ಕ್ಯಾಮೆರಾ: ಸೆಲ್ಫಿಗಾಗಿ 16 ಮೆಗಾಪಿಕ್ಸೆಲ್‌ ಕ್ಯಾಮೆರಾ ನೀಡಿಲಾಗಿದೆ. ಹಿಂಬದಿಯಲ್ಲಿ 48 ಮೆಗಾಪಿಕ್ಸೆಲ್‌ ಅಲ್ಟ್ರಾ ವೈಡ್‌–ಆ್ಯಂಗಲ್‌ ಕ್ವಾಡ್‌ಕ್ಯಾಮ್‌, 8 ಎಂಪಿ (ಎಫ್‌ 2.25) ಅಲ್ಟ್ರಾ ವೈಡ್‌–ಆ್ಯಂಗಲ್ ಮ್ಯಾಕ್ರೊ ಲೆನ್ಸ್‌, 2 ಎಂಪಿ (ಎಫ್‌ 2.4) ಮೊನೊ ಲೆನ್ಸ್‌, 119 ಡಿಗ್ರಿ ಅಲ್ಟ್ರಾ ವೈಡ್‌ ಆ್ಯಂಗಲ್‌ 2 ಎಂಪಿ (ಎಫ್‌ 2.4) ಪೋಟ್ರೇಟ್‌ ಲೆನ್ಸ್‌ ಒಳಗೊಂಡ ನಾಲ್ಕು ಕ್ಯಾಮೆರಾಗಳನ್ನು ನೀಡಲಾಗಿದೆ. ಮ್ಯಾಕ್ರೊ ಲೆನ್ಸ್‌ ಇರುವುದರಿಂದ 3 ಸೆಂ.ಮೀ. ಸಮೀಪದಲ್ಲಿಯೂ ಆಟೊ ಫೋಕಸ್‌ ಮೂಲಕ ಉತ್ತಮ ಚಿತ್ರ ಸೆರೆಹಿಡಿಯಬಹುದಾಗಿದೆ. 

ಎಲೆಕ್ಟ್ರಾನಿಕ್‌ ಇಮೇಜ್‌ ಸ್ಟೆಬಿಲೈಸೇಷನ್‌ (EIS) ಹಾಗೂ ಅಲುಗಾಟದಲ್ಲೂ ಉತ್ತಮ ವಿಡಿಯೊ ರೆಕಾರ್ಡ್‌ ಮಾಡಬಹುದಾದ ಸೌಲಭ್ಯ ಒಳಗೊಂಡಿದೆ. ರಾತ್ರಿ ಹಾಗೂ ಮಂದ ಬೆಳಕಿನ ಸ್ಥಳದಲ್ಲಿ ಚಿತ್ರೀಕರಣಕ್ಕೆ ನೈಟ್‌ ಮೋಡ್‌ ಉತ್ತಮ ಪಡಿಸಲಾಗಿದೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು