ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಕೊ ಎಕ್ಸ್ ‌2 ; ಬೆಲೆಗೆ ತಕ್ಕ ಮೌಲ್ಯ

Last Updated 3 ಜೂನ್ 2020, 3:22 IST
ಅಕ್ಷರ ಗಾತ್ರ

ಶಿಯೋಮಿ ಕಂಪನಿಯಿಂದ ಬೇರ್ಪಟ್ಟು ಸ್ವತಂತ್ರ ಕಂಪನಿಯಾಗಿರುವ ‘ಪೊಕೊ’ ಬಿಡುಗಡೆ ಮಾಡಿರುವ ಮೊದಲ ಸ್ಮಾರ್ಟ್‌ಪೋನ್‌ 'ಪೊಕೊ ಎಕ್ಸ್‌ 2'. ವಿನ್ಯಾಸ, ಗುಣಲಕ್ಷಣ, ಬಳಕೆಯ ಅನುಭವದ ದೃಷ್ಟಿಯಿಂದ ಪೊಕೊ ಭಿನ್ನವಾಗಿದೆ. ಇದುವರೆಗೂ ಮಾರುಕಟ್ಟೆಯಲ್ಲಿ ಇರುವ ಫೋನ್‌ಗಳನ್ನು ಗಮನದಲ್ಲಿ ಇಟ್ಟುಕೊಂಡು ನೋಡುವುದಾದರೆ, ಇದರಲ್ಲಿಯೂ ಪ್ಲಸ್‌ ಮತ್ತು ಮೈನಸ್‌ ಅಂಶಗಳಿವೆ.

ಬ್ಯಾಕ್‌ ಕವರ್‌ ಇಲ್ಲದೇ ಇದ್ದರೂ ಕೈಯಿಂದ ಜಾರದೇ ಇರುವಂತೆ ವಿನ್ಯಾಸಗೊಳಿಸಲಾಗಿದೆ. ತೂಕವೂ ಹೆಚ್ಚಿಗೆ ಇಲ್ಲ. ಆದರೆ ಮೆಟ್ರಿಕ್ಸ್‌ ಪರ್ಪಲ್‌, ಫೋನಿಕ್ಸ್‌ ರೆಡ್ ಮತ್ತು ಅಟ್ಲಾಂಟಿಸ್‌ ಬ್ಲೂ ಬಣ್ಣ ಕಣ್ಣಿಗೆ ತುಸು ಹಾರ್ಷ್‌ ಎನಿಸುತ್ತದೆ. ಈ ದೃಷ್ಟಿಯಿಂದ ಬ್ಯಾಕ್‌ ಕವರ್ ಬೇಕು ಅಂತ ಅನಿಸುತ್ತದೆ.

ವಿನ್ಯಾಸ: 6.67 ಇಂಚು ಫುಲ್‌ ಎಚ್‌ಡಿಪ್ಲಸ್‌ ಡಿಸ್‌ಪ್ಲೇ 120 ಹರ್ಟ್ಸ್‌ ಎಕ್ಸ್‌ಟ್ರೀಮ್‌ ರಿಫ್ರೆಷ್ ರೇಟ್‌, ಫೋನ್‌ನ ಕಾರ್ಯಾಚರಣೆ ಸರಾಗಗೊಳಿಸುವ ಜತೆಗೆ ಉತ್ತಮ ಗೇಮಿಂಗ್‌ ಅನುಭವವನ್ನೂ ಕಟ್ಟಿಕೊಡುತ್ತದೆ.ಪರದೆಯ ಮೇಲ್ಭಾಗದ ಬಲತುದಿಯಲ್ಲಿ ಡ್ಯುಯಲ್‌ ಪಂಚ್‌ ಹೋಲ್‌ನ 20+2ಎಂಪಿ ಸೆಲ್ಫಿ ಕ್ಯಾಮರಾ ಒಂದು ರೀತಿ ಪರದೆಗೆ ಎರಡು ಕಪ್ಪುಚುಕ್ಕೆಗಳಂತೆ ಕಾಣಿಸುತ್ತವೆ. ಈ ವಿನ್ಯಾಸ ಅಷ್ಟು ಹಿಡಿಸಲಿಲ್ಲ. 6.67 ಇಂಚಿನ ಪರದೆ ಇದ್ದರೂ ಇದೇ ಪರದೆಯ ಗಾತ್ರದ ಬೇರೆ ಫೋನ್‌ಗಳಂತೆ ಒಂದು ಕೈಯಲ್ಲಿ ಟೈಪಿಸಲು ಕಷ್ಟ ಆಗುವುದಿಲ್ಲ.

ಹಿಂಬದಿ ಮತ್ತು ಮುಂಬದಿಯ ಕ್ಯಾಮೆರಾ ಗುಣಮಟ್ಟ ಉತ್ತಮವಾಗಿದೆ. ನಡೆದುಕೊಂಡು ಹೋಗುವಾಗ ಅಥವಾ ವಾಹನದಲ್ಲಿ ಹೋಗುವಾಗ ಚಾಲನೆಯಲ್ಲಿದ್ದಾಗ ತೆಗೆದ ತ್ರಗಳು ಬಹಳ ಸ್ಪಷ್ಟವಾಗಿ ಮೂಡಿಬಂದಿವೆ. ಆದರೆ, 64ಎಂಪಿ ಆಯ್ಕೆಯಲ್ಲಿ ಕ್ಯಾಪ್ಚರ್‌ ಆಗಲು ಕೆಲ ಸೆಕೆಂಡ್‌ ಬೇಕಾಗುವುದರಿಂದ ಚಿತ್ರ ಸ್ಪಷ್ಟವಾಗಿ ಸೆರೆಯಾಗುವುದಿಲ್ಲ.

ಫಿಂಗರ್‌ಪ್ರಿಂಟ್‌ ಸ್ಕ್ಯಾನರ್: ಪವರ್‌ ಬಟನ್‌ನಲ್ಲಿಯೇ ಸೈಡ್‌ ಮೌಂಟೆಡ್‌ ಫಿಂಗರ್‌ಪ್ರಿಂಟ್‌ ಸ್ಕ್ಯಾನರ್‌ ಆಯ್ಕೆ ಇರಿಸಲಾಗಿದೆ. ತಕ್ಷಣಕ್ಕೆ ಅನ್‌ಲಾಕ್ ಆಗುತ್ತದೆಯಾದರೂ, ಈ ಆಯ್ಕೆ ಕಿರಿಕಿರಿ ಎನಿಸುತ್ತದೆ. ಬಲಗೈಯಲ್ಲಿ ಫೋನ್‌ ಹಿಡಿದುಕೊಂಡರೆ ನಮ್ಮ ಹೆಬ್ಬೆರಳು ಫೋನ್‌ನ ಪವರ್‌ ಬಟನ್‌ ಇರುವ ಜಾಗಕ್ಕೆ ಬರುತ್ತದೆ. ಫಿಂಗರ್‌ಪ್ರಿಂಟ್‌ ಅನ್‌ಲಾಕ್‌ ಅದರಲ್ಲಿಯೇ ಇರುವುದರಿಂದ ಫೋನ್‌ ಅನ್ನು ಸುಮ್ಮನೆ ಕೈಯಲ್ಲಿ ಹಿಡಿದುಕೊಂಡಿದ್ದಾಗಲೂ ಫೋನ್ ಅನ್‌ಲಾಕ್‌ ಅಗಿಬಿಡುತ್ತದೆ. ಬೇರೆ ಬೆರಳು ತಾಕಿದರೂ ವೈಬ್ರೇಟ್ ಆಗುತ್ತದೆ.

4,500 ಎಂಎಎಚ್‌ ಬ್ಯಾಟರಿ ಎರಡು ದಿನ ಬಾಳಿಕೆ ಬಂದಿದೆ. ಹೊಸ ಫೋನ್‌ಗಳನ್ನು ಬಳಸಿ ನೋಡುವ ರೂಢಿ ಇದ್ದವರು ಇದನ್ನು ಖರೀದಿಸಿದರೆ, ನಿರಾಸೆಯಂತೂ ಆಗುವುದಿಲ್ಲ. ಬೆಲೆಗೆ ತಕ್ಕ ಮೌಲ್ಯ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT