ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Realme 10 Pro+ | 5G ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ ರಿಯಲ್‌ಮಿ

ರಿಯಲ್‌ಮಿ ನೂತನ ಸ್ಮಾರ್ಟ್‌ಫೋನ್ ದೇಶದಲ್ಲಿ ಬಿಡುಗಡೆ
Last Updated 8 ಡಿಸೆಂಬರ್ 2022, 15:47 IST
ಅಕ್ಷರ ಗಾತ್ರ

ಬೆಂಗಳೂರು: ಚೀನಾ ಮೂಲದ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ರಿಯಲ್‌ಮಿ, ದೇಶದಲ್ಲಿ ಹೊಸ 5G ಸರಣಿ ಫೋನ್ ಬಿಡುಗಡೆ ಮಾಡಿದೆ.

ರಿಯಲ್‌ಮಿ 10 ಪ್ರೊ ಮತ್ತು 10 ಪ್ರೊ+ 5G ಭಾರತದಲ್ಲಿ ಬಿಡುಗಡೆಯಾಗಿದ್ದು, ರಿಲಯನ್ಸ್ ಜಿಯೊ 5G ಮೂಲಕ ಕಾರ್ಯನಿರ್ವಹಿಸುತ್ತಿದೆ ಎಂದು ಕಂಪನಿ ಹೇಳಿದೆ.

ರಿಯಲ್‌ಮಿ 10 ಪ್ರೊ
6.72 ಇಂಚಿನ ಫುಲ್‌ ಎಚ್‌ಡಿ+ ಎಲ್‌ಸಿಡಿ ಡಿಸ್‌ಪ್ಲೇ, ಕ್ವಾಲ್ಕಂ ಸ್ನ್ಯಾಪ್‌ಡ್ರ್ಯಾಗನ್ 695 ಒಕ್ಟಾ ಕೋರ್ ಪ್ರೊಸೆಸರ್ ಹೊಂದಿದೆ.

6GB / 8GB LPDDR4X ಎಂಬ ಎರಡು RAM ಆಯ್ಕೆ, 128GB ಸ್ಟೋರೇಜ್, ಆ್ಯಂಡ್ರಾಯ್ಡ್ 13 ಆಧಾರಿತ ರಿಯಲ್‌ಮಿ UI 4.0 ಓಎಸ್, ಹಿಂಭಾಗದಲ್ಲಿ 108 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಜತೆಗೆ 2 ಮೆಗಾಪಿಕ್ಸೆಲ್ ಮ್ಯಾಕ್ರೊ ಸೆನ್ಸರ್, ಹಾಗೂ 16 ಮೆಗಾಪಿಕ್ಸೆಲ್ ಸೆಲ್ಫಿ ಇದರಲ್ಲಿದೆ. ಜತೆಗೆ 5,000mAh ಬ್ಯಾಟರಿ ಮತ್ತು 33W ಫಾಸ್ಟ್ ಚಾರ್ಜಿಂಗ್ ಬೆಂಬಲ ಇದರಲ್ಲಿದೆ ಎಂದು ರಿಯಲ್‌ಮಿ ತಿಳಿಸಿದೆ.

ಹೈಪರ್‌ಸ್ಪೇಸ್ ಗೋಲ್ಡ್, ಡಾರ್ಕ್ ಮ್ಯಾಟರ್ ಮತ್ತು ನೆಬ್ಯುಲಾ ಬ್ಲೂ ಎಂಬ ಮೂರು ಬಣ್ಣಗಳಿದ್ದು, 6GB RAM +128GB ಮಾದರಿಗೆ ₹18,999 ದರ ಮತ್ತು 8GB RAM + 128GB ಆವೃತ್ತಿಗೆ ₹19,999 ದರ ಹೊಂದಿದೆ.

ರಿಯಲ್‌ಮಿ 10 Pro+ 5G
ಹೊಸ ಸ್ಮಾರ್ಟ್‌ಫೋನ್‌ನಲ್ಲಿ 6.7 ಇಂಚಿನ ಫುಲ್‌ಎಚ್‌ಡಿ+ ಡಿಸ್‌ಪ್ಲೇ, ಮೀಡಿಯಾಟೆಕ್ ಡೈಮೆನ್ಸಿಟಿ 1080 ಒಕ್ಟಾ ಕೋರ್ ಪ್ರೊಸೆಸರ್ ಜತೆಗೆ Mali-G68 MC4 GPU ಗ್ರಾಫಿಕ್ಸ್ ಬೆಂಬಲ ಹೊಂದಿದೆ. ಆ್ಯಂಡ್ರಾಯ್ಡ್ 13 ಆಧಾರಿತ ರಿಯಲ್‌ಮಿ UI 4.0 ಓಎಸ್ ಈ ಸ್ಮಾರ್ಟ್‌ಫೋನ್‌ನಲ್ಲಿದೆ ಎಂದು ಕಂಪನಿ ಹೇಳಿದೆ.

6GB / 8GB LPDDR4X ಎಂಬ ಎರಡು RAM ಜತೆಗೆ, 128GB ಸ್ಟೋರೇಜ್ ಹೊಸ ರಿಯಲ್‌ಮಿ 10 Pro+ 5G ಸ್ಮಾರ್ಟ್‌ಫೋನ್‌ನಲ್ಲಿದೆ. 108 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಜತೆಗೆ 8 ಮೆಗಾಪಪಿಕ್ಸೆಲ್ ಅಲ್ಟ್ರಾ ವೈಡ್ ಲೆನ್ಸ್, 2 ಮೆಗಾಪಿಕ್ಸೆಲ್ ಮ್ಯಾಕ್ರೊ ಕ್ಯಾಮೆರಾ ಇದರಲ್ಲಿದೆ. ಜತೆಗೆ 5,000mAh ಬ್ಯಾಟರಿ ಮತ್ತು 67W ಫಾಸ್ಟ್ ಚಾರ್ಜಿಂಗ್ ಇದರಲ್ಲಿದೆ.

ಹೈಪರ್‌ಸ್ಪೇಸ್ ಗೋಲ್ಡ್, ಡಾರ್ಕ್ ಮ್ಯಾಟರ್ ಮತ್ತು ನೆಬ್ಯುಲಾ ಬ್ಲೂ ಎಂಬ ಬಣ್ಣಗಳಿದ್ದು, 6GB RAM +128GB ಮಾದರಿಗೆ ₹24,999 ದರ ಮತ್ತು 8GB RAM + 128GB ಆವೃತ್ತಿಗೆ ₹25,999 ದರ ಹೊಂದಿದೆ.

ಆರಂಭಿಕ ಕೊಡುಗೆಯಾಗಿ ಸೀಮಿತ ಅವಧಿಗೆ ರಿಯಲ್‌ಮಿ ಇ–ಸ್ಟೋರ್, ಫ್ಲಿಪ್‌ಕಾರ್ಟ್ ಮತ್ತು ಅಧಿಕೃತ ರಿಟೇಲರ್ ಮೂಲಕ ಖರೀದಿಸುವ ಗ್ರಾಹಕರಿಗೆ ₹1,000 ಕ್ಯಾಶ್‌ಬ್ಯಾಕ್ ದೊರೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT