ಶನಿವಾರ, ಏಪ್ರಿಲ್ 4, 2020
19 °C

ರಿಯಲ್‌ಮಿ 5ಜಿ ಫೋನ್‌ ಬಿಡುಗಡೆ: ಆರಂಭಿಕ ಬೆಲೆ ₹37,999 

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ರಿಯಲ್‌ಮಿ ಎಕ್ಸ್‌50 ಪ್ರೋ 5ಜಿ ಫೋನ್‌

ಚೀನಾದ ಸ್ಮಾರ್ಟ್‌ಫೋನ್‌ ತಯಾರಿಕಾ ಕಂಪನಿ ರಿಯಲ್‌ಮಿ ಸೋಮವಾರ ಭಾರತದಲ್ಲಿ 5ಜಿ ಸ್ಮಾರ್ಟ್‌ಫೋನ್‌ ಬಿಡುಗಡೆಗೆ ಮಾಡಿದೆ. ಶಿಯೋಮಿ ರೆಡ್‌ಮಿ ಫೋನ್‌ಗಳಿಗೆ ದೇಶದಲ್ಲಿ ತೀವ್ರ ಪೈಪೋಟಿ ನೀಡುತ್ತಿರುವ ರಿಯಲ್‌ಮಿ 'ಎಕ್ಸ್‌50 ಪ್ರೋ 5ಜಿ' ಮೂಲಕ ಮಾರುಕಟ್ಟೆ ವಿಸ್ತರಿಸಿಕೊಳ್ಳಲು ಮುಂದಾಗಿದೆ. 

5ಜಿ ತಂತ್ರಜ್ಞಾನದ ವೇಗಕ್ಕೆ ಸಹಕಾರಿಯಾಗಲು ಕ್ವಾಲ್‌ಕಾಮ್‌ ಸ್ನ್ಯಾಪ್‌ಡ್ರ್ಯಾಗನ್‌ 865 ಪ್ರೊಸೆಸರ್‌ ಒಳಗೊಂಡಿದೆ. ಶೇ 40ರಷ್ಟು ಡೌನ್‌ಲೋಡ್‌ ವೇಗ ಹೆಚ್ಚಳವಾಗಿದ್ದು, 1.5 ಜಿಬಿಪಿಎಸ್‌ ವೇಗದಲ್ಲಿ ಡೌನ್‌ಲೋಡ್‌ ಮಾಡಬಹುದಾಗಿದೆ. 65ವ್ಯಾಟ್‌ ಸೂಪರ್‌ಡಾರ್ಟ್‌ ಚಾರ್ಜಿಂಗ್ ತಂತ್ರಜ್ಞಾನ ಅಳವಡಿಸಲಾಗಿದೆ. ಇದರಿಂದ 4,200 ಎಂಎಎಚ್‌ ಬ್ಯಾಟರಿ 35 ನಿಮಿಷಗಳಲ್ಲಿ ಪೂರ್ಣ ಚಾರ್ಜ್‌ ಆಗುತ್ತದೆ. 3 ನಿಮಿಷ ಚಾರ್ಜ್‌ ಮಾಡಿ 4 ಗಂಟೆ ಕರೆ ಮಾಡುವಷ್ಟು ಬ್ಯಾಟರಿ ಸಾಮರ್ಥ್ಯ ಹೊಂದಿದೆ. 

ರಸ್ಟ್ ರೆಡ್‌ ಮತ್ತು ಮಾಸ್‌ ಗ್ರೀನ್‌ ಬಣ್ಣಗಳಲ್ಲಿ ಲಭ್ಯವಿರುವ ಫೋನ್‌ ಆರಂಭಿಕ ಬೆಲೆ ₹37,999 ನಿಗದಿಯಾಗಿದೆ. ಸ್ಯಾಮ್‌ಸಂಗ್‌ ಸೂಪರ್‌ ಅಮೋಲೆಡ್‌ ಡಿಸ್‌ಪ್ಲೇ ನೀಡಲಾಗಿದೆ. 6.44 ಇಂಚು ಫುಲ್‌ ಎಚ್‌ಡಿ ಡಿಸ್‌ಪ್ಲೇ 2400*1080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಷನ್‌ ಹೊಂದಿದೆ. ಡ್ಯೂಯಲ್‌ ಪಂಚ್‌ಹೋಲ್‌ ಕ್ಯಾಮೆರಾ ನೀಡಲಾಗಿದೆ. 

ಸೆಲ್ಫಿಗಾಗಿ 32ಎಂಪಿ ಮತ್ತು 8ಎಂಪಿ ಸೂಪರ್‌ ವೈಡ್‌ ಆ್ಯಂಗಲ್‌ ಕ್ಯಾಮೆರಾ ಇದೆ. ಹಿಂಬದಿಯಲ್ಲಿ 64ಎಂಪಿ ಕ್ಯಾಮೆರಾ ಸೇರಿ ನಾಲ್ಕು ಕ್ಯಾಮೆರಾಗಳಿವೆ. 12ಎಂಪಿ ಟೆಲಿಫೋಟೊ ಲೆನ್ಸ್‌ (20X ಜೂಮ್‌), 8ಎಂಪಿ 119 ಡಿಗ್ರಿ ಅಲ್ಟ್ರಾ ವೈಡ್‌ ಮತ್ತು ಮ್ಯಾಕ್ರೊ ಲೆನ್ಸ್‌ ಹಾಗೂ ಬ್ಲ್ಯಾಕ್‌ ಆ್ಯಂಡ್‌ ವೈಟ್‌ ಪೋರ್ಟ್ರೇಟ್‌ ಲೆನ್ಸ್‌ ಇದೆ. ಸೂಪರ್‌ ನೈಟ್‌ಸ್ಕೇಪ್‌ 3.0, ವಿಡಿಯೊ ಸ್ಟೆಬಿಲೈಜರ್‌ ಆಯ್ಕೆಗಳಿವೆ. 

6ಜಿಬಿ, 8ಜಿಬಿ ಹಾಗೂ 12ಜಿಬಿ ರ್‍ಯಾಮ್‌ ಆಯ್ಕೆಗಳೊಂದಿಗೆ ಲಭ್ಯವಿದ್ದು, 12 ಜಿಬಿ ರ್‍ಯಾಮ್‌ ಮತ್ತು 256 ಸಂಗ್ರಹ ಸಾಮರ್ಥ್ಯ ಹೊಂದಿರುವ ಫೋನ್‌ಗೆ ₹44,999 ನಿಗದಿಯಾಗಿದೆ. ಇಂದಿನಿಂದಲೇ ಫೋನ್‌ ಖರೀದಿಗೆ ಲಭ್ಯವಿದೆ. ಇದೇ ವರ್ಷ ಜನವರಿಯಲ್ಲಿ ರಿಯಲ್‌ಮಿ ಎಕ್ಸ್‌50 5ಜಿ ಫೋನ್‌ ಚೀನಾದಲ್ಲಿ ಬಿಡುಗಡೆಯಾಗಿತ್ತು. 

ಹೊಸ 5ಜಿ ಫೋನ್‌ನಲ್ಲಿ ಏನೆಲ್ಲ ಇದೆ?

* ಡಿಸ್‌ಪ್ಲೇ: 6.44 ಸ್ಯಾಮ್‌ಸಂಗ್‌ ಸೂಪರ್‌ ಅಮೋಲೆಡ್‌ ಫುಲ್‌ ಎಚ್‌ಡಿ

* ಸಾಮರ್ಥ್ಯ: 6ಜಿಬಿ/ 8ಜಿಬಿ/ 12 ಜಿಬಿ ರ್‍ಯಾಮ್‌ + 128 ಜಿಬಿ/ 256 ಜಿಬಿ ಸಂಗ್ರಹ ಸಾಮರ್ಥ್ಯ

* ಕ್ಯಾಮೆರಾ: ಹಿಂಬದಿಯಲ್ಲಿ 4 ಕ್ಯಾಮೆರಾ (64ಎಂಪಿ+8ಎಂಪಿ+12ಎಂಪಿ+ಪೋರ್ಟ್ರೇಟ್‌) + ಮುಂದೆ 2 ಕ್ಯಾಮೆರಾ (16ಎಂಪಿ+8ಎಂಪಿ)

* ಪ್ರೊಸೆಸರ್‌: ಕ್ವಾಲ್‌ಕಾಮ್‌ ಸ್ನ್ಯಾಪ್‌ಡ್ರ್ಯಾಗನ್‌ 865 

* ಬ್ಯಾಟರಿ: 4,200 ಎಂಎಎಚ್‌, 65ವ್ಯಾಟ್‌ ಫಾಸ್ಟ್‌ ಚಾರ್ಜಿಂಗ್‌ 

* ಬೆಲೆ: ₹37,999 / ₹39,999 /₹44,999

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು